ದಾವಣಗೆರೆ ಆ.28
ಬುಧವಾರ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಆಗ್ನೇಯ
ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಶೇ.62.55
ಮತದಾನವಾಗಿದೆ.
ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಿಹರ ಮತ್ತು
ಜಗಳೂರು ಮತಕ್ಷೇತ್ರಗಳಲ್ಲಿನ ಒಟ್ಟು 32 ಮತಗಟ್ಟೆ
ಕೇಂದ್ರಗಳಲ್ಲಿ ಒಟ್ಟು 12813 ಪುರುಷ ಮತದಾರರ ಪೈಕಿ
8641 ಮತದಾನ ಮಾಡಿದ್ದು ಶೇ. 67.44 ಮತದಾನವಾಗಿದೆ. ಒಟ್ಟು
8143 ಮಹಿಳಾ ಮತದಾರರ ಪೈಕಿ 4471 ಮಹಿಳೆಯರು
ಮತದಾನ ಮಾಡಿದ್ದು ಒಟ್ಟು 13112 ಮತದಾರರು ಮತದಾನ
ಮಾಡಿದ್ದು ಶೇ.62.55 ಮತದಾನವಾಗಿದೆ.
ಬೆಳಿಗ್ಗೆ 10 ಗಂಟೆಗೆ ಶೇ.5 ರಷ್ಟು ಮತದಾನವಾಗಿದ್ದು,
ಮಧ್ಯಾಹ್ನ 12 ಗಂಟೆಗೆ ಶೇ19.54 ಮತದಾನವಾಗಿತ್ತು.
ಮಧ್ಯಾಹ್ನ 2 ಗಂಟೆಗೆ ಶೇ.32.20 ಮತದಾನವಾದರೆ ಸಂಜೆ 4
ಗಂಟೆಗೆ ಶೇ.52.80 ಮತದಾನವಾಗಿತ್ತು. ಮುಕ್ತಾಯದ
ಅವಧಿ 5 ಗಂಟೆಗೆ ಶೇ.62.55 ಮತದಾನವಾಗಿತ್ತು.
ಮಲೆಬೆನ್ನೂರು ಮತಗಟ್ಟೆ ಸಂಖ್ಯೆ 2 ಅತಿ ಹೆಚ್ಚು
ಶೇ.85.64 ಮತದಾನವಾಗಿದ್ದರೆ, ದಾವಣಗೆರೆ ಮತಗಟ್ಟೆ
ಸಂಖ್ಯೆ 13 ರಲ್ಲಿ ಅತಿ ಕಡಿಮೆ ಶೇ.42.56 ರಷ್ಟು ಮತದಾನವಾಗಿದೆ.
ಬುಧವಾರ ಬೆಳಿಗ್ಗೆ 8 ರಿಂದ ಆರಂಭವಾದ ಮತದಾನ ಎಲ್ಲೆಡೆ
ಶಾಂತಿಯುತವಾಗಿ ನಡೆಯಿತು. ಕೋವಿಡ್ 19 ಹಿನ್ನೆಲೆಯಲ್ಲಿ
ಮತದಾನಕ್ಕೂ ಮುನ್ನ ಎಲ್ಲ ಮತಗಟ್ಟೆಗಳಲ್ಲಿ ಆಶಾ
ಕಾರ್ಯಕರ್ತೆಯರು ಮತದಾರರಿಗೆ ಸ್ಯಾನಿಟೈಸರ್ ನೀಡಿ
ಥರ್ಮಲ್ ಸ್ಕ್ಯಾನರ್, ಪಲ್ಸ್ ಆಕ್ಸಿಮೀಟರ್‍ನಲ್ಲಿ ಪರೀಕ್ಷಿಸಿ
ಪ್ರತಿಯೊಬ್ಬರಿಗೂ ಮತದಾನ ಮಾಡುವ ಸಲುವಾಗಿ
ಕೈಗವಸುಗಳನ್ನು ನೀಡಲಾಯಿತು.
ಬುಧವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೈಸ್ಕೂಲ್
ಮೈದಾನದಲ್ಲಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.