ದಾವಣಗೆರೆ ಅ.29
2020-21ನೇ ಸಾಲಿನ ಸಾಮಥ್ರ್ಯವುಳ್ಳ ರಾಜ್ಯಗಳಲ್ಲಿ ಎಣ್ಣೆ ತಾಳೆ
ವ್ಯವಸಾಯ ಯೋಜನೆಯನ್ನು ಜಾರಿಗೊಳಿಸಿದ್ದು, ಜಿಲ್ಲೆಯಲ್ಲಿ
ತಾಳೆಬೆಳೆಯನ್ನು ಬೆಳೆಯುತ್ತಿರುವ ಎಲ್ಲಾ ರೈತರು
ಇದರ ಸದುಪಯೋಗ ಪಡೆದುಕೊಳ್ಳಬಹುದು.
ಈ ಯೋಜನೆಯಡಿ ತಾಳೆಬೆಳೆಯಲ್ಲಿ ಹೊಸಪ್ರದೇಶ
ವಿಸ್ತರಣೆ, ನಿರ್ವಹಣೆ, ಎತ್ತರವಾದ ತಾಳೆ ಮರಗಳಿಂದ
ತಾಳೆಹಣ್ಣು ಕಟಾವು ಮಾಡಲು ಸಹಾಯಧನ, ಡಿಸೇಲ್
ಪಂಪ್‍ಸೆಟ್‍ಗೆ ಸಹಾಯಧನ, ತಾಳೆಬೆಳೆ ಬೆಳೆದ ರೈತರಿಗೆ
ಬೋರ್‍ವೆಲ್‍ಗೆ ಸಹಾಯಧನ, ತಾಳೆಬೆಳೆ ಕತ್ತರಿಸುವ
ಯಂತ್ರಕ್ಕೆ ಸಹಾಯಧನ, ತಾಳೆಬೆಳೆಯಲ್ಲಿ ಅಂತರ
ಬೇಸಾಯಕ್ಕೆ ಸಹಾಯಧನ ಹಾಗೂ ಮೋಟರೈಸ್ಡ್ ಚೀಸಾಲ್‍ಗೆ
ಸಹಾಯಧನಕ್ಕೆ ಅವಕಾಶವಿರುತ್ತದೆ.
ರೈತರು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಹಿರಿಯ ಸಹಾಯಕ
ತೋಟಗಾರಿಕೆ ನಿರ್ದೇಶಕರು ಅಥವಾ ಸಂಬಂಧಪಟ್ಟ ಹೋಬಳಿ
ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ತೋಟಗಾರಿಕೆ
ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.