ದಾವಣಗೆರೆ ಅ.29
    ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಪರಿಸರ
ಸ್ನೇಹಿಯಾಗಿ ಆಚರಿಸುವ ಹಾಗೂ ಪರಿಸರ ಸಂರಕ್ಷಣೆ ಸಲುವಾಗಿ
ಪ್ಲಾಸ್ಟಿಕ್ ಧ್ವಜ ಮಾರಾಟ ಮತ್ತು ಉಪಯೋಗ
ಮಾಡಬಾರದೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ
ಮಂಡಳಿಯು ಕೋರಿದೆ.
ಒಂದು ವೇಳೆ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವುದು
ಕಂಡು ಬಂದಲ್ಲಿ ಅಂಗಡಿ ಮಾಲೀಕರುಗಳ ವಿರುದ್ದ ಪ್ಲಾಸ್ಟಿಕ್
ಅಧಿನಿಯಮ-2016 ಹಾಗೂ ಪರಿಸರ ಸಂರಕ್ಷಣಾ ಕಾಯ್ದೆ, 1986
ರಡಿಯಲ್ಲಿ ಕಾನೂನು ರೀತ್ಯಾ ಕ್ರಮ
ಕೈಗೊಳ್ಳಲಾಗುವುದು. ಆದ್ದರಿಂದ ಯಾವುದೇ ಕಾರಣಕ್ಕೂ
ಕನ್ನಡ ರಾಜ್ಯೋತ್ಸವ ದಿನಾಚರಣೆಯಂದು ಪ್ಲಾಸ್ಟಿಕ್
ಧ್ವಜಗಳನ್ನು ಮಾರಾಟ ಮತ್ತು ಉಪಯೋಗ ಮಾಡದಂತೆ
ಸಾರ್ವಜನಿಕರಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ
ಮಂಡಳಿಯ ಪರಿಸರ ಅಧಿಕಾರಿ ಕೆ.ಬಿ.ಕೊಟ್ರೇಶ್ ಮನವಿ
ಮಾಡಿದ್ದಾರೆ.

Leave a Reply

Your email address will not be published. Required fields are marked *