ಕೇರಳದ ವಿಪತ್ತು ನಿರ್ವಹಣೆಯಲ್ಲಿ ಇನ್ನು ಮುಂದೆ ತೃತೀಯಲಿಂಗಿಗಳು ಪ್ರಮುಖ ಪಾತ್ರ ವಹಿಸಲಿದ್ದು, ವಿಪತ್ತು ನಿರ್ವಹಣಾ ತಂಡಗಳಲ್ಲಿ ಇವರನ್ನು ಸೇರ್ಪಡೆಗೊಳಿಸಲು ಸರ್ಕಾರ ನಿರ್ಧರಿಸಿದೆ.

ತುರ್ತು ಸಂದರ್ಭದಲ್ಲಿ ಈ ಸಮುದಾಯದವರ ಸೇವೆಯನ್ನು ಬಳಸಿಕೊಳ್ಳಲು ರೂಪುರೇಷೆ ಸಿದ್ಧಪಡಿಸಲಾಗಿದ್ದು ಈ ಮೂಲಕ ರಾಜ್ಯದ ತುರ್ತುಸೇವೆಯನ್ನು ಮತ್ತಷ್ಟು ಬಲಪಡಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ಕೇರಳದಲ್ಲಿ ನೈಸರ್ಗಿಕ ವಿಕೋಪಗಳು ಹೆಚ್ಚಾಗುತ್ತಿದ್ದು, 2018 ಹಾಗೂ 2019ರಲ್ಲಿ ನೆರೆಯಿಂದ ಹೆಚ್ಚಿನ ಹಾನಿ ಉಂಟಾಗಿತ್ತು. ಈ ಕಾರಣದಿಂದಾಗಿ ದುರ್ಬಲ ವರ್ಗದವರೂ ಸೇರಿದಂತೆ ಸಮಾಜದ ಎಲ್ಲರನ್ನೂ ಒಳಗೊಂಡ ವಿಪತ್ತು ನಿರ್ವಹಣಾ ಮಾದರಿಯನ್ನು ರಚಿಸಲು ಕೇರಳ ಮುಂದಾಗಿದೆ. ದೇಶದಲ್ಲೇ ಮೊದಲ ಬಾರಿಗೆ ತೃತೀಯಲಿಂಗಿಗಳನ್ನು ಒಳಗೊಂಡ ವಿಪತ್ತು ನಿರ್ವಹಣಾ ಯೋಜನೆಯ ಅನುಷ್ಠಾನಕ್ಕೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಡಿಎಂಎ) ನಿರ್ಧರಿಸಿದೆ ಎಂದು ರಾಜ್ಯ ಯೋಜನಾ ಅಧಿಕಾರಿ ಜಾಯ್‌ ಜಾನ್‌ ಜಾರ್ಜ್‌ ತಿಳಿಸಿದರು.

Leave a Reply

Your email address will not be published. Required fields are marked *