ಅನಾದಿ ಕಾಲದಿಂದಲೂ..ಪ್ರತಿಧ್ವನಿಸುತ್ತಿರುವ ದೇವಳವಿದು, ಭಕ್ತರ ಇಷ್ಠಾರ್ಥಗಳ ನೆರವೇರಿಸುವ ಹಲವು ಪವಾಡ ಸದೃಶ್ಯಗಳ ತಾಣ, ಸಂಕಟಹರಿಣಿ, ಮಾತೃಕೆ. ಮೂಲ ಶಂಕರಗುಡ್ಡದ ಆದಿ ದೇವತೆ, ಇಲ್ಲಿ ನೆಲೆಸಿಹಳಿದ್ದಾಳೆ ಎನ್ನುವ ಪುರಾಣ ಕಥೆ ಎಂತಹವರಿಗೂ ಭಕ್ತಿಯ ಏಕಾಗ್ರತೆ ಹೆಚ್ಚಿಸಬಲ್ಲದು,
ಪ್ರತಿ ನವರಾತ್ರಿ ಇಂತಹ ದಿನಮಾನದಲ್ಲಿ ಪೂರ್ಣ ದರುಶನಧಾತೆಯಾಗಿರುವ ಈ ದೇವತೆಗೆ ಅದಾಗ ಅಲಂಕಾರಗೊಳಿಸಲಾಗುತ್ತದೆ ಒಂಬತ್ತು ದಿನಗಳಿಲ್ಲಿ ವಿಶೇಷ ಪೂಜೆಗಳು ನೆರವೇರುತ್ತದೆ, ಕೊನೆ ದಿನದ ನಡುರಾತ್ರಿ ಎರಡು ಮೊನಚು ಕತ್ತಿಯ ಮೇಲೆ ನಿಂದು ಕಾರ್ಣಿಕ ಹೇಳುವ ಗ್ರಾಮಿಣ ಸೋಗಡಿನ ಪರಂಪರೆ ಇಂದಿಗೂ ಸಾಗಿದೆ.
ಆಕೆ ತನ್ನ ಭಕ್ತರ ನೆರವಿಗೆ, ಆಪತ್ ಕಾಲದಲ್ಲಿ ಹುರೇ ಚೌಡಿ”ಯನ್ನು ಕಳಿಸುತ್ತಾಳೆ ಎನ್ನುವ ಪ್ರತಿತಿ ಇದೆ, ಇದರಂತೆ ಅಲ್ಲೇ ಪಕ್ಕದಲ್ಲಿರುವ ಹುರೇ ಚೌಡಿ’ ಗೂ ಪೂಜೆ ಸಲ್ಲಿಸುವ ಭಕ್ತರು ಹೇಳಿಕೊಂಡ ಹರಕೆಗಳು ಯಾವ ಅನುಮಾನವೇ ಇಲ್ಲದೇ ಪೂರ್ಣಗೊಳ್ಳುತ್ತದೆ ಎನ್ನುವ ಸಾವಿರಾರು ಭಕ್ತರು. ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಇಲ್ಲಿ ಜಮಾವಣೆಯಾಗುತ್ತಾರೆ, ಅಲ್ಲದೇ ತಮ್ಮ ಭಕ್ತಿಯಿಂದ ಬೇಡಿಕೊಂಡು ಮರಳುತ್ತಾರೆ, ಹೀಗೆ ದಯಾಸ್ವರೂಪಳು, ದಯಾದೃಷ್ಟಿಯುಳ್ಳವಳು, ದುಃಖವನ್ನು ನಾಶ ಮಾಡುವವಳು, ಸಮಸ್ತ ಆಪತ್ತುಗಳಿಂದಲೂ ಸಂರಕ್ಷಿಸುವವಳು ಎಂದು ಅಪಾರ ಭಕ್ತ ಸಮೂಹ ಹೇಳುತ್ತದೆ .ಇಂತಹ ವಿಶೇಷ ಭಕ್ತಿಯ ತಾಣ ಶಿವಮೊಗ್ಗದಿಂದ ೯ಕಿ,ಮೀ ಕ್ರಮಿಸಿದರೇ ಸಿಗುವ ಗಾಜನೂರಿನ ತುಂಗಾತಟದಲ್ಲಿರುವುವಳೇ “ದೊಣ್ಣೆ ಕೆಂಚಮ್ಮ” ಈಕೆಯ ಆದೇಶದ ಪರಿಪಾಲಕಳೇ ಹುರೇ ಚೌಡಿ” ದೇವಳ, ಇಲ್ಲಿ ಯಾವುದೇ ಆಡಂಬರವಿಲ್ಲದ ಸರಳ ಪೂಜೆಗಳು ನಿತ್ಯವೂ ಸಾಂಗವಾಗುತ್ತಿದೆ