ದಾವಣಗೆರೆ ಅ,31
ಜಿಲ್ಲಾಡಳಿತ ಭವನದಲ್ಲಿಂದು ಭಾರತ ಏಕೀಕರಣ ಪಿತಾಮಹ ಸರ್ದಾರ್ ವಲ್ಲಭಭಾಯ್ ಪಟೇಲ್
ಸ್ಮರಣಾರ್ಥ ಪ್ರತಿಜ್ಞಾ ವಿಧಿ ಹಾಗೂ ದಾರ್ಶನಿಕ ಸಂತ ವಾಲ್ಮೀಕಿ ಜಯಂತಿಯನ್ನು ಸರಳವಾಗಿ
ಆಚರಿಸಲಾಯಿತು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸಿಇಓ ಪದ್ಮ ಬಸವಂತಪ್ಪ ಹಾಗೂ ವಿವಿಧ ಸಮಾಜದ
ಮುಖಂಡರು ಪುಷ್ಪಾರ್ಚನೆಯ ಮೂಲಕ ವಾಲ್ಮೀಕಿ ಭಾವಚಿತ್ರಕ್ಕೆ ವಂದಿಸಿದರು ನಂತರ ರಾಷ್ಟ್ರೀಯ
ಏಕತೆಯ ಪ್ರತಿಜ್ಞಾ ವಿಧಿ ಬೋಧಿಸಲಾಯಿತು
ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಕೋಶದ ಅಧಿಕಾರಿ ನಜ್ಮ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ
ಲಕ್ಷೀಕಾಂತ್,ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸುರೇಶ್ ರೆಡ್ಡಿ ನಿರ್ಮಿತಿ ಕೇಂದ್ರದ
ವ್ಯವಸ್ಥಾಪಕ ರವಿ,ನಾಯಕ ಸಮಾಜದ ಆನಂದ ಗುರೂಜಿ,ಗುಮ್ಮನೂರು
ಮಲ್ಲಿಕಾರ್ಜುನ್,ಬಿ.ವೀರಣ್ಣ, ಹದಡಿ ಹಾಲಪ್ಪ,ಶ್ಯಾಗಲೆ ಸತೀಶ್,ಮಂಜುನಾಥ್ ಇದ್ದರು.