ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಪೋಟೋ ಮತ್ತು ವೀಡಿಯೋಗ್ರಾಫರ್ ಸಂಘದ ವತಿಯಿಂದ ಇಂದು ಅಂಗಡಿ ಬಂದ್ ಮಾಡುವುದರ ಮೂಲಕ ಬೆಂಗಳೂರಿನಲ್ಲಿ ನಡೆಯುವ ಪ್ರತಿಭಟನೆಗೆ ಬೆಂಬಲವನ್ನು ವ್ಯಕ್ತಪಡಿಸಿದರು. ಬೆಂಗಳೂರು ಛಾಯಾಗ್ರಾಹಕರಿಗೆ ಶುಭಕಾರ್ಯಗಳು ಮತ್ತು ಇನ್ನಿತರ ಕಾರ್ಯಕ್ರಮಗಳ ಸರಿಯಾಗಿ ನಡೆಯದೆ ಫೋಟೋಗ್ರಾಫರ್ಸ್ ಮತ್ತು ವಿಡಿಯೋಗ್ರಾಫರ್ ದುಸ್ಥಿತಿಗೆ ಹೋಗಿರುವ ಛಾಯಾಗ್ರಾಹಕರು 1ದಿನದ ಊಟಕ್ಕೂ ಸಹ ಪರದಾಡುವಂತಾಗಿದೆ ಮನೆಯಲ್ಲಿ ವಿದ್ಯುತ್ ಮತ್ತು ಬಾಡಿಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ತಗಲುವ ವೆಚ್ಚವನ್ನು ಭರಿಸಲಾಗದೆ ಛಾಯಾಗ್ರಾಹಕರು ತುಂಬಾ ದುಃಖದಲ್ಲಿದ್ದಾರೆ ಸರಕಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳದೆ ಬೇಜವಾಬ್ದಾರಿತನವನ್ನು ತೋರಿಸಿದ ಕಾರಣ ಕೆಪಿಎ ಕರ್ನಾಟಕ ಪೋಟೊಗ್ರಾಫರ ಅಸೋಸಿಯೇಶನ್ ಬಂದ್ ಗೆ ಕರೆ ಕೊಟ್ಟಿತ್ತು ಹಾಗಾಗಿ 31-10-2020 ರಂದು 1ದಿನದ ಛಾಯಾಗ್ರಹಣ ಬಂದ್ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಬೆಂಗಳೂರು ಚಲೋ. ಕರ್ನಾಟಕ ಛಾಯಾಗ್ರಾಹಕರ ಸಂಘ ಮತ್ತು ಜಿಲ್ಲಾ ಸಂಘಗಳು ತಾಲ್ಲೂಕು ಸಂಘಗಳು ಸ್ಟುಡಿಯೋಗಳನ್ನು ಬಂದ್ ಮಾಡುವ ಮೂಲಕ ಛಾಯಾಗ್ರಹಣ ಬಂದ್ ಯಶಸ್ವಿಯಾಯಿತು.

ಮುಖ್ಯಮಂತ್ರಿಗಳ ಗೃಹ ಕಚೇರಿಯ ಸಿಬ್ಬಂದಿ ವರ್ಗ ಪ್ರತಿಭಟನೆಯ ನಡೆಯುವ ಸ್ಥಳಕ್ಕೆ ಆಗಮಿಸಿ ನಮ್ಮ ತಂಡವನ್ನು ಗೃಹ ಕಚೇರಿಗೆ ಕರೆದೊಯ್ದು ನಮ್ಮ ಬೇಡಿಕೆಗಳನ್ನು ಕೇಳಿ ಅವರಲ್ಲಿರುವ ಪ್ರಶ್ನೆಗಳನ್ನು ಕೇಳಿ ಪರಿಹರಿಸಿಕೊಂಡು ನಮ್ಮ ಈ ದಿನದ ಎಲ್ಲಾ ಜಿಲ್ಲೆಗಳ ಸಂಘಟನಾತ್ಮಕ ಪ್ರಕ್ರಿಯೆಗಳ ವರದಿ ಅವರ ಗಮನಕ್ಕೆ ಬಂದಿರುವುದನ್ನು ತಿಳಿಸಿ ಮತ್ತು ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಹೇಳಿ ಮತ್ತು ಮುಖ್ಯಮಂತ್ರಿಗಳ ಬೇಟೆಗೆ ದಿನಾಂಕವನ್ನು ನಿಶ್ಚಯ ಮಾಡಿ ತಮ್ಮ ಗಮನಕ್ಕೆ ತರುವುದಾಗಿ ಸಕಾರಾತ್ಮಕವಾಗಿ ಸ್ಪಂದನೆ ದೊರೆತಿರುವುದು ಸಂತೋಷದ ವಿಷಯ ಎಂದು ಹೇಳಿದರು

Leave a Reply

Your email address will not be published. Required fields are marked *