ದಾವಣಗೆರೆ ನ.11
ಜನನ-ಮರಣ ನೋಂದಣಿ ನಿಯಮಗಳು ಹಾಗೂ ಇ-ಜನ್ಮ
ತಂತ್ರಾಂಶ ನಿರ್ವಹಣೆ ಕುರಿತು ಮಂಗಳವಾರ ಜಿಲ್ಲಾಡಳಿತ
ಭವನದಲ್ಲಿ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಾಗಾರವನ್ನು
ಅಪರ ಜಿಲ್ಲಾಧಿಕಾರಿಗಳಾದ ಪೂಜಾರ್ ವೀರಮಲ್ಲಪ್ಪ ಹಾಗೂ
ಮಹಾನಗರಪಾಲಿಕೆ ಆಯುಕ್ತರಾದ ವಿಶ್ವನಾಥ ಪಿ. ಮುದಜ್ಜಿ
ಉದ್ಘಾಟಿಸಿದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳು ಹಾಗೂ ಅಪರ ಜಿಲ್ಲಾ
ಜನನ-ಮರಣ ನೋಂದಣಾಧಿಕಾರಿಗಳಾದ ವೈ.ಎಂ.ರಾಜೇಶ್ವರಿ
ಮಾತನಾಡಿ, ಜನನ-ಮರಣ ನೋಂದಣಿಯು ಅತ್ಯಂತ
ಮಹತ್ವದ ಕಾರ್ಯಕ್ರಮವಾಗಿದ್ದು ಜಿಲ್ಲೆಯಲ್ಲಿ ಒಟ್ಟು 928
ಜನನ-ಮರಣ ನೋಂದಣಿ ಘಟಕಗಳು ಹಾಗೂ 114
ಉಪನೋಂದಣಿ ಘಟಕಗಳು ಸೇರಿದಂತೆ ಒಟ್ಟಾಗಿ 1042 ಜನನ-
ಮರಣ ನೋಂದಣಿ ಘಟಕಗಳಿವೆ. ಜನನ-ಮರಣ ಘಟನೆಗಳು
ಇ-ಜನ್ಮ ತಂತ್ರಾಂಶದಲ್ಲಿ ಯಶಸ್ವಿಯಾಗಿ
ನೋಂದಣಿಯಾಗುತ್ತಿದ್ದು ಜನರಿಗೆ ಸಕಾಲದಲ್ಲಿ ಪ್ರಮಾಣ
ಪತ್ರಗಳು ದೊರೆಯುತ್ತಿರುವುದು ಈ ತಂತ್ರಾಂಶದ
ವಿಶೇಷತೆಯಾಗಿರುತ್ತದೆ ಎಂದರು.
ಇ-ಜನ್ಮ ನೋಂದಣಿ ಕಾರ್ಯದಿಂದ ದೇಶದ ಜನಸಂಖ್ಯೆ
ಜಿಲ್ಲಾವಾರು ಜನನ ಪ್ರಮಾಣವನ್ನು ಅಂದಾಜಿಸಲು, ನವಜಾತ ಶಿಶು
ಹಾಗೂ ತಾಯಿಯ ಯೋಗಕ್ಷೇಮ, ರೋಗ ನಿರೋಧಕ
ಚುಚ್ಚುಮದ್ದು ಕಾರ್ಯಕ್ರಮಗಳಿಗೆ, ವಿವಾಹ ವಯಸ್ಸಿನ
ಅಧ್ಯಯನ, ಲಿಂಗಾನುಪಾತ ಅಂದಾಜಿಸಲು ಹಾಗೂ ಇನ್ನಿತರೇ
ಜನಗಣತಿಯ ಪ್ರಮುಖ ಅಂಕಿ ಅಂಶಗಳನ್ನು ಪಡೆಯಲು

ಹಾಗೂ ಯೋಜನೆಗಳನ್ನು ರೂಪಿಸಲು ನೋಂದಣಿ ಕಾರ್ಯ
ಅವಶ್ಯಕವಾಗಿದೆ.
ಆರೋಗ್ಯ ಸಂಸ್ಥೆಗಳಲ್ಲಿ ಸಂಭವಿಸುವ ಜನನ-ಮರಣ
ಘಟನೆಗಳನ್ನು ತಡ ನೋಂದಣಿಗೆ ಅವಕಾಶ ಮಾಡಿ
ಕೊಡದೇ ಕಡ್ಡಾಯವಾಗಿ 21 ದಿನಗಳೊಳಗಾಗಿ ನೋಂದಣಿ
ಮಾಡಬೇಕು ಹಾಗೂ ಕಾನೂನು ಭಾಗದ ದಾಖಲೆಗಳನ್ನು
ತಮ್ಮ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳದೇ ನಿಯಮಾನುಸಾರ
ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಲು ಮತ್ತು ಮರಣ ಕಾರಣ
ಪ್ರಮಾಣ ಪತ್ರಗಳನ್ನು ಆಯಾ ಮಾಹೆಯ ನಂತರ
ನೇರವಾಗಿ ಮುಖ್ಯ ಜನನ-ಮರಣ ನೋಂದಣಾಧಿಕಾರಿಗಳಿಗೆ
ಸಲ್ಲಿಸುವಂತೆ ತಿಳಿಸಿದರು.
ಸಹಾಯಕ ಸಾಂಖ್ಯಿಕ ಅಧಿಕಾರಿ ವಿಜಯ್ ಬಡಿಗೇರ್ ಇವರು ಜನನ-
ಮರಣ ನೋಂದಣಿ ನಿಯಮಗಳು ಹಾಗೂ ಇ-ಜನ್ಮ
ತಂತ್ರಾಂಶ ನಿರ್ವಹಣಿ ಕುರಿತು ತರಬೇತಿಯನ್ನು ಆರೋಗ್ಯ
ಇಲಾಖೆಯ ಉಪನೋಂದಣಾಧಿಕಾರಿಗಳು, ಡಾಟಾ ಎಂಟ್ರಿ
ಆಪರೇಟರ್ಸ್ ಹಾಗೂ ಕಂದಾಯ ಇಲಾಖೆಯ ಉಪತಹಶೀಲ್ದಾರ್,
ಕಂದಾಯ ನಿರೀಕ್ಷಕರು, ಮತ್ತು ಗ್ರಾಮ ಲೆಕ್ಕಾಧಿಕಾರಿಗಳಿಗೆ
ಹಾಗೂ ಡಾಟಾ ಎಂಟ್ರಿ ಆಪರೇಟರ್ಸ್‍ಗಳಿಗೆ ನೀಡಿದರು.
ಮಹಾನಗರಪಾಲಿಕೆಯ ಜನನ-ಮರಣ ನೋಂದಣಾಧಿಕಾರಿ
ಧರಣೇಶ್ ಕೆ.ಎಲ್. ಹಾಗೂ ಸಾಂಖ್ಯಿಕ ಇಲಾಖೆಯ ಎಲ್ಲಾ
ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

Leave a Reply

Your email address will not be published. Required fields are marked *