ದಾವಣಗೆರೆ ನ.11
ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿ ಪ್ರಾಧಿಕಾರದ
ಅಧ್ಯಕ್ಷರಾದ ಪವಿತ್ರ ರಾಮಯ್ಯ ಇವರ ಅಧ್ಯಕ್ಷತೆಯಲ್ಲಿ
ಪ್ರಾಧಿಕಾರದ ಸಭಾಂಗಣದಲ್ಲಿ ಬುಧವಾರ ನೀರು ಸಲಹಾ ಸಮಿತಿ
ಸಭೆ ನಡೆಯಿತು.
ಈ ಒಂದು ಸಭೆಯಲ್ಲಿ ಭದ್ರಾ ಯೋಜನೆಯ ಅಚ್ಚುಕಟ್ಟು
ವ್ಯಾಪ್ತಿಯ 2020-21ರ ಮುಂಗಾರು ಹಂಗಾಮಿನ ಬೆಳೆಗಳಿಗೆ
ಭದ್ರಾ ಜಲಾಶಯದಿಂದ ಜುಲೈ ತಿಂಗಳ 22 ರಿಂದ ನೀರು
ಹರಿಸಲಾಗುತ್ತಿದ್ದು, ಪ್ರಾಧಿಕಾರದ ಬೈಲಾ ಪ್ರಕಾರ 120
ದಿನಗಳು ಮಾತ್ರ ನೀರು ಹರಿಸಬೇಕಿದೆ. ಬರುವ ನವೆಂಬರ್ 19ಕ್ಕೆ
ಅವಧಿ ಪೂರ್ಣಗೊಳ್ಳಲಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ
ಅಚ್ಚುಕಟ್ಟು ವ್ಯಾಪ್ತಿಯ ರೈತರೊಂದಿಗೆ ಸುದೀರ್ಘ ಚರ್ಚೆ
ನಡೆಸಿ ಸೂಕ್ತ ಸಲಹೆ ಸೂಚನೆ ಆಲಿಸಲಾಯಿತು. ನಂತರ ಬರುವ
ನವೆಂಬರ್ 20ರ ಮಧ್ಯರಾತ್ರಿ 12 ಗಂಟೆಗೆ ನೀರು ನಿಲ್ಲಿಸಲು
ಸಭೆಯಲ್ಲಿ ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಕಾಡ ನಿರ್ದೇಶಕರಾದ ಷಡಾಕ್ಷರಿ,
ರುದ್ರಮೂರ್ತಿ ಹಾಗೂ ರೈತ ಮುಖಂರಾದ ತೇಜಸ್ವಿ ಪಟೇಲ್,
ನೀರು ಬಳಕೆದಾರರ ಸಹಕಾರ ಮಹಾಮಂಡಳಿಯ
ನಿರ್ದೇಶಕರಾದ ದ್ಯಾವಪ್ಪರೆಡ್ಡಿ, ಮುಖ್ಯ ಇಂಜಿನಿಯರ್ ಯತೀಶ್
ಚಂದ್ರ, ಕಾಡ ಆಡಳಿತಾಧಿಕಾರಿ ಕೃಷ್ಣಮೂರ್ತಿ ಇನ್ನೂ
ಹಲವಾರು ಪ್ರಮುಖರು ಹಾಗೂ ರೈತ ಮುಖಂಡರು
ಉಪಸ್ಥಿತರಿದ್ದರು.
