ಹೊನ್ನಾಳಿ ತಾಲ್ಲೂಕು ಪಂಚಾಯತ್ ಸಾಮಥ್ರ್ಯ ಸೌಧದಲ್ಲಿ ದಿನಾಂಕ:11.11.2020 ರಂದು ಮಕ್ಕಳ ಹಕ್ಕುಗಳ ಕುರಿತ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕುಗಳ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳ ಜೊತೆಗಿನ ಜಂಟಿ ಸಮಾಲೋಚನ ಸಭೆಯನ್ನು ಆಯೋಜಿಸಲಾಗಿತ್ತು.
ಶ್ರೀಯುತ. ಮಹಾಂತಸ್ವಾಮಿ ಪೂಜಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಹೊನ್ನಾಳಿ ಇವರು ಸಭೆಗೆ ಎಲ್ಲರನ್ನು ಆಹ್ವಾನಿಸುವುದರ ಮೂಲಕ ಸಭೆಗೆ ಅಧಿಕೃತವಾಗಿ ಚಾಲನೆ ನೀಡಿದರು
ಸಭೆಯನ್ನು ಶ್ರೀಯುತ. ತುಷಾರ್ ಬಿ ಹೊಸೂರು, ಮಾನ್ಯ ತಹಶಿಲ್ದಾರರು ಮತ್ತು ತಾಲ್ಲೂಕು ದಂಡಾಧಿಕಾರಿಗಳು, ಹೊನ್ನಾಳಿ ಇವರು ಸಸಿಗೆ ನೀರು ಹಾಕುವ ಮೂಲಕ ಉದ್ಘಾಟಿಸಿದರು ಇವರೊಂದಿಗೆ ಸಭೆಯ ಗಣ್ಯರು ಹಾಗೂ ತಾಲ್ಲೂಕಿನ ಇತರ ಅಧಿಕಾರಿಗಳು ಕೈಜೋಡಿಸಿದರು.

ಸಭೆಯ ಅಧ್ಯಕ್ಷತೆಯನ್ನು ಶ್ರೀಯುತ. ಡಿ. ಶಂಕರಪ್ಪನವರು, ಮಾನ್ಯ ಸದಸ್ಯರು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ, ಬೆಂಗಳೂರು ಇವರು ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀಮತಿ. ತನುಜಾ. ಟಿ. ಸವದತ್ತಿ, ಮಾನ್ಯ ತಹಶಿಲ್ದಾರರು ಮತ್ತು ತಾಲ್ಲೂಕು ದಂಡಾಧಿಕಾರಿಗಳು, ನ್ಯಾಮತಿ, ಶ್ರೀಯುತ. ಕೆ.ಸಿ ಬಸವರಾಜಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿ.ಮ.ರ.ಘ, ದಾವಣಗೆರೆ, ಶ್ರೀಯುತ. ತಿಪ್ಪೇಸ್ವಾಮಿ, ಮಾನ್ಯ ಪೊಲೀಸ್ ಉಪ ನಿರೀಕ್ಷಕರು, ಹೊನ್ನಾಳಿ, ಶ್ರೀಯುತ. ಹನುಮಂತಪ್ಪ ಶೀರಿಹಳ್ಳಿ, ಮಾನ್ಯ ಪೊಲೀಸ್ ಉಪ ನಿರೀಕ್ಷಕರು, ನ್ಯಾಮತಿ ಮತ್ತು ಶ್ರೀಯುತ. ರೂಪ್ಲಾ ನಾಯ್ಕ್, ನಿಕಟ ಪೂರ್ವ ಸದಸ್ಯರು, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಶ್ರೀಯುತ. ರಾಜೀವ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊನ್ನಾಳಿ, ಶ್ರೀಯುತ. ದೊಡ್ಡ ಬಸವರಾಜ್, ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಹೊನ್ನಾಳಿ ಇವರುಗಳು ಸಭೆಯಲ್ಲಿ ಹಾಜರಿದ್ದರು.
ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದಂತೆ ಕಾರ್ಯರೂಪಕ್ಕೆ ತರುವಲ್ಲಿ ಇತರ ಇಲಾಖೆಗಳ ಪಾತ್ರ ಮತ್ತು ವ್ಯಾಪ್ತಿಯನ್ನು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು, ಮಕ್ಕಳ ಹಕ್ಕುಗಳ ರಕ್ಷಣೆ ಕೇವಲ ಒಂದೇ ಇಲಾಖೆಗೆ ಸಂಬಂಧಿಸದೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಪಂಚಾಯತ್ ರಾಜ್ ಇಲಾಖೆ ಹಾಗೂ ಪೊಲೀಸ್ ಇಲಾಖೆಗಳು ಹೀಗೆ ಎಲ್ಲಾ ಇಲಾಖೆಗಳು ಸಹ ಪ್ರತೇಕ್ಷ ಮತ್ತು ಪರೋಕ್ಷವಾಗಿ ಈ ಹಕ್ಕುಗಳನ್ನು ರಕ್ಷಿಸುವ ಮತ್ತು ಕಾರ್ಯರೂಪಕ್ಕೆ ತರುವ ಜವಾಬ್ದಾರಿಯನ್ನು ಹೊಂದಿವೆ ಎಂದು ಮತೊಮ್ಮೆ ತಿಳಿಸುತ್ತ ಶ್ರೀಯುತ. ಡಿ. ಶಂಕರಪ್ಪನವರು, ಮಾನ್ಯ ಸದಸ್ಯರು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ, ಬೆಂಗಳೂರು ಇವರು ಸಭೆಯಲ್ಲಿ ಹಾಜರಿದ್ದ ಹೊನ್ನಾಳಿ ಮತ್ತು ನ್ಯಾಮತಿ ಜಂಟಿ ತಾಲ್ಲೂಕುಗಳ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಜೊತೆ ಹಕ್ಕುಗಳನ್ನು ಜಾರಿಗೆ ತರುವಲ್ಲಿ ಆಗುತ್ತಿರು ತೊಂದರೆಗಳನ್ನು ಕೂಲಂಕಷವಾಗಿ ಚರ್ಚಿಸಿದರು.
ಕೊನೆಯದಾಗಿ ಶ್ರೀಮತಿ. ರೇಣುಕಾ ಎಂ. ದೇವರೆಡ್ಡಿ, ಹಿರಿಯ ಮೇಲ್ವಿಚಾರಕಿ, ಶಿಶು ಅಭಿವೃದ್ಧಿ ಯೋಜನೆ, ಹೊನ್ನಾಳಿ ಇವರು ಕಾರ್ಯಕ್ರಮದ ವಂದನಾರ್ಪಣೆಯನ್ನು ನೆರವೇರಿಸಿದರು.
