ನೆನಪಿದೆಯಾ ನಿನಗೆ. ನನ್ನ ನಿನ್ನ ಬಾಳು ಒಂದಾದ ಗಳಿಗೆ. ನೆನಪಿದೆಯಾ ಗೆಳತಿ
ಮುಸ್ಸಂಜೆ ರಂಗಲ್ಲಿ ನಾವಿಬ್ಬರು ಸೇರಿ ಒಂದಾಗಿ ನಲಿದಿದ್ದು ನೆನಪಿದೆಯಾ
ಓಡುವ ಚಂದಿರನ ನೋಡುತ್ತಾ ನಾವಿಬ್ಬರು ಹೂಬನದಲ್ಲಿ ಸಾಗಿದ್ದು ನೆನಪಿದೆಯಾ.
ಬೆಳದಿಂಗಳ ಬೆಳಕಲ್ಲಿ ಶ್ವೇತ ನೈದಿಲೆಯು ನಿನ್ನನ್ನೇ ಕೆಣಕಿತ್ತು ನೆನಪಿದೆಯಾ.
ತಂಗಾಳಿಯ ಹವೆಯಲಿ ಬಿಸಿ ಮುತ್ತೊಂದನ್ನು ನೀಡಿ ನೀ ಮೆತ್ತನೆ ಓಡಿದ್ದು ನೆನಪಿದೆಯಾ.
ಖಾಲಿ ಮನದಲ್ಲಿ ಸವಿ ಕನಸುಗಳ ರಂಗೇರಿಸಿ ನೀ ಶೃಂಗಾರದ ರಥವಾಗಿದ್ದು ನೆನಪಿದೆಯಾ.
ಮಧು ಪಾತ್ರೆಯ ಜೇನನ್ನು ನಾವಿಬ್ಬರು ಸೇರಿ ಒಂದಾಗಿ ಹೀರಿದ್ದು ನೆನಪಿದೆಯಾ.
ಮನೋಗತ ಒಲವ ಮಹಲಿನಲಿ ದಿನಗಳನು ನಿಮಿಷದಂತೆ ಕಳೆದಿದ್ದು ನೆನಪಿದೆಯಾ.
ಬಣ್ಣಗಳ ಚಿತ್ತಾರದಲ್ಲಿ ನಾವಿಬ್ಬರು ಒಂದಾಗಿ ಬಣ್ಣದ ಕನಸುಗಳ ಕಂಡಿದ್ದು ನೆನಪಿದೆಯಾ.
ಪಿಸುಮಾತುಗಳ ಸಲ್ಲಾಪದಲ್ಲಿ ನಾವಿಬ್ಬರು ಪುಳಕಿತರಾಗಿ ತುಂಟಾಟವಾಡಿದ್ದು ನೆನಪಿದೆಯಾ.
ಆಕಾಶದ ತಾರೆಗಳನು .ಎಣಿಸುತಾ ತಂಪಿರುಳನು ಕರಗಿಸಿದ್ದು ನೆನಪಿದೆಯಾ
ಒಲವಿನ ಕಾವ್ಯಕೆ ಪದಗಳನು ಮೋಹದಿ ಪೋಣಿಸಿದ್ದು ನೆನಪಿದೆಯಾ.
ನನ್ನೆದೆಯಲಿ ದನಿಸುವ ನಿನ್ನದೇ ಹೆಸರನು ನೀ ಆಲಿಸುತಾ ಅಪ್ಪಿದ್ದು ನೆನಪಿದೆಯಾ
ನನ್ನೆದೆಯ ಅಂಗಳದಲಿ ನಿನ್ನೊಲುಮೆಯ ಹೂ ಅರಳಿಸಿದ್ದು ನೆನಪಿದೆಯಾ.
ನೆನಪಿದೆಯಾ ಗೆಳತಿ ನೆನಪಿದೆಯಾ ನಿನಗೆ
ನಿನ್ನ ಬಾಹುಬಂಧನದಲಿ ಸಂತೈಸುತ ನೀ ಸೌಮ್ಯದ ನಗುವು ಚೆಲ್ಲಿದ್ದು ನೆನಪಿದೆಯಾ.
ಅಮೃತವು ನೀ ಜೊತೆಯಾದರೆ ಅದುವೇ ಸಂಭ್ರಮವು
ನೀ ಮರೆತರೆ ಅದುವೇ ಶಾಪವು ನೀ ಮರೆತರೆ ಆನಿಮಿಶವೆ ವಿಷವು .
ನೀ ಮರೆಯದಿರು ಒಲವೆ.
ನೆನಪನ್ನು ಮರೆಯದಿರು ಗೆಳತಿ ನನ್ನ ನಿನ್ನ
ಬಾಳ ಬಂದ ಒಂದಾದ ಗಳಿಗೆ.
ಸುದ್ದಿ ಸಾಮ್ರಾಜ್ಯದ ಸಾಮ್ರಾಟ
ಜಿ ಕೆ ಹೆಬ್ಬಾರ್ ಶಿಕಾರಿಪುರ.