ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಅರಬಗಟ್ಟೆ ಗ್ರಾಮ ಪಂಚಾಯಿತಿ ಸುಂಕದಕಟ್ಟೆ ಗ್ರಾಮದಿಂದ 5ನೇ ಬಾರಿ ಗೆದ್ದು 22/12/2020 ರಂದು ಗ್ರಾಮ ಪಂಚಾಯಿತಿಗೆ ನಿಂತು 6ನೇ ಬಾರಿಗೆ ಸ್ಪರ್ದಿಸಿ ಮತದಾನದ ಫಲಿತಾಂಶ ಬರುವುದಕ್ಕು ಮುಂಚಿತವಾಗಿ ಮರಣ ಹೊಂದಿದ ಸುಂಕದಕಟ್ಟೆ ಗ್ರಾಮದ ದಿವಂಗತ ಶ್ರೀ ಡಿ ಬಸಣ್ಣನವರ ಪುಣ್ಯ ಸ್ಮರಣೆ ಅಂಗವಾಗಿ 1/1/2021 ರಂದು ಇಂದು ಧರ್ಮ ಸಭೆಯನ್ನು ಹಮ್ಮಿಕೊಂಡಿದ್ದರು. ಹೊನ್ನಾಳಿ ಹಿರೇಮಠದ ಶ್ರೀ ಒಡೆಯರ್
ಚನ್ನಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು.
ನಂತರ ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ ಶ್ರೀ ದಿವಂಗತ ಬಸಣ್ಣನವರ ಪುಣ್ಯಸ್ಮರಣೆ ಹಾಗೂ ಧರ್ಮಸಭೆಗೆ
ನನ್ನನ್ನು ಕರೆದಿದ್ದೀರಿ ಆದರೆ ಇಂದೇ ಅವರ ಗ್ರಾಮ ಪಂಚಾಯಿತಿಯ ಚುನಾವಣೆಯ 6ನೇ ಫಲಿತಾಂಶ ವಿಜಯ ಮಾಲೆ ಬಂದಿರುವುದು ಸಂತೋಷ ಮತ್ತು ದುಖಃದ ಸಂಗತಿ ಎಂದು ಹೇಳುತ್ತಾ, ಅವರನ್ನು ಕಳೆದುಕೊಂಡ ಅವರ ಧರ್ಮಪತ್ನಿ ಹಾಗೂ ಅವರ 2 ಮಕ್ಕಳಿಗೂ ಶ್ರೀ ಚನ್ನೇಶನು, ಸುಂಕದಕಟ್ಟೆ ಮಂಜುನಾಥಸ್ವಾಮಿ ಮತ್ತು ಅಣ್ಣಪ್ಪ ಸ್ವಾಮಿಯವರು ಅವರ ಕುಟುಂಬ ಮತ್ತು ಮಕ್ಕಳಿಗೆ ದುಃಖವನ್ನು ಬರಿಸುವ ಶಕ್ತಿಯನ್ನು ಕೊಡಲೇಂದು ಅವರ ಮನೆಯಲ್ಲಿ ಪಾದ ಪೂಜೆ ಮಾಡುವುದರ ಮೂಲಕ ಆಶಿರ್ವಾದದೊಂದಿಗೆ ಸಾಂತ್ವಾನವನ್ನು ಹೇಳಿದರು.
ಈ ಕಾರ್ಯಕ್ರಮದಲ್ಲಿ;- ಶ್ರೀ ಚನ್ನಮಲ್ಲಿಕಾರ್ಜುನ ಶ್ರೀಗಳು, ಬಸಲಿಂಗಪ್ಪ ಕೊನಾಯ್ಕನಹಳ್ಳಿ, ಗುಂಡಣ್ಣ, ಮಂಜಪ್ಪ ಎಸ್.ಎರ್, ಗುತ್ತಿಗೆದಾರ ನರಸಿಂಹಮೂರ್ತಿ, ಕರಿಬಸಪ್ಪ, ಆ ಊರಿನ ಗ್ರಾಮ ಪಂಚಾಯಿತಿಯ ಸದಸ್ಯರು, ಹಿರಿಯರು,
ಮಹಿಳೆಯರು ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *