ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಪ್ರವಾಸಿ ಮಂದಿರದಲ್ಲಿ ಹೊನ್ನಾಳಿ ತಾಲೂಕಿನ ಕುರುಬ ಸಮಾಜದ ಮುಖಂಡರು ವತಿಯಿಂದ ಪೂರ್ವ ಬಾವಿ ಸಭೆ ಇಂದು ನಡೆಯಿತು. ದಿನಾಂಕ 7/1/2021ರಂದು ನಡೆಯಲಿರುವ ಶಿಕಾರಿಪುರದಲ್ಲಿ ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ವಿಚಾರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಮತ್ತು ಚಿಕ್ಕಮಂಗಳೂರು ಈ ಎರಡು ಜಿಲ್ಲೆಗಳ ವತಿಯಿಂದ ನಡೆಯುತ್ತದೆ ಆ ಕಾರ್ಯಕ್ರಮಕ್ಕೆ ಹೊನ್ನಾಳಿ ಮತ್ತು ನ್ಯಾಮತಿ ತಾಲೂಕುಗಳಲ್ಲಿ ಕುರುಬ ಸಮಾಜದ ಅತಿ ಹೆಚ್ಚು ಜನಸಂಖ್ಯೆ ಇರುವ ಕಾರಣ ಈ ತಾಲೂಕಿನಲ್ಲಿ ಸಮಾಜ ಇರುವ ಕಡೆ ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ. ನಮ್ಮ ತಾಲೂಕುಗಳ ಕುರುಬ ಸಮಾಜದ ಜನರು ಅತಿಹೆಚ್ಚಾಗಿ ಪಕ್ಷಾತೀತವಾಗಿ ಪಾಲ್ಗೊಂಡು ಕನಕಗುರುಪೀಠದ ಗುರುಗಳಾದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಮತ್ತು ನಿರಂಜನಾನಂದಪುರಿ ಸ್ವಾಮೀಜಿಗಳು ಎಸ್ಟಿ ಮೀಸಲಾತಿ ಹೋರಾಟಕ್ಕೆ ಕೈಯನ್ನು ಬಲಪಡಿಸೊಣ ಎಂದು ಕುರುಬ ಸಮಾಜದ ಮುಖಂಡರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಹೆಚ್ ಬಿ ಮಂಜಪ್ಪ ,ಬಿ ಡಿ ಮಂಜುನಾಥ್ ,ಸಿದ್ದಪ್ಪ,ಎಂ ರಮೇಶ್ ,ಎಂ ಸಿದ್ದಪ್ಪ, ಹೆಚ್ ಎ ಉಮಾಪತಿ ,ಕೆ.ವಿ ಚನ್ನಪ್ಪ ,ಕುಬೇರಪ್ಪ, ದಿಡಗೂರು ಪಾಲಕ್ಷಪ್ಪ, ಸೀಮೆಣ್ಣೆ ಪಾಲಾಕ್ಷಪ್ಪ ,ಕಡೆಗಣ್ಣ ರಾಜು, ರಂಜಿತ್, ಎಂ.ಆರ್ ಮಹೇಶ್, ಬಿಸಾಟಿ ಸುರೇಶ್, ಹಳದಪ್ಪ ಪಿರಗಿ ಇನ್ನು ಮುಂತಾದವರು ಭಾಗಿಯಾಗಿದ್ದರು