ದಾವಣಗೆರೆ ಜ.05
ಭಾರತೀಯ ಅಂಚೆ ಇಲಾಖೆ, ಕರ್ನಾಟಕ ಅಂಚೆ ವೃತ್ತವು
ಕರ್ನಾಟಕದಲ್ಲಿ ಗ್ರಾಮೀಣ ಅಂಚೆ ನೌಕರರ 2443
ಹುದ್ದೆಗಳನ್ನು ತುಂಬಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಗಳು ಎಸ್.ಎಸ್.ಎಲ್.ಸಿ,
ಪಾಸಾಗಿರಬೇಕು, ವಯೋಮಿತಿ ಕನಿಷ್ಠ 18 ರಿಂದ ಗರಿಷ್ಠ 40
ವರ್ಷಗಳಾಗಿದ್ದು, ಪ.ಜಾತಿ ಮತ್ತು ಪ.ವರ್ಗಗಳಿಗೆ ಸೇರಿದ
ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸಡಿಲಿಕೆ ಇರುತ್ತದೆ.
ಅಭ್ಯರ್ಥಿಗಳು ತಮ್ಮ ಹೆಸರನ್ನು hಣಣಠಿ://ಚಿಠಿಠಿosಣ.iಟಿ/gಜsoಟಿಟiಟಿe
ವೆಬ್ಸೈಟ್ನಲ್ಲಿ ಅಂತರ್ಜಾಲದ ಮೂಲಕ ನೊಂದಾಯಿಸಬಹುದಾಗಿದೆ.
ಅರ್ಜಿ ಸಲ್ಲಿಸಲುರ ಜ. 20 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ
ವಿವರಗಳಿಗಾಗಿ hಣಣಠಿ://ಚಿಠಿಠಿosಣ.iಟಿ/gಜsoಟಿಟiಟಿe ವೆಬ್ಸೈಟ್ ಅಥವಾ ಜಿಲ್ಲಾ
ಉದ್ಯೋಗ ವಿನಿಮಯ ಕೇಂದ್ರ, ದಾವಣಗೆರೆ. ದೂ.ಸಂ: 08192-
259446 ಇವರನ್ನು ಸಂಪರ್ಕಿಸಬಹುದೆಂದು ಉದ್ಯೋಗಾಧಿಕಾರಿ
ಗಿರೀಶ್.ಕೆ.ಎನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.