ದಾವಣಗೆರೆ ಜ.06
ಜಿಲ್ಲೆಯ ಹರಿಹರ ತಾಲ್ಲೂಕಿನ ಸಾರಥಿ-ಕುರುಬರಹಳ್ಳಿ ಕೈಗಾರಿಕಾ
ಪ್ರದೇಶದಲ್ಲಿ ನಿವೇಶನ ಹಂಚಿಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಹಿಂದೆ ಹರಿಹರ ತಾಲ್ಲೂಕಿನ ಹನಗವಾಡಿ ಕೈಗಾರಿಕಾ
ಪ್ರದೇಶದಲ್ಲಿ ಅರ್ಜಿ ಸಲ್ಲಿಸಿ ನಿವೇಶನ ಪಡೆಯದವರು ಸಾರಥಿ-
ಕುರುಬರಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ
ಪ.ಜಾತಿ/ಪ.ಪಂದವರಿಗೆ ಶೇ.22.65 ರಷ್ಟು ಅಲ್ಪಸಂಖ್ಯಾತರು
ಮತ್ತು ಹಿಂದುಳಿದ ವರ್ಗ ಪ್ರವರ್ಗ-1, 2-ಎ,
ಅಂಗವಿಕಲರು/ಮಾಜಿ ಸೈನಿಕರು, ಶೇ.5 ರಷ್ಟು ಮೀಸಲಿರಿಸಿದ್ದು,
ಉಳಿಸಿದ್ದು ಸಾಮಾನ್ಯ ವರ್ಗದವರಿಗೆ ಆಯಾ ಮೀಸಲಾತಿಗಳಲ್ಲಿ
ಶೇ.5 ರಷ್ಟು ಮಹಿಳೆಯರಿಗೆ ಸಹ ಕಾಯ್ದಿರಿಸಲಾಗಿದೆ.ಆಸಕ್ತ
ಉದ್ಯಮಶೀಲರು ರೂ.250 ಅರ್ಜಿ ಶುಲ್ಕದ ಡಿ.ಡಿ ಯನ್ನು ಕೆಐಎಡಿಬಿ
ದಾವಣಗೆರೆ ಇವರ ಹೆಸರಿಗೆ ತೆಗೆದು ಕೆಐಎಡಿಬಿಐ ಕಚೇರಿಯಲ್ಲಿ
ದಾವಣಗೆರೆ ಇಲ್ಲಿಗೆ ಸಲ್ಲಿಸಬಹುದು. ಅಜಿ ಸಲ್ಲಿಸಲು ಫೆ.10
ಕೊನೆಯದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯಪಾಲಕ ಅಭಿಯಂತರರು, ಕೆಐಎಡಿಬಿ
ದಾವಣಗೆರೆ ಅಥವ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ
ದಾವಣಗೆರೆ ಕಚೇರಿಗೆ ಸಲ್ಲಿಸಬಹುದು. ದೂ.ಸಂ: 08192-262001,
262788, 261055 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಕೈಗಾರಿಕಾ
ಕೇಂದ್ರದ ಜಂಟಿ ನಿರ್ದೇಶಕ ಜಯಪ್ರಕಾಶ್ ನಾರಾಯಣ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.