ಕಾರ್ಯಕ್ರಮ

ದಾವಣಗೆರೆ ಜ.07
ದಾವಣಗೆರೆ ಜಿಲ್ಲೆಯ ಸಿಡಾಕ್-ಉದ್ಯಮಶೀಲತಾ ಮಾರ್ಗದರ್ಶನಾ
ಕೇಂದ್ರದಿಂದ ಸ್ವಂತ ಉದ್ಯಮ ಪ್ರಾರಂಭಿಸಿ
ಸ್ವಾವಲಂಬಿಗಳಾಗಲು ಇಚ್ಚಿಸುವ ದಾವಣಗೆರೆ ಜಿಲ್ಲೆಯ ಪುರುಷ
ಉದ್ಯಮಾಕಾಂಕ್ಷಿಗಳಿಗೆ 30 ದಿನಗಳ(ವಸತಿರಹಿತ) ಮೊಬೈಲ್
ಹ್ಯಾಂಡ್‍ಸೆಟ್ ರಿಪೇರಿ ಮತ್ತು ಸೇವೆಗಳಿಗೆ ಸಂಬಂಧಿಸಿದಂತೆ
ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿ
ಕಾರ್ಯಕ್ರಮವನ್ನು ದಾವಣಗೆರೆಯಲ್ಲಿ ಫೆಬ್ರವರಿ ಮಾಹೆಯ
ಎರಡನೇ ವಾರದಲ್ಲಿ ನಡೆಸಲಾಗುವುದು.
ಈ ಉದ್ಯಮಶೀಲತಾ ಕೌಶಲ್ಯಾಭಿವೃದ್ಧಿ ತರಬೇತಿಯಲ್ಲಿ
ಉದ್ಯಮಶೀಲರ ಗುಣಲಕ್ಷಣಗಳು, ಉದ್ಯಮ ಪ್ರಾರಂಭಿಸಲು
ಕೈಗೊಳ್ಳಬೇಕಾದ ಮಜಲುಗಳು, ಮಾರುಕಟ್ಟೆ ನಿರ್ವಹಣೆ
ಮುಂತಾದ ವಿಷಯಗಳ ಬಗ್ಗೆ ಮಾಹಿತಿ ಮತ್ತು ಮೊಬೈಲ್
ಹ್ಯಾಂಡ್‍ಸೆಟ್ ರಿಪೇರಿ ಮತ್ತು ಸೇವೆಗಳ ಪ್ರಾಯೋಗಿಕ
ತರಬೇತಿಯನ್ನು ನೀಡಲಾಗುವುದು. ಶಿಬಿರಾರ್ಥಿಗಳು
ತರಬೇತಿ ಪಡೆದ ನಂತರ ಸ್ವಂತ ಉದ್ಯಮಿ ಅಥವಾ ಉದೋಗಿ
ಆಗಲು ಸಮರ್ಥರಾಗುವಂತೆ ರೂಪಿಸಲಾಗುವುದು. ತರಬೇತಿ
ಉಚಿತವಾಗಿದ್ದು ಶಿಬಿರಾರ್ಥಿಗಳು ತಮ್ಮ ಸ್ವಂತ ಖರ್ಚಿನಲ್ಲಿ
ಪ್ರಯಾಣಿಸಿ ಭಾಗವಹಿಸಬೇಕಾಗಿರುತ್ತದೆ. ತರಬೇತಿ
ಅವಧಿಯಲ್ಲಿ ಊಟೋಪಚಾರ ಒದಗಿಸಲಾಗುವುದು.
ತರಬೇತಿಯನ್ನು ಪಡೆಯಲು ಇಚ್ಚಿಸುವ ಆಸಕ್ತರು
ಅರ್ಜಿ ಸಲ್ಲಿಸಬೇಕಾದ ಹಾಗೂ ಇತರೆ ವಿವರಗಳಿಗಾಗಿ ಮೊಬೈಲ್
ಸಂಖ್ಯೆ: 9035229821, ಕುಮಾರಿ ಸವಿತ, ತರಬೇತುದಾರರು
ಸಿಡಾಕ್, ದಾವಣಗೆರೆ ಇವರನ್ನು ಕಛೇರಿ ವೇಳೆಯಲ್ಲಿ
ಸಂಪರ್ಕಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಫೆ.1 ಕೊನೆಯ
ದಿನವಾಗಿದ್ದು, ಆಸಕ್ತರು ಈ ಕಾರ್ಯಕ್ರಮದ
ಸದುಪಯೋಗ ಪಡೆಯಬೇಕೆಂದು ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *