ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪ ಅವರಿಗೆ ಕರ್ನಾಟಕ ರಾಜ್ಯದ ರೆಡ್ಡಿ ಸಮಾಜದ ಪ್ರಧಾನ ಕಾರ್ಯದರ್ಶಿ ಯವರಾದ ಗುರುನಾಥ ರೆಡ್ಡಿಯವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಯಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು .ವಿಶಯ ಈ ರೀತಿ ಇದೆ ಮಾನ್ಯ ಮುಖ್ಯ ಮಂತ್ರಿಗಳಲ್ಲಿ ತಮ್ಮ ಅವಗಾಹನೆಗೆ ತರ ಒಯಸುವುದೇನೆಂದರೆ, ಪ್ರಸ್ತುತ ನಮ್ಮ ರಾಜ್ಯದಲ್ಲಿ ರೆಡ್ಡಿ ಜನ 28 ಜಿಲ್ಲೆಗಳಲ್ಲಿ ಬಹುತೇಕ ರೆಡ್ಡಿ ಸಮುದಾಯದ ಜನರು ಕೃಷಿ ಪ್ರಧಾನ ಕುಟುಂಬ ಮತ್ತು ಉದ್ಯೋಗಸ್ಥರಾಗಿದ್ದು, ಇದರಲ್ಲಿ ಅನೇಕರು ಬಡತನ ಸ್ಥಿತಿಯಲ್ಲಿದ್ದು, ಒಕ್ಕಲುತನವನ್ನೆ ತಮ್ಮ ಬಹುತೇಕ ಬದುಕು ಉಸಿರಾಗಿಸಿಕೊಂಡು ನಮ್ಮ ರೆಡ್ಡಿ ಸಮುದಾಯದ ಹೊಸ ತಲೆಮಾರಿ ಯುವಕರು ಶಿಕ್ಷಣ ವೃತ್ತಿ, ಮಾರ್ಗದರ್ಶನ, ಕೌಶಲ್ಯ ಅಭಿವೃದ್ಧಿ ಉದ್ಯೋಗ ಅವಕಾಶ ಕಲ್ಪಿಸಬೇಕು. ರೆಡ್ಡಿ ನಿಗಮ ಮಂಡಳಿ ಸ್ಥಾಪಿಸಬೇಕು. ಕರ್ನಾಟಕದಲ್ಲಿ ಸುಮಾರು 95 ಲಕ್ಷ ರೆಡ್ಡಿ ಜನರಿದ್ದು, ಇದರಲ್ಲಿ 70% ಜನ ಬಡತನ ರೇಖೆಗಿಂತ ಕೆಳಗಡೆ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಈ ಸಮಾಜದ ಏಳ್ಳೆಗಾಗಿ ರೆಡ್ಡಿ ಸಮಾಜ ಅಭಿವೃದ್ಧಿಗಾಗಿ ನಿಗಮ/ಮಂಡಳಿ ನಿರ್ಮಿಸಿದರೆ, ರೆಡ್ಡಿ ಸಮುದಾಯದವರಿಗೆ ಅನುಕೂಲವಾಗುತ್ತದೆ. ತಾವುಗಳು ಆದಷ್ಟು ಬೇಗ ಈ ಕಡೆ ಗಮನ ಹರಿಸಿ ರೆಡ್ಡಿ ಸಮಾಜದ ಅಭಿವೃದ್ಧಿ ನಿಗಮ/ಮಂಡಳಿ ಸ್ಥಾಪಿಸಿ ಹಾಗೂ ಅನುದಾನವನ್ನು ಬಿಡುಗಡೆ ಮಾಡಬೇಕೆಂದು

ಈ ಮೂಲಕ ಕಳಕಳಿಯ ಮನವಿ ಮಾಡಿಕೊಳ್ಳುತ್ತೇವೆ. ಇದನ್ನು ಪರಿಗಣಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ರಾಜ್ಯ ಮಟ್ಟದ ಉಗ್ರ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ:-ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುನಾಥ್ ರೆಡ್ಡಿ, ವಿಜಯ್ ರೆಡ್ಡಿ, ಸಂತೋಷ ರೆಡ್ಡಿ, ಮಹೇಶ್ ರೆಡ್ಡಿ, ಕೃಷ್ಣಾ ರೆಡ್ಡಿ, ಸಿದ್ದಾ ರೆಡ್ಡಿ, ಆನಂತ್ ರೆಡ್ಡಿ ಇನ್ನೂ ಮುಂತಾದವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *