ದಾವಣಗೆರೆ ಜ.08
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 06 ಸೇವೆಗಳನ್ನು
(ವಿದ್ಯಾರ್ಥಿ ಉಚಿತ/ರಿಯಾಯಿತಿ ಬಸ್ಪಾಸ್, ವಿಕಲಚೇತನರ ರಿಯಾಯಿತಿ
ಪಾಸ್, ಅಂಧರ ಉಚಿತ ಪಾಸ್, ಸ್ವಾತಂತ್ರ್ಯ ಹೋರಾಟಗಾರರ
ಪಾಸ್ಗಳನ್ನು ಸೇವಾಸಿಂಧು ಪೋರ್ಟಲ್ ನಲ್ಲಿ ಕಡ್ಡಾಯವಾಗಿ
ಆನ್ಲೈನ್ ವ್ಯವಸ್ಥೆಂiÀiಡಿ ನಿರ್ವಹಿಸಲಾಗುತ್ತಿದೆ.
ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ವಿತರಣೆ
ಮಾಡಬೇಕಾಗಿರುವುದರಿಂದ ಫಲಾನುಭವಿಗಳು
ನವೀಕರಿಸಿಕೊಳ್ಳಲು ಮತ್ತು ಹೊಸ ಪಾಸ್ಗಳನ್ನು
ಪಡೆದುಕೊಳ್ಳಲು ಸೇವಾ ಸಿಂಧು
ಪೋರ್ಟ್ಲ್ hಣಣಠಿ://seಡಿviಛಿeoಟಿಟiಟಿe.gov.iಟಿ/ಞಚಿಡಿಟಿಚಿಣಚಿಞಚಿ ನಲ್ಲಿ ಅರ್ಜಿ
ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.
ಈ ವಿಕಲಚೇತನರ ಫಲಾನುಭವಿಗಳು ಫೆ.28 ರೊಳಗಾಗಿ
ನವೀಕರಣ ಮಾಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿರುತ್ತದೆ.
ಫೆ.28 ರ ನಂತರ ವಿಕಲಚೇತನರ ಪಾಸ್ ನವಿಕರಣಕ್ಕೆ ಅವಕಾಶ
ಇರುವುದಿಲ್ಲ. ಆನ್ಲೈನ್ ನಲ್ಲಿ ಸಂಬಂಧಪಟ್ಟ ದಾಖಲೆಗಳನ್ನು
ಅಪ್ಲೋಡ್ ಮಾಡುವುದು ಕಡ್ಡಾಯವಾಗಿರುತ್ತದೆ.
ಫಲಾನುಭವಿಗಳು ಆನ್ಲೈನ್ ಮುಖಾಂತರ
ದಾಖಲಾತಿಗಳನ್ನು (ಯುಡಿಐಡಿ ಕಾರ್ಡ್, ಆಧಾರ್ ಕಾರ್ಡ್,
ಅಂಗವಿಕಲತೆ ಪ್ರಮಾಣ ಪತ್ರ, ಫೋಟೋ) ಅಪ್ಲೋಡ್
ಮಾಡಿದ್ದಾಗ್ಯೂ ಭೌತಿಕವಾಗಿ ಪಾಸ್ ಪಡೆಯಲು ಬಂದಾಗ ಅಗತ್ಯ
ದಾಖಲಾತಿಗಳು ಮತ್ತು ಮೂಲ ದಾಖಲೆಗಳು ಹಾಗೂ ಜೆರಾಕ್ಸ್
ಪ್ರತಿಯನ್ನು ಹಾಜರುಪಡಿಸಿ
ವಿಕಲಚೇತನರ(ಹೊಸ/ನವೀಕರಣ)ಪಾಸ್ಗಳನ್ನು
ಪಡೆಯಬೇಕೆಂದು ದಾವಣಗೆರೆ ಕ.ರಾ.ರ.ಸಾ.ನಿ ವಿಭಾಗೀಯ
ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.