ಪ್ರವೇಶಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಜ.11
   ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ,
ಮೈಸೂರು ಇಲ್ಲಿ 2020-21ನೇ ಸಾಲಿನ ಎಂ.ಟೆಕ್ ಇನ್ ಟೂಲ್
ಇಂಜಿನಿಯರಿಂಗ್ ಕೋರ್ಸ್ ಪ್ರವೇಶಕ್ಕೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ
ಆಹ್ವಾನಿಸಲಾಗಿದೆ.
ಎಂ.ಟೆಕ್ ಇನ್ ಟೂಲ್ ಇಂಜಿನಿಯರಿಂಗ್ ಕೋರ್ಸ್‍ಗಾಗಿ ಪಿಜಿಸಿಇಟಿ(Pಉಅಇಖಿ)
ಬರೆದ ಬಿ.ಇ., – ಮೆಕ್ಯಾನಿಕಲ್/ ಇಂಡಸ್ಟ್ರಿಯಲ್ ಪ್ರೊಡಕ್ಷನ್/
ಆಟೋ ಮೊಬೈಲ್/ಮೇರಿನ್/ಆಟೋಮೇಷನ್ ಮತ್ತು
ರೋಬೋಟಿಕ್ಸ್ ಇಂಜಿನಿಯರಿಂಗ್ ಮುಂತಾದವುಗಳÀಲ್ಲಿ
ಉತ್ತೀರ್ಣರಾದ ಅಭ್ಯರ್ಥಿಗಳಿಂದ ಎ.ಐ.ಸಿ.ಟಿ.ಇ ಮತ್ತು ವಿ.ಟಿ.ಯು ಇಂದ
ಅನುಮೋದನೆ ಪಡೆದ ಎರಡು ವರ್ಷ ಅವಧಿಯ ಎಂ.ಟೆಕ್ ಇನ್
ಟೂಲ್ ಇಂಜಿನೀಯರಿಂಗ್ ಪ್ರವೇಶಕ್ಕೆ ಅರ್ಜಿಯನ್ನು
ಆಹ್ವಾನಿಸಲಾಗಿದ್ದು, ಜ.21 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ವಿದ್ಯಾರ್ಥಿಗಳಿಗೆ ತಮ್ಮ ನಿಯಮಿತ ಬೋಧನಾ
ಚಟುವಟಿಕೆಗಳ ಜೊತೆಗೆ ಕೈಗಾರಿಕೆಯ ಅನುಭವ
ದೊರೆಯುವುದು. ಈ ಸಂಸ್ಥೆಯಿಂದ ತರಬೇತಿ ಪಡೆದ
ವಿದ್ಯಾರ್ಥಿಗಳು ಸ್ವಉದ್ಯೋಗಿ/ಉದ್ಯೋಗಿಯಾಗಲು ಇಲ್ಲಿ
ನೀಡಲಾಗುವ ಶಿಕ್ಷಣ ಸಹಕಾರಿಯಾಗುತ್ತದೆ ಮತ್ತು
ಹೆಸರಾಂತ ಕೈಗಾರಿಕೆಗಳಲ್ಲಿ ಅತ್ಯುತ್ತಮವಾದ
ಉದ್ಯೋಗಾವಕಾಶಗಳು ಲಭ್ಯವಾಗುತ್ತದೆ.
ತರಬೇತಿಯನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಕ್ಯಾಂಪಸ್
ಸಂದರ್ಶನವನ್ನು ಆಯೋಜಿಸಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ: ಸರ್ಕಾರಿ ಉಪಕರಣಾಗಾರ
ಮತ್ತು ತರಬೇತಿ ಕೇಂದ್ರ, ಪ್ಲಾಟ್ ನಂ. 93 ಮತ್ತು 94,
ಬೆಳಗೊಳ ಕೈಗಾರಿಕಾ ಪ್ರದೇಶ, ಕೆ.ಆರ್.ಎಸ್ ರಸ್ತೆ,
ಮೈಸೂರು – 16. ಮೊಬೈಲ್ ನಂ : 9243989954, 0821-2582750.

Leave a Reply

Your email address will not be published. Required fields are marked *