ದಾವಣಗೆರೆ ಜ.12
ಮಾನ್ಯ ಮುಖ್ಯಮಂತ್ರಿಗಳಾದ
ಬಿ.ಎಸ್.ಯಡಿಯೂರಪ್ಪನವರು ಜ.14 ರಂದು ದಾವಣಗೆರೆ
ಜಿಲ್ಲೆಯ ಹರಿಹರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.
ಜ.14 ರ ಬೆಳಿಗ್ಗೆ 9.30 ಕ್ಕೆ ಬೆಂಗಳೂರಿನ ಹೆಚ್‍ಎಎಲ್ ವಿಮಾನ
ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು 10.50 ಕ್ಕೆ ಜಿಎಂಐಟಿ
ಹೆಲಿಪ್ಯಾಡ್‍ಗೆ ಆಗಮಿಸುವರು. ಬೆಳಿಗ್ಗೆ 11.15 ಕ್ಕೆ ರಸ್ತೆ ಮೂಲಕ
ಹರಿಹರ ತಲುಪಿ ವೀರಶೈವ ಲಿಂಗಾಯತ ಪಂಚಮಸಾಲಿ
ಜಗದ್ಗುರುಗಳ ಪೀಠ, ಸುಕ್ಷೇತ್ರದಲ್ಲಿ ಹರಜಾತ್ರಾ
ಮಹೋತ್ಸವ-2021 ರ ಅಂಗವಾಗಿ ಪೀಠದ ವತಿಯಿಂದ
ಆಯೋಜಿಸಲಾಗಿರುವ ಸ್ವಾವಲಂಬಿ ಸಮಾವೇಶ-ಸಂಕ್ರಾಂತಿ
ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 12.15 ಕ್ಕೆ ಹರಿಹರದಿಂದ ರಸ್ತೆ ಮೂಲಕ ಹೊರಟು
12.30 ಕ್ಕೆ ಜಿಎಂಐಟಿ ಹೆಲಿಪ್ಯಾಡ್ ತಲುಪುವರು. 12.35 ಕ್ಕೆ ಜಿಎಂಐಟಿ
ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಮಧ್ಯಾಹ್ನ 2 ಕ್ಕೆ
ಹೆಚ್‍ಎಎಲ್ ವಿಮಾನ ನಿಲ್ದಾಣ ತಲುಪುವರು ಎಂದು ಮಾನ್ಯ
ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿ
ಬಿ.ಪಿ.ಚನ್ನಬಸವೇಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *