ಕರ್ನಾಟಕ ರಾಜ್ಯ ಬೀದರ್ ಜಿಲ್ಲೆ ಬೀದರ್ ದಿನಾಂಕ 13-01-2021 ರಂದು ಇಂದು ಅಖಿಲ ಭಾರತ ರೆಡ್ಡಿ ಸಮಾಜ ರಿಜಿಸ್ಟರ್ ಕರ್ನಾಟಕ ರಾಜ್ಯದ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯವರಾದ ಗುರುನಾಥ ರೆಡ್ಡಿ ಚಿಂತಾಕಿ ಅವರು ಎಬಿಸಿ ನ್ಯೂಸ್ ಚಾನೆಲ್ ರವರಿಗೆ ಆನ್ಲೈನ್ ಮೂಲಕ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದ ಬಿಜೆಪಿ ಪಕ್ಷದಲ್ಲಿ ಬಿಜೆಪಿ ವತಿಯಿಂದ 12 ರೆಡ್ಡಿ ಸಮಾಜದ ಶಾಸಕರು ಆಯ್ಕೆಯಾಗಿದ್ದಾರೆ, ಕೆಲವೊಂದು ಶಾಸಕರು ಐದರಿಂದ ಆರು ಬಾರಿ ,ಕೆಲವೊಂದು ಶಾಸಕರು ಮೂರು ಬಾರಿ, ಎರಡು ಬಾರಿ ,ನಾಲ್ಕು ಬಾರಿ, ಒಟ್ಟು 12 ಶಾಸಕರು ಬಿಜೆಪಿ ಪಕ್ಷಕ್ಕೆ ನಿಷ್ಠೆ ಇಟ್ಟುಕೊಂಡು ದುಡಿಯುತ್ತ ಬಂದಿದ್ದಾರೆ. ವಿಪರ್ಯಾಸದ ಸಂಗತಿಯೆಂದರೆ ರಾಜ್ಯ ಬಿಜೆಪಿ ಪಕ್ಷದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ ಎಸ್ ಯಡಿಯೂರಪ್ಪನವರು ಮತ್ತು ಬಿಜೆಪಿಯ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರಿಗೂ ನನ್ನದೊಂದು ಪ್ರಶ್ನೆ? ರಾಷ್ಟ್ರಮಟ್ಟದಲ್ಲೂ ಮತ್ತು ರಾಜ್ಯದಲ್ಲೂ ರೆಡ್ಡಿ ಸಮಾಜದವರು ತಮ್ಮ ಬಿಜೆಪಿ ಪಕ್ಷಕ್ಕೆ ಅತಿ ಹೆಚ್ಚು ಮತವನ್ನು ಕೊಟ್ಟು 12 ಶಾಸಕರು ನಮ್ಮ ರೆಡ್ಡಿ ಸಮಾಜದ ವತಿಯಿಂದ ಶಾಸಕರು ಆಯ್ಕೆಯಾಗಿದ್ದಾರೆ, ಆದರೆ ನೀವುಗಳು ನಮ್ಮ ರೆಡ್ಡಿ ಸಮಾಜ ಶಾಸಕರುಗಳಿಗೆ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿಲ್ಲ ಒಬ್ಬ ಮಂತ್ರಿಯನ್ನು ಸಹ ಮಾಡದೆ ಇರುವುದು ರಾಜ್ಯ ರೆಡ್ಡಿ ಸಮಾಜದ ಕುಲಬಾಂಧವರಿಗೆ ನೋವುಂಟಾಗಿದೆ ಆದಕಾರಣ ರಾಜ್ಯದ ಮುಖ್ಯಮಂತ್ರಿಗಳಾದ ನೀವುಗಳು ನಮ್ಮ ರೆಡ್ಡಿ ಸಮಾಜದ ಶಾಸಕರುಗಳಿಗೆ ಸಂಪುಟ ದರ್ಜೆ ಸ್ಥಾನಮಾನ ಕೊಟ್ಟು ಸಚಿವ ಸಂಪುಟದಲ್ಲಿ ಮಂತ್ರಿಗಳಾಗಿ ಮಾಡದಿದ್ದರೆ ಶ್ರೀಘ್ರವೇ ರಾಜ್ಯ ವ್ಯಾಪಿ ಅಖಿಲ ಭಾರತ ರೆಡ್ಡಿ ಸಮಾಜದ ಕರ್ನಾಟಕ ರಾಜ್ಯ ಘಟಕದ ವತಿಯಿಂದ ಉಗ್ರವಾದ ಹೋರಾಟ ಮತ್ತು ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ಘಟಕದ ರೆಡ್ಡಿ ಸಮಾಜದ ಪ್ರಧಾನ ಕಾರ್ಯದರ್ಶಿಯವರಾದ ಗುರುನಾಥ ರೆಡ್ಡಿ ಚಿಂತಾಕಿ ಅವರು ರಾಜ್ಯ ಮುಖ್ಯಮಂತ್ರಿಯವರಾದ ಬಿಎಸ್ ಯಡಿಯೂರಪ್ಪ ನವರಿಗೆ ಒತ್ತಾಯ ಮಾಡಿದರು.