ದಾವಣಗೆರೆ ಜ.13 : 
ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಇವರು ಜ.14 ರಂದು
ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ಪ್ರವಾಸ ಕೈಗೊಳ್ಳಲಿದ್ದಾರೆ.
ಜ.14 ರ ಬೆಳಿಗ್ಗೆ 9.30 ಕ್ಕೆ ಬೆಂಗಳೂರಿನ ಹೆಚ್‍ಎಎಲ್ ವಿಮಾನ
ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ಹೊರಟು 10.50 ಕ್ಕೆ ಜಿಎಂಐಟಿ
ಹೆಲಿಪ್ಯಾಡ್‍ಗೆ ಆಗಮಿಸುವರು. ಬೆಳಿಗ್ಗೆ 11.15 ಕ್ಕೆ ರಸ್ತೆ ಮೂಲಕ
ಹೊರಟು 11.30 ಕ್ಕೆ ಹರಿಹರ ತಲುಪಿ ವೀರಶೈವ ಲಿಂಗಾಯತ
ಪಂಚಮಸಾಲಿ ಜಗದ್ಗುರುಗಳ ಪೀಠ, ಸುಕ್ಷೇತ್ರದಲ್ಲಿ
ಹರಜಾತ್ರಾ ಮಹೋತ್ಸವ-2021 ರ ಅಂಗವಾಗಿ ಪೀಠದ ವತಿಯಿಂದ
ಆಯೋಜಿಸಲಾಗಿರುವ ಸ್ವಾವಲಂಬಿ ಸಮಾವೇಶ-ಸಂಕ್ರಾಂತಿ
ಸಂಭ್ರಮ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ಮಧ್ಯಾಹ್ನ 12.15 ಕ್ಕೆ ಹರಿಹರದಿಂದ ರಸ್ತೆ ಮೂಲಕ ಹೊರಟು
12.30 ಕ್ಕೆ ಜಿಎಂಐಟಿ ಹೆಲಿಪ್ಯಾಡ್ ತಲುಪುವರು. 12.35 ಕ್ಕೆ ಜಿಎಂಐಟಿ
ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಹೊರಟು ಮಧ್ಯಾಹ್ನ 2 ಕ್ಕೆ
ಹೆಚ್‍ಎಎಲ್ ವಿಮಾನ ನಿಲ್ದಾಣ ತಲುಪುವರು ಎಂದು ಗೃಹ ಸಚಿವರ
ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *