ದಾವಣಗೆರೆ ಜ.13
   ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಇಲಾಖೆ
ವತಿಯಿಂದ  ಜಿಲ್ಲೆಯಲ್ಲಿ ಶ್ರವಣದೋಷವುಳ್ಳ
ವಿಕಲಚೇತನರು ಸ್ವಯಂ ಉದ್ಯೋಗ ಕೈಗೊಳ್ಳಲು 15
ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸಲು ಅರ್ಜಿ
ಆಹ್ವಾನಿಸಲಾಗಿದೆ.
   ಅಭ್ಯರ್ಥಿಗಳು ಶೇ.40 ಕ್ಕಿಂತ ಹೆಚ್ಚಿನ
ಶ್ರವಣದೋಷವುಳ್ಳವರಾಗಿರಬೇಕು. ಕನಿಷ್ಟ 10 ವರ್ಷಗಳ
ಕಾಲ ಕರ್ನಾಟಕ ವಾಸಿಯಾಗಿದ್ದು ಸಕ್ಷಮ ಪ್ರಾಧಿಕಾರದಿಂದ
ವಾಸಸ್ಥಳ ದೃಢೀಕರಣ ಪತ್ರ
ಹೊಂದಿರಬೇಕು. ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ
ಹೊಂದಿರಬೇಕು. ಟೈಲರಿಂಗ್ ವೃತ್ತಿಗೆ ಸಂಬಂಧಿಸಿದಂತೆ
ಪ್ರಮಾಣಪತ್ರ ಸಲ್ಲಿಸಬೇಕು. ಆದಾಯದ ಮಿತಿ
ಇರುವುದಿಲ್ಲ. ಬೇರೆ ಯಾವುದೇ ಯೋಜನೆಯಡಿ ಹೊಲಿಗೆ
ಯಂತ್ರ ಪಡೆಯದೇ ಇರುವ ಬಗ್ಗೆ ನೋಟರಿಯಿಂದ
ದೃಢೀಕರಿಸಿದ ಪ್ರಮಾಣಪತ್ರ ಒದಗಿಸತಕ್ಕದ್ದು.  ಜ.23 ಅರ್ಜಿ
ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ
ಮಾಹಿತಿಗಾಗಿ ದೂ.ಸಂ:08192-
263939/263936 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ಅಂಗವಿಕಲರ

ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಜಿ.ಎಸ್ ಶಶಿಧರ್

ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *