ದಾವಣಗೆರೆ ಜ.15
 ರಾಜ್ಯ ಚುನಾವನಾ ಆಯೋಗದ ಸೂಚನೆಯಂತೆ ಜಿಲ್ಲೆಯ 6
ತಾಲ್ಲೂಕುಗಳ ಎಲ್ಲ ಗ್ರಾ.ಪಂ ಗಳ ಅಧ್ಯಕ್ಷರ ಮತ್ತು
ಉಪಾಧ್ಯಕ್ಷರ ಹುದ್ದೆ ಮೀಸಲಾತಿ ನಿಗದಿಪಡಿಸಲು
ದಿನಾಂಕಳನ್ನು ನಿಗದಿಪಡಿಸಲಾಗಿತ್ತು. ಕೋವಿಡ್ 19 ಲಸಿಕಾ
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಈ ದಿನಾಂಕಗಳನ್ನು
ಮುಂದಾಡಲಾಗಿ ಕೆಳಕಂಡಂತೆ ಮರು ನಿಗದಿಪಡಿಸಲಾಗಿದೆ.
  ಗ್ರಾ.ಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೀಸಲಾತಿ
ಪ್ರಕ್ರಿಯೆಯು ಗ್ರಾ.ಪಂ ಸದಸ್ಯರ ಸಮಕ್ಷಮ
ಕೆಳಕಾಣಿಸಿದ ದಿನಾಂಕದಂದು ಜಿಲ್ಲಾಧಿಕಾರಿಗಳ ಕಚೇರಿ,
ತುಂಗಾಭದ್ರ ಸಭಾಂಗಣ ಇಲ್ಲಿ ಕೈಗೊಳ್ಳಲಾಗುವುದು.
  ಜ.27 ರಂದು ಬೆಳಿಗ್ಗೆ 10 ಗಂಟೆಗೆ ಹರಿಹರ ತಾಲ್ಲೂಕಿನ 24
ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ
ಹುದ್ದೆಯ ಮೀಸಲಾತಿ ನಿಗದಿಮಾಡಲಾಗುವುದು. ಹಾಗೂ
ಮಧ್ಯಾಹ್ನ 2 ಗಂಟೆಗೆ ಹೊನ್ನಾಳಿ ತಾಲ್ಲೂಕಿನ 29 ಗ್ರಾಮ
ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಹುದ್ದೆಗಳ
ಮೀಸಲಾತಿ ನಿಗದಿ ಮಾಡಲಾಗುವುದು.
  ಜ.28 ರಂದು ಬೆಳಿಗ್ಗೆ 10 ಗಂಟೆಗೆ ಜಗಳೂರು ತಾಲ್ಲೂಕಿನ
22 ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ
ಹುದ್ದೆಯ ಹಾಗೂ ಮಧ್ಯಾಹ್ನ 2 ಗಂಟೆಗೆ ದಾವಣಗೆರೆ
ತಾಲ್ಲೂಕಿನ 42 ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ
ಉಪಾಧ್ಯಕ್ಷರ ಹುದ್ದೆಯ ಮೀಸಲಾತಿ
ನಿಗದಿಮಾಡಲಾಗುವುದು.
 ಜ.29 ರಂದು ಬೆಳಿಗ್ಗೆ 10 ಗಂಟೆಗೆ ನ್ಯಾಮತಿ ತಾಲ್ಲೂಕಿನ 17
ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ
ಹುದ್ದೆಯನ್ನು ಹಾಗೂ ಮಧ್ಯಾಹ್ನ 1 ಗಂಟೆಗೆ ಚನ್ನಗಿರಿ
ತಾಲ್ಲೂಕಿನ 61 ಗ್ರಾಮ ಪಂಚಾಯಿತಿಯ ಅಧ್ಯಕ್ಷ ಹಾಗೂ
ಉಪಾಧ್ಯಕ್ಷರ ಹುದ್ದೆಗಳ ಮೀಸಲಾತಿಯನ್ನು ನಿಗದಿ
ಮಾಡಲಾಗುವುದೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *