ಕಾರ್ಯಕ್ರಮ
ದಾವಣಗೆರೆ ಜ.16
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮುಕ್ತ
ಗಂಗೋತ್ರಿ, ಮೈಸೂರು ಇವರ ವತಿಯಿಂದ 2020-21ನೇ ಸಾಲಿನ
ಜುಲೈ ಆವೃತ್ತಿಯಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗಾಗಿ ಜ.18
ರಿಂದ 20 ರವರೆಗೆ ಮೂರು ದಿನದ ಪರಿಚಯ
ಕಾರ್ಯಕ್ರಮವನ್ನು ಆನ್ ಲೈನ್ ಮುಖಾಂತರ ಏರ್ಪಡಿಸಿದೆ.
ಜ.18 ರ ಬೆಳಿಗ್ಗೆ 10.35 ರಿಂದ 11 ಗಂಟೆಯವರೆಗೆ
ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಇಲಾಖೆ, ಐಟಿ, ಬಿಟಿ ಹಾಗೂ
ಕೌಶಲ್ಯಾಭಿವೃದ್ದಿ ಸಚಿವರಾದ ಡಾ.ಸಿ.ಎನ್ ಅಶ್ವತ್ಥ ನಾರಾಯಣ
ಇವರು ಕರಾಮುವಿಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ
ಮಾತನಾಡಲಿದ್ದಾರೆ.
ಈ ಮೂರು ದಿನದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ
ಕರಾಮುವಿಯ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ತಾವು
ಆಯ್ಕೆ ಮಾಡಿಕೊಂಡಿರುವ ಕಾರ್ಯಕ್ರಮದ ಪರೀಕ್ಷೆ
ಸಂಪರ್ಕ ಕಾರ್ಯಕ್ರಮಗಳ ಮಾಹಿತಿ ನೀಡಲಾಗುವುದು
ಅಲ್ಲದೇ ಕರಾಮುವಿಯ ಗ್ರಂಥಾಲಯ ಸೌಲಭ್ಯಗಳು,
ಔದ್ಯೋಗಿಕ ಮಾಹಿತಿ, ಉಚಿತವಾಗಿ ಸಿಗುವ ಸಂಪನ್ಮೂಲಗಳು,
ಕೌಶಲ್ಯಾಭಿವೃದ್ದಿ ಕಾರ್ಯಕ್ರಮ, ಕೌಶಲ್ಯ ಕರ್ನಾಟಕ
ಯೋಜನೆಗಳು ಮತ್ತು ಇನ್ನಿತರ ವಿಷಯಗಳ ಕುರಿತು
ಮಾಹಿತಿ ನೀಡಲಾಗುತ್ತದೆ. ಇದಲ್ಲದೆ ವಿವಿಧ ಕ್ಷೇತ್ರಗಳ
ಪರಿಣಿತರನ್ನು ಆಹ್ವಾನಿಸಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಉಪನ್ಯಾಸ
ನೀಡಲಾಗುವುದು.
ಈ ಸಾಲಿನಲ್ಲಿ 17,244 ವಿದ್ಯಾರ್ಥಿಗಳು ಕರಾಮುವಿಯಲ್ಲಿ
ಪ್ರವೇಶಾತಿ ಪಡೆದಿದ್ದು, ಬಹು ಬೇಡಿಕೆಯ ಕೋರ್ಸ್‍ಗಳಾದ ಬಿ.ಎ
ಗೆ 4940, ಎಂ.ಕಾಂಗೆ 2262, ಎಂಬಿಎಗೆ 1260 ಜನ ವಿದ್ಯಾರ್ಥಿಗಳು
ಪ್ರವೇಶಾತಿ ಪಡೆದಿದ್ದಾರೆ. ಎಂ.ಎ ಕನ್ನಡ, ಇಂಗ್ಲೀಷ್, ಇತಿಹಾಸ
ಕಾರ್ಯಕ್ರಮಗಳಿಗೆ 1000ಕ್ಕೂ ಹೆಚ್ಚು ವಿದ್ಯಾರ್ಥಿಗಳು
ದಾಖಲಾಗಿದ್ದಾರೆ. ಈ ಬಾರಿ ವಿಜ್ಞಾನ ವಿಷಯಗಳಿಗೂ ಸಹಾ ಬೇಡಿಕೆ
ಬಂದಿದ್ದು ಎಂ.ಎಸ್ಸಿ ಗಣಿತಕ್ಕೆ 267, ರಸಯನ ಶಾಸ್ತ್ರಕ್ಕೆ 216,
ಬೌತಶಾಸ್ತ್ರಕ್ಕೆ 165, ಗಣಕ ವಿಜ್ಞಾನ 110 ಕ್ಲಿನಿಕಲ್ ನ್ಯೂಟ್ರಿಷನ್ 80
ಹಾಗೂ ಮೈಕ್ರೊ ಬಯಾಲಾಜಿಗೆ 79 ವಿದ್ಯಾರ್ಥಿಗಳು ಪ್ರವೇಶ
ಪಡೆದಿರುತ್ತಾರೆ.
ಅಷ್ಟೇ ಅಲ್ಲದೇ ಹ್ಯೂಮನ್ ರಿಸೋರ್ಸ್ ಮ್ಯಾನೇಜ್ಮೆಂಟ್
ವಿಷಯದ ಪಿಜಿ ಡಿಪ್ಲೊಮಾ ಕಾರ್ಯಕ್ರಮವನ್ನು 107 ವಿದ್ಯಾರ್ಥಿ
ಆಯ್ಕೆ ಮಾಡಿಕೊಂಡಿರುತ್ತಾರೆ. ಈ ಎಲ್ಲಾ ದೂರ ಶಿಕ್ಷಣ
ವಿದ್ಯಾರ್ಥಿಗಳಿಗೆ ಕ್ಷಣಮಾತ್ರದ ಅಗತ್ಯ ಮಾಹಿತಿ ರವಾನಿಸಲು
ಕರಾಮುವಿಯು ಟೆಲಿಗ್ರಾಂನ ಉಪಯೋಗ ಪಡೆದಿದೆ
ಟೆಲಿಗ್ರಾಂ ಆಪ್ ವಾಟ್ಸಾಪ್ನಂತಯೇ ಕಾರ್ಯನಿರ್ವಹಿಸುತ್ತಿದ್ದು,
ಇದರಲ್ಲಿ 2 ಲಕ್ಷದ ತನಕ ಸದಸ್ಯರನ್ನು
ಮಾಡಬಹುದಾಗಿದ್ದು, ಕೇವಲ ಅಡ್ಮಿನ್ ಮಾತ್ರ ಮೆಸೇಜ್
ಮಾಡುವಂತೆ ಸೆಟ್ ಮಾಡಬಹುದು. ಅಂತೆಯೇ ಇದರ
ವಿಶೇಷತೆ ಎಂದರೆ ಸದಸ್ಯರು ಅಥವಾ ಅಡ್ಮಿನ್ ತಮ್ಮ ಪೋನ್
ನಂಬರ್ ಯಾರಿಗೂ ಸಿಗದಂತೆ ಸೆಟ್ ಮಾಡಬಹುದಾಗಿದೆ ಅಲ್ಲದೇ
ತಡವಾಗಿ ಸೇರಿದ ಸದಸ್ಯರು ಸಹಾ ಈಗಾಗಲೇ ಕಳುಹಿಸಿರುವ
ಮೆಸೇಜ್ ಗಳನ್ನು ಓದಬಹುದಾಗಿದೆ ಎಂದು ಕರಾಮುವಿ
ಪ್ರಕಟಣೆ ತಿಳಿಸಿದೆ.