ಕೇಂದ್ರಗಳಲ್ಲಿ ಲಸಿಕೆ

ನಿರಾತಂಕವಾಗಿ ಲಸಿಕೆ ಪಡೆಯುವಂತೆ ಸಲಹೆ

ದಾವಣಗೆರೆ ಜ.16
ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಆವರಣದಲ್ಲಿ ಶನಿವಾರದಂದು
ಸಂಭ್ರಮದ ವಾತಾವರಣ ಏರ್ಪಟ್ಟಿತ್ತು. ವಿಶ್ವವನ್ನೇ ಬೆಚ್ಚಿ
ಬೀಳಿಸಿದ ಕೋವಿಡ್ ಲಸಿಕೆ ನೀಡಲು ಎಲ್ಲ ರೀತಿಯ ಪೂರಕ
ಸಿದ್ದತೆಯೊಂದಿಗೆ ವÉೈದ್ಯರು, ಶುಶ್ರೂಷಕರು
ಸಜ್ಜಾಗಿದ್ದರು.
ಬೆಳಿಗ್ಗೆ ರಾಷ್ಟ್ರದ ಪ್ರಧಾನಮಂತ್ರಿಯವರಾದ
ನರೇಂದ್ರ ಮೋದಿಯವರು ವಿಡಿಯೋ ಕಾನ್ಫರೆನ್ಸ್ ಮೂಲಕ
ಕೋವಿಡ್ ಲಸಿಕಾಕರಣದ ಕುರಿತು ಭಾಷಣ ಮುಗಿಸಿ, ಲಸಿಕಾಕರಣಕ್ಕೆ
ಸಾಂಕೇತಿಕ ಚಾಲನೆ ನೀಡಿದ ನಂತರ ಜಿಲ್ಲಾ ಚಿಗಟೇರಿ
ಆಸ್ಪತ್ರೆಯಲ್ಲಿ ಸಂಸದರು, ಶಾಸಕರು ಮತ್ತು
ಅಧಿಕಾರಿಗಳು ಕೋವಿಡ್ ಲಸಿಕಾಕರಣ ಕಾರ್ಯಕ್ರಮಕ್ಕೆ
ಸಾಂಕೇತಿಕವಾಗಿ ಚಾಲನೆ ನೀಡಿದರು.
ರಾಷ್ಟ್ರದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು
ಇಡೀ ದೇಶವನ್ನು ಉದ್ದೇಶಿಸಿ ಮಾತನಾಡಿ, ಕೊರೊನಾ ಸಮರದ
ವಿರುದ್ದ ಹೋರಾಟ ಮಾಡಿದ ಸಂಕಷ್ಟದ ಸಮಯ, ಅದರ
ವಿರುದ್ದ ಹೋರಾಡಿದ ಸೇನಾನಿಗಳ ಕಾರ್ಯವನ್ನು,
ದೇಶವಾಸಿಗಳ ಸಹಕಾರವನ್ನು ಸ್ಮರಿಸಿದ ಅವರು ಕೇಂದ್ರ
ಸರ್ಕಾರ ಜಾರಿಗೆ ತಂದಿರುವ ಈ ಲಸಿಕಾಕರಣ ಕಾರ್ಯಕ್ರಮ
ಯಶಸ್ವಿಯಾಗಿ ನಡೆದು ದೇಶ ಕೊರೊನಾ ಮುಕ್ತವಾಗಲಿದೆ
ಎಂದು ಆಶಾಭಾವನೆಯನ್ನು ವ್ಯಕ್ತಿಪಡಿಸಿ, ಕಾರ್ಯಕ್ರಮದ
ಯಶಸ್ಸಿಗೆ ಹಾರೈಸಿದರು.
ಪ್ರಧಾನಮಂತ್ರಿಗಳ ಭಾಷಣ ಮುಗಿಯುತ್ತಿದ್ದಂತೆ
ಜಿಲ್ಲಾಸ್ಪತ್ರೆಯಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು
ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಾಗೂ ಮೊದಲನೇ
ಸೆಷನ್‍ನಲ್ಲಿ ಲಸಿಕೆ ಪಡೆಯಲು ಪಾಲ್ಗೊಂಡಿದ್ದ ವೈದ್ಯರು,

ಶುಶ್ರೂಷಕರು, ಲ್ಯಾಬ್ ಟೆಕ್ನೀಷಿನ್, ಡಿ ಗ್ರೂಪ್ ನೌಕರರಿಗೆ
ಧೈರ್ಯ ಹೇಳಿ ಹುರಿದುಂಬಿಸಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಂಸದರಾದ ಜಿ.ಎಂ
ಸಿದ್ದೇಶ್ವರ ಮಾತನಾಡಿ, ಇಂದು ನಮ್ಮ ರಾಷ್ಟ್ರದ ಪ್ರಧಾನ
ಮಂತ್ರಿಯವರು ಇಡೀ ದೇಶವನ್ನುದ್ದೇಶಿಸಿ ಮಾತನಾಡಿ
ಕೊರೊನಾ ಲಸಿಕಾಕರಣಕ್ಕೆ ಚಾಲನೆ ನೀಡಿದ್ದಾರೆ. ಇದೀಗ ವಿಡಿಯೋ
ಕಾನ್ಫರೆನ್ಸ್ ಮೂಲಕ ಅವರ ಭಾಷಣ ಕೇಳಿದ ನಂತರ ನಮ್ಮ
ಜಿಲ್ಲೆಯಲ್ಲಿಯೂ ಇಂದು ಸಾಂಕೇತಿಕವಾಗಿ ಲಸಿಕಾಕರಣಕ್ಕೆ ಚಾಲನೆ
ನೀಡಲಾಗಿದೆ. ಜಿಲ್ಲೆಯ ಏಳು ಕೇಂದ್ರಗಳಲ್ಲಿ ಇಂದು
ಲಸಿಕಾಕರಣ ನಡೆಯುತ್ತಲಿದೆ. ಪ್ರತಿ ಕೇಂದ್ರದಲ್ಲಿ 100 ಜನರಿಗೆ
ಲಸಿಕೆ ನೀಡಲಾಗುತ್ತಿದೆ. ಯಾವುದೇ ಭಯಕ್ಕೆ ಒಳಗಾಗದೇ
ಲಸಿಕೆಯನ್ನು ಪಡೆಯಬಹುದಾಗಿದ್ದು ಕೇಂದ್ರ ಸರ್ಕಾರದ ಈ
ಲಸಿಕಾ ಕಾರ್ಯಕ್ರಮ ಸಂಪೂರ್ಣ ಯಶಸ್ಸು ಕಾಣಲಿದೆ ಎಂದು
ಹೇಳಿದರು.
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಕೇಂದ್ರದಲ್ಲಿ
ಪ್ರಧಾನಿ ಮಂತ್ರಿಗಳು ಕೊರೊನಾ ಲಸಿಕಾಕರಣ ಕುರಿತು
ಭಾಷಣ ಮಾಡಿ, ಲಸಿಕಾ ಕರಣಕ್ಕೆ ಚಾಲನೆ ನೀಡಿದ ತಕ್ಷಣ ಜಿಲ್ಲಾ
ಕೇಂದ್ರದಲ್ಲಿ ಚಾಲನೆ ನೀಡಲಾಗಿದೆ. ಮೊದಲ ಹಂತದಲ್ಲಿ ಜಿಲ್ಲೆಯ
ಏಳು ಕೇಂದ್ರಗಳಲ್ಲಿ ಲಸಿಕಾಕರಣಕ್ಕೆ ಎಲ್ಲ ವ್ಯವಸ್ಥೆ
ಮಾಡಿಕೊಳ್ಳಲಾಗಿದೆ. 18 ವರ್ಷ ಮೇಲ್ಪಟ್ಟ, ಯಾವುದೇ ಇತರೆ
ಕಾಯಿಲೆಗಳ ಗಂಭೀರತೆ ಇಲ್ಲದ ತಲಾ ನೂರು ಆರೋಗ್ಯ
ಕಾರ್ಯಕರ್ತ ಫಲಾನುಭವಿಗಳ ಪಟ್ಟಿ ಈಗಾಗಲೇ
ತಯಾರಿಸಿದ ಪ್ರಕಾರ ಇಂದು ಲಸಿಕಾರಕರಣ ಮಾಡಲಾಗುತ್ತಿದೆ.
ಮೊದಲನೇ ಹಂತದಲ್ಲಿ 6876 ಸರ್ಕಾರಿ, 12194 ಖಾಸಗಿ ಸೇರಿದಂತೆ
ಒಟ್ಟು 19070 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಪಟ್ಟಿ
ತಯಾರಿಸಿಡಲಾಗಿದೆ.
ಯಾವುದೇ ರೀತಿಯ ಭಯವಿಲ್ಲದೇ, ನಿರಾತಂಕವಾಗಿ ಲಸಿಕೆ
ಪಡೆಯಬಹುದಾಗಿದ್ದು, ಕೋವ್ಯಾಕ್ಸಿನ್‍ಗೆ ಸಂಬಂಧಿಸಿದಂತೆ
ಯಾರೂ ಕೂಡ ಸುಳ್ಳು ಸುದ್ದಿ, ವದಂತಿಗಳಿಗೆ
ಕಿವಿಗೊಡಕೂಡದು. ಯಾರಾದರೂ ಒಂದು ಪಕ್ಷ
ಯಾರಾದರೂ ಸುಳ್ಳುಸುದ್ದಿ, ವದಂತಿಗಳನ್ನು ಹಬ್ಬಿಸಿದರೆ
ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಲಾಗುವುದು
ಎಂದರು.
ಇಂದು ಜಿಲ್ಲಾ ಚಿಗಟೇರಿ ಆಸ್ಪತ್ರೆ, ಬಾಪೂಜಿ/ಜೆಜೆಎಂಸಿ ಕಾಲೇಜು,
ದಾವಣಗೆರೆ, ಹರಿಹರ, ಹೊನ್ನಾಳಿ, ಚನ್ನಗಿರಿ ಮತ್ತು ಜಗಳೂರು
ತಾಲ್ಲೂಕು ಆಸ್ಪತ್ರೆಗಳು ಹಾಗೂ ಜಗಳೂತು ತಾಲ್ಲೂಕಿನ
ಬಿಳಿಚೋಡು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಇಂದು
ಕೋವಿಡ್ ಲಸಿಕೆಯಾದ ಕೋವಿಶೀಲ್ಡ್ ನೀಡಿಕೆಗೆ ಚಾಲನೆ ನೀಡಿಲಾಗಿದೆ
ಮೊದಲನೇ ಸೆಷನ್‍ನಲ್ಲಿ ಪ್ರತಿ ಕೇಂದ್ರಗಳಲ್ಲಿ ತಲಾ ನೂರು
ಜನರಿಗೆ ಲಸಿಕೆ ನೀಡಲಾಗುತ್ತಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಮಾತನಾಡಿ,
ಲಸಿಕಾಕರಣ ಕಾರ್ಯಕ್ರಮ ಶಾಂತ ರೀತಿಯಲ್ಲಿ ನಡೆಯಲು ಎಲ್ಲ
ಸಿದ್ದತೆ ಮಾಡಿಕೊಳ್ಳಲಾಗಿದೆ. ಯಾರೂ ಕೂಡ ಲಸಿಕಾಕರಣ
ಕುರಿತು ಅನಗತ್ಯ ಗೊಂದಲ ಸೃಷ್ಟಿಸಬಾರದು. ಸುಳ್ಳು
ಸುದ್ದಿ, ವದಂತಿಗೆ ಎಡೆ ಮಾಡಿದರೆ ಅವರ ವಿರುದ್ದ ಪ್ರಕರಣ
ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್ ಮಾತನಾಡಿ, ಮುಂದಿನ
ದಿನಗಳಲ್ಲಿ ಕೋವಿಡ್‍ನಿಂದ ಆಗಬಹುದಾದ ಸಾವು ನೋವು
ಮತ್ತು ಸಮುದಾಯ ಹರಡುವಿಕೆಯನ್ನು ತಡೆಯಲು
ಕೇಂದ್ರ ಸರ್ಕಾರ ಕೋವಿಡ್ ಲಸಿಕಾಕರಣ ಕಾರ್ಯಕ್ರಮ ಜಾರಿಗೆ
ತಂದಿದೆ. ಮೊದಲನೇ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ
ಲಸಿಕೆ ನೀಡಲಾಗುತ್ತಿದ್ದು ಜಿಲ್ಲೆಯಲ್ಲಿ ಒಟ್ಟು 36 ಕೇಂದ್ರಗಳಲ್ಲಿ
19070 ಜನರಿಗೆ ಲಸಿಕೆ ನೀಡಲಾಗುವುದು. ಒಟ್ಟು 108 ನುರಿತ
ಲಸಿಕಾಕಾರರು ಲಸಿಕೆ ನೀಡುವರು ಎಂದರು.
ಆರ್‍ಸಿಹೆಚ್‍ಓ ಡಾ.ಮೀನಾಕ್ಷಿ ಮಾತನಾಡಿ, ಏಳು ಕೇಂದ್ರಗಳಲ್ಲಿ
ಒಟ್ಟು 30 ನುರಿತ ಲಸಿಕಾರರು ಲಸಿಕೆ ನೀಡುವರು. ಆನ್‍ಲೈನ್‍ನಲ್ಲಿ
ಲಸಿಕೆ ಪಡೆಯುವವರ ಒಪ್ಪಿಗೆ ಪತ್ರವನ್ನು ಅಪ್‍ಲೋಡ್
ಮಾಡಿದ ನಂತರ ಲಸಿಕೆ ನೀಡಲಾಗುವುದು. ಲಸಿಕೆಗೆ ಮುನ್ನ
ಅವರೊಂದಿಗೆ ಆಪ್ತಸಮಾಲೋಚನೆ ನಡೆಸಿ, ಲಸಿಕೆ ನೀಡಿದ
ನಂತರ ವಿಶ್ರಾಂತಿ ಕೊಠಡಿಯಲ್ಲಿ ಅವರನ್ನು ಅರ್ಧ ಗಂಟೆ
ಅಬ್ಸವರ್ಷೇನ್‍ಲ್ಲಿಟ್ಟು ಕಳುಹಿಸಿಕೊಡಲಾಗುವುದು. ಎಲ್ಲ ಲಸಿಕಾ
ಕೇಂದ್ರಗಳಲ್ಲಿ ಅಡ್ಡ ಪರಿಣಾಮಗಳೇನಾದರೂ
ಸಂಭವಿಸಿದರೆ ಅಗತ್ಯವಾಗಿ ಬೇಕಾದ ಔಷಧೋಪಚಾರದ ಎಲ್ಲ
ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
ಜಿಲ್ಲಾ ಚಿಗಟೇರಿ ಆಸ್ಪತ್ರೆಯ ಡಾ.ಶಶಿಧರ್ ಕೋವಿಶೀಲ್ಡ್ ಲಸಿಕೆ
ಪಡೆದ ನಂತರ ಮಾತನಾಡಿ, ಲಸಿಕೆ ಪಡೆದ ನಂತರ
ಯಾವುದೇ ಭಯವಾಗಲೀ, ಅಡ್ಡ ಪರಿಣಾಮವಾಗಲೀ ನನಗೆ
ಆಗಿಲ್ಲ. ನಿರಾತಂಕವಾಗಿ ಎಲ್ಲರೂ ಲಸಿಕೆ ಪಡೆಯಬಹುದು.
ಮೊದಲಿಗೆ ನನಗೆ ಕೌನ್ಸಲಿಂಗ್ ರೂಂನಲ್ಲಿ ಕೌನ್ಸಲಿಂಗ್ ಮಾಡಿ
ನಂತರ ನನ್ನ ಒಪ್ಪಿಗೆ ಪತ್ರ ವೆಬ್‍ಪೋರ್ಟಲ್‍ನಲ್ಲಿ ಅಪ್‍ಲೋಡಿದ
ನಂತರ ಲಸಿಕೆ ನೀಡಲಾಯಿತು. ನಂತರ ವಿಶ್ರಾಂತಿ ಕೊಠಡಿಯಲ್ಲಿ
ಅರ್ಧ ಗಂಟೆ ಅಬ್ಸರ್ವೇಷನ್ ಮಾಡಿದ ನಂತರ ಹೊರಗೆ
ಬಂದಿದ್ದೇನೆ. ಆರಾಮಾಗಿದ್ದೇನೆ ಎಂದರು.
ಲಸಿಕೆ ಪಡೆದ ಆಸ್ಪತ್ರೆಯ ಡಿ ಗ್ರೂಪ್ ನೌಕರ ರಾಜಾಭಕ್ಷ
ಮಾತನಾಡಿ, ನಾನು ಮೊದಲನೇ ಹಂತದಲ್ಲಿ ಮೊದಲನೇ ದಿನವೇ
ಲಸಿಕೆ ಪಡೆಯುತ್ತಿರುವುದು ಖುಷಿಯಾಗಿದೆ. ಲಸಿಕಾ
ಪ್ರಕ್ರಿಯೆಯಲ್ಲಿ ಯಾವುದೇ ಭಯ ಆಗಲಿಲ್ಲ. ಲಸಿಕೆ
ಪಡೆದು ಅರ್ಧ ಗಂಟೆ ನಂತರವೂ ಆರಾಮಾಗಿದ್ದೇನೆ.
ಯಾರೂ ಯಾವುದೇ ರೀತಿಯ ಆತಂಕ್ಕೆ ಒಳಗಾಗದೇ
ಧೈರ್ಯವಾಗಿ ಲಸಿಕೆ ಪಡೆಯಬಹುದೆಂದರು.

ಚಿಗಟೇರಿ ಆಸ್ಪತ್ರೆಯಲ್ಲಿ ಲಸಿಕಾಕರಣ ಚಾಲನೆ ವೇಳೆ ಡಾ.
ಶಶಿಧರ್, ಡಾ.ಸಂಜಯ್, ಡಾ.ಯತೀಶ್, ಶುಶ್ರೂಷಕರಾದ
ಗುಣೇಶ್ವರಿ, ಅಂಬುಜಾಕ್ಷಿ, ಶಿವಲೀಲಮ್ಮ.ಜಿ.ಎಸ್, ಶಾಂತಿ, ಆಶಾ ಕಾಂಬ್ಳಿ,
ಲ್ಯಾಬ್ ಟೆಕ್ನೀಷಿಯನ್ ಕರಿಬಸಪ್ಪ, ಡಿ ಗ್ರೂಪ್ ನೌಕರರಾದ
ರಾಜಾಭಕ್ಷ, ರವಿರಾಜ್ ಇತರರು ಲಸಿಕೆ ಹಾಕಿಸಿಕೊಂಡರು.
ಈ ವೇಳೆ ದಾವಣಗೆರೆ ತಹಶೀಲ್ದಾರ್ ಗಿರೀಶ್, ಡಿಹೆಚ್‍ಓ ಡಾ.ನಾಗರಾಜ್,
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಜಯಪ್ರಕಾಶ್, ತಾಲ್ಲೂಕು
ವೈದ್ಯಾಧಿಕಾರಿ, ಇತರೆ ವೈದ್ಯರು, ಸಿಬ್ಬಂದಿ, ಆರೋಗ್ಯ
ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *