ದಾವಣಗೆರೆ ಜ.17
ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳು ಹಾಗೂ ಹೊನ್ನಾಳಿ ಕ್ಷೇತ್ರದ ಶಾಸಕರಾದ
ಎಂ.ಪಿ.ರೇಣುಕಾಚಾರ್ಯರು ಜ. 18 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.
ಜ.18 ರ ಬೆಳಿಗ್ಗೆ 9 ಗಂಟೆಗೆ ಹೊನ್ನಾಳಿಯಿಂದ ಹೊರಟು
ಬೆಳಿಗ್ಗೆ 10 ಗಂಟೆಗೆ ದಾವಣಗೆರೆಗೆ ಆಗಮಿಸಿ ದಾವಣಗೆರೆ ಸ್ಮಾರ್ಟ್ಸಿಟಿ
ಯೋಜನೆ ಅಡಿ ಕ.ರಾ.ರ.ಸಾ ಸಂಸ್ಥೆಯ ಕೇಂದ್ರ ಬಸ್ ನಿಲ್ದಾಣ,
ದಾವಣಗೆರೆ ಇಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣ
ಪುನರ್ನಿರ್ಮಾಣದ ಶಂಕುಸ್ಥಾಪನೆ ಹಾಗೂ ನೂತನ ತಾತ್ಕಾಲಿಕ
ಬಸ್ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು
ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳ
ವಿಶೇಷ ಕರ್ತವ್ಯಾಧಿಕಾರಿ ಕೆ.ರುದ್ರೇಶಿ ಪ್ರಕಟಣೆಯಲ್ಲಿ
ತಿಳಿಸಿದ್ದಾರೆ.