ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಗುರುಭವನದಲ್ಲಿ ಇಂದು 3 ತಾಲೂಕುಗಳ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳ ಮತ್ತು ಸ್ವಯಂ ಸಂಸ್ಥಯ ಪಧಾದಿಕಾರಿಗಳಿಗೆ ಬಾಲ್ಯವಿವಾಹ ನಿಷೇದ ಕಾಯ್ದೆ 2006 ತಿದ್ದುಪಡಿ 2016 ಹಾಗೂ ಪೋಕ್ಸೋ ಕಾಯ್ದ 2012 ಕುರಿತು ಒಂದು
ದಿನದ ಸಂವಾದ ಕಾರ್ಯಕ್ರಮ ಹೊನ್ನಾಳಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ವತಿಯಿಂದ ನಡೆಸಲಾಯಿತು. ಇದರ ಅಧ್ಯಕ್ಷತೆಯನ್ನು ಹೊನ್ನಾಳಿ ತಾಲೂಕಿನ ದಂಡಾದಿಕರಿಗಳಾದ ತುಷಾರ್ ಬಿ ಹೊಸುರಾರವರು ಹಾಗೂ ರಾಜ್ಜ ಮಕ್ಕಳ ಆಯೋಗದ ರಾಜ್ಯಾದ್ದೆಕ್ಷರಾದ ಟಿ ಶಂಕರ್‍ಪ್ಪನವರು ಗಿಡಕ್ಕೆ ನೀರನ್ನು ಹಾಕುವುದರ ಮೂಲಕ ಉದ್ಗಾಟನೆಯನ್ನು ಮಾಡಿದರು.

ರಾಜ್ಯ ಮಕ್ಕಳ ಆಯೋಗದ ರಾಜ್ಯಾದ್ದಕ್ಷರಾದ ಟಿ ಶಂಕರಪ್ಪನವರು ಮಾತನಾಡಿ ಹೊನ್ನಾಳಿ ಚನ್ನಗೆರೆ ನ್ಯಾಮತಿ 3 ತಾಲೂಕಿನ ಎಲ್ಲಾ 

ಅಧಿಕಾರಿಗಳು ಸೇರಿಕೊಂಡಿದ್ದೀರಿ ತುಂಬಾ ಸಂತೋಷದ ವಿಷಯ, ರಾಜ್ಯದ ಪ್ರತಿ ತಾಲೂಕುಗಳಲ್ಲಿ ಮಹಿಳೆ ಮತ್ತು ಮಕ್ಕಳ ಬಗ್ಗೆ ಆಗುತ್ತಿರುವ ಲೈಂಗಿಕ ದೌರ್ಜನ್ಯ ಹಿನ್ನಲೆಯಲ್ಲಿ ಕಾನೂನಿನ ಬಗ್ಗೆ ಸವಿಸ್ಥಾರವಾಗಿ ಮತ್ತು ಯಾವ ಯಾವ ಕಾಯ್ದೆಯಿಂದ ಮಕ್ಕಳನ್ನು ರಕ್ಷಣೆ ಮತ್ತು ಪಾಲನೆ ಹೇಗೆ ಮಾಡಬಹುದು, ಎಂದು ವಿವರಿಸುತ್ತಾ ಪೋಕ್ಷಾ ಕಾಯ್ದೆ ಬಾಲ್ಯ ವಿವಾಹ ನಿಷೇಧ ಕಾಯ್ದೆ ಇನ್ನೂ ಮುಂತಾದ ಕಾಯ್ದೆಗಳ
ಬಗ್ಗೆ 4 ಗಂಟೆಗಳ ಕಾಲ ಎಲ್ಲಾ ಅಧಿಕಾರಿಗಳಿಗೆ ತಿಳಿಸಿದರು. ಅದು ಈ ಕೆಳಗಿನಂತಿದೆ.

ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಅಧಿನಿಯಮ ಮತ್ತು

ನಿಯಮಗಳು-2012ರ (POCSO ACT & RULES-2012) ಅಡಿಯಲ್ಲಿ ಮಗುವಿನ ಮೇಲಾಗುವ ಲೈಂಗಿಕ ದೌರ್ಜನ್ಯ ಮತ್ತು ಶಿಕ್ಷೆ

‘ಮಗು’ ಎಂದರೆ 18 ವರ್ಷ ಪೂರ್ಣಗೊಳಿಸದ ವ್ಯಕ್ತಿ.

ಲೈಂಗಿಕ ಅಪರಾಧಗಳು

  • ಯಾವುದೇ ವ್ಯಕ್ತಿ ಮಗುವನ್ನು ಯಾವುದೇ ರೀತಿಯಿಂದ
    ಪ್ರಚೋದಿಸುವುದು, ಮಗುವಿನ | ಮೇಲೆ ಲೈಂಗಿಕ ದೌರ್ಜನ್ಯ (Penetrative sexual assault) ಎಂದೆನಿಸುತ್ತದೆ (ಕಲಂ 3)
  • ಮಗುವಿನ ಮೇಲೆ ಯಾವುದೇ ವ್ಯಕ್ತಿ ಬಲಾತ್ಕಾರವಾಗಿ ಲೈಂಗಿಕ ದೌರ್ಜನ್ಯ ಎಸಗಿದರೆ, ಬಲಾತ್ಕಾರಯುತ ಲೈಂಗಿಕ ಹಲ್ಲೆ aggravated penetrative sexual assault) ಎಂದೆನಿಸುತ್ತದೆ. (ಕಲಂ 5)
  • ಲೈಂಗಿಕ ಉದ್ದೇಶದಿಂದ ಮಗುವಿನ ದೇಹದ ನಾನಾ ಭಾಗಗಳನ್ನು ಮುಟ್ಟುವುದು ಹಾಗೂ ಮುಟ್ಟುವಂತೆ ಪ್ರೇರೇಪಿಸುವುದು, ಲೈಂಗಿಕ ದೌರ್ಜನ್ಯ (sexual assault) ಎಂದೆನಿಸುತ್ತದೆ. (ಕಲಂ 7)

ಯಾವುದೇ ವ್ಯಕ್ತಿ ಮಗುವಿನ ಮೇಲೆ ತೀವ್ರ | ಸ್ವರೂಪದ ಲೈಂಗಿಕ ಹಲ್ಲೆ (Aggravated | sexual assault) ಎಸಗಿದರೆ, (ಕಲಂ9)

ಯಾವುದೇ ವ್ಯಕ್ತಿ ಮಗುವಿಗೆ ಲೈಂಗಿಕ ಕಿರುಕುಳ (sexual harassment) ನೀಡಿದಲ್ಲಿ ಅಪರಾಧವಾಗುವುದು. (ಕಲಂ 11)

  • ಮಗುವನ್ನು ಯಾವುದೇ ರೀತಿಯ ಅಶ್ಲೀಲ ಚಿತ್ರಗಳ ರಚನೆಗಾಗಿ ಬಳಸಿಕೊಂಡಲ್ಲಿ ಅದು ಅಪರಾಧವಾಗುವುದು (ಕಲಂ 13)
  • ಯಾವುದೇ ಮಗುವಿನ ಅಶ್ಲೀಲ ಚಿತ್ರಗಳನ್ನು | ಸಂಗ್ರಹಿಸಿದಲ್ಲಿ, ಅದು ಅಪರಾಧವಾಗುವುದು. | (ಕಲಂ 15)
    ಶಿಕ್ಷೆಗಳು
    10 ವರ್ಷಕ್ಕೆ ಕಡಿಮೆಯಾಗದ ಜೀವಾವಧಿ ಶಿಕ್ಷೆಯವರೆಗೂ ವಿಸ್ತರಿಸಬಹುದಾದ ಕಠಿಣ ಶಿಕ್ಷೆ. (00 6)

3 ವರ್ಷಕ್ಕೆ ಕಡಿಮೆಯಿಲ್ಲದ ಕಾರಾಗೃಹವಾಸ ಮತ್ತು ದಂಡ. (ಕಲಂ 8)

5 ವರ್ಷಕ್ಕೆ ಕಡಿಮೆಯಿಲ್ಲದ 7 ವರ್ಷಗಳವರೆಗೆ | ವಿಸ್ತರಿಸಬಹುದಾದ ಸಜೆ ಮತ್ತು ದಂಡ, (ಕಲಂ 10)

3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ದಂಡ (ಕಲಂ 12)

5 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಮತ್ತು ದಂಡ. (ಕಲಂ 14)

3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ವಾಸ ಮತ್ತು ದಂಡ. (ಕಲಂ 15)

ಈ ಕಾರ್ಯಕ್ರಮದಲ್ಲಿ ಭಾಗಿಯಾದವರು:- ರಾಜ್ಯಾ ಮಕ್ಕಳ ಆಯೋಗದ ರಾಜ್ಯ ಅಧ್ಯಕ್ಷರು ಟಿ ಶಂಕರಪ್ಪ, ದಂಡಾಧಿಕಾರಿಗಳು ತುಷಾರ್ ಬಿ ಹೊಸೂರಾ, EEO ಗಂಗಾಧರಮೂರ್ತಿ, ರಾಮ್ ಭೋವಿ , ಸ್ಪೂರ್ತಿ ಸಂಸ್ಥೆಯ ರೂಪ್ಲನಾಯ್ಕ್, BEO ರಾಜೀವ್, CPI ದೇವರಾಜ್ ,ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ವೀರಭದ್ರಯ್ಯ ,ಚನ್ನಗಿರಿ ಪಟ್ಟಣ ಪಂಚಾಯಿತಿ ಬಸುರಾಜ್,BEO ಚಿದಾನಂದ ಸ್ವಾಮಿ, ಸಿಡಿಪಿಓ ಮಹಾಂತೇಶ್ ಸ್ವಾಮಿ ,ಮೂರು ತಾಲೂಕುಗಳ ತಾಲೂಕು ಅಧಿಕಾರಿಗಳು ಸಹ ಭಾಗಿಯಾಗಿದ್ದರು

Leave a Reply

Your email address will not be published. Required fields are marked *