ಬೆಂಗಳೂರು ದಿ 17-01-2021ರಂದು ಅಖಿಲ ಭಾರತ ರೆಡ್ಡಿ ಒಕ್ಕೂಟ(ರಿ) ಕರ್ನಾಟಕ ರಾಜ್ಯ ಘಟಕ ವತಿಯಿಂದ 2 ನೇ ರಾಜ್ಯಮಟ್ಟದ ಕಾರ್ಯಕಾರಿಣಿ ಸದಸ್ಯರ ಸಭೆ ಮತ್ತು ರೆಡ್ಡಿ ಕ್ಷೇಮಾಭಿವೃದ್ಧಿ ಸಂಘ(ರಿ) ಬೆಂಗಳೂರು .ವತಿಯಿಂದ 2021 ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ರಾಜ್ಯಮಟ್ಟದ ಎರಡನೆಯ ಕಾರ್ಯಕಾರಣಿ ಸಭೆಯು ಬೆಂಗಳೂರು ರೆಡ್ಡಿ ಸಮಾಜದ ಕೇಂದ್ರ ಕಚೇರಿಯಲ್ಲಿ ನಡೆಯಿತು. ಈ ಸಭೆಯ ನಡಾವಳಿಗಳು ಈ ಕೆಳಗಿನಂತಿದೆ👇
- ರಾಜ್ಯದ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ನವರಿಗೆ ರೆಡ್ಡಿ ನಿಗಮ ಮಂಡಳಿ ಸ್ಥಾಪನೆ ಹಾಗೂ ಬಿಜೆಪಿ ಪಕ್ಷದಿಂದ ಗೆದ್ದಂತಹ ರೆಡ್ಡಿ ಸಮಾಜದ ಶಾಸಕರಿಗೆ ಸಚಿವ ಸ್ಥಾನ ಕಲ್ಪಿಸುವಂತೆ ಮಾನ್ಯ ಬೊಮ್ಮನಹಳ್ಳಿ ಶಾಸಕರಾದ ಸತೀಶರೆಡ್ಡಿ,ಯಲಹಂಕ ಶಾಸಕರಾದ ವಿಶ್ವನಾಥ ರೆಡ್ಡಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವುದು.
2 .ರಾಜ್ಯಮಟ್ಟದ ಕಾರ್ಯಕಾರಿಣಿ ಸದಸ್ಯರು,ಉಪಾಧ್ಯಕ್ಷರು ಕಾರ್ಯಾಧ್ಯಕ್ಷರು ,ಸಂಚಾಲಕರು ನೇಮಕ ಮಾಡುವುದು. - ಬೆಂಗಳೂರು ವಿಶ್ವವಿದ್ಯಾನಿಲಯ ಉಪ ಕುಲಪತಿ ನೇಮಕಾತಿಯಲ್ಲಿ ರೆಡ್ಡಿ ಸಮುದಾಯಕ್ಕೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳಿಗೆ ಒತ್ತಾಯಿಸುವುದು.
- ಪ್ರತಿತಿಂಗಳು ಗ್ರಾಮ ಮತ್ತು ಪಟ್ಟಣದಲ್ಲಿ ಹೇಮ ,ವೇಮನ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.
- ರೆಡ್ಡಿ ಸಮುದಾಯದ ಸಾಧಕರಿಗೆ ಸನ್ಮಾನ ಮತ್ತು ಸಂಘಟಕರಿಗೆ ಅಭಿನಂದನಾ ಪತ್ರ ಐಡಿ ಕಾರ್ಡ್ ನೀಡುವುದು.
- ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಮತ್ತು ಪ್ರತಿಭಾ ಪತ್ರ ನೀಡಿ ಸನ್ಮಾನಿಸಲಾಗುವುದು. ಎಂದು ರಾಜ್ಯಾಧ್ಯಕ್ಷರಾದ
- ಮೇಜರ್ N ರಘುರಾಮ್ ರೆಡ್ಡಿ (ನಿ) ಯವರ ಒಪ್ಪಿಗೆ ಮೇರೆಗೆ ಈ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳಾದ
ಗುರು ನಾಥ ರೆಡ್ಡಿ ಚಿಂತಾಕಿ ತಿಳಿಸಿದರು. ಸಭೆಯ ಅಧ್ಯಕ್ಷತೆಯನ್ನು ರಾಜ್ಯ ಅಧ್ಯಕ್ಷರು ಮೇಜರ್ N ರಘುರಾಮರೆಡ್ಡಿ (ನಿ) . ಹಾಗೂ ರಾಜ್ಯ ಉಪಾಧ್ಯಕ್ಷರು ಮಂಜುನಾಥ್ ರೆಡ್ಡಿ.ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುನಾಥ ರೆಡ್ಡಿ.ರಾಜ್ಯ ಖಜಾಂಚಿ ಮನೋಜ್ ಜಿ ರೆಡ್ಡಿ . ರಾಜ್ಯ ಕಾರ್ಯಕಾರಣಿ ಸದಸ್ಯರು ಶೇಖರ್ ಗಿರಡ್ಡಿ .ಮಂಜುನಾಥ ಬಸಪ್ಪ ಅಜ್ಜಮ್ಮಾರು.ಇತರರು ರೆಡ್ಡಿ ಮುಖಂಡರು ಭಾಗವಹಿಸಿದ್ದರು.