ದಾವಣಗೆರೆ ಜ. 19
ದಾವಣಗೆರೆ ನಗರದಲ್ಲಿ ಇರುವ ಕೆ.ಆರ್ ಮಾರುಕಟ್ಟೆ
ಸುತ್ತಮುತ್ತಲಿನ ಸಗಟು ಹಣ್ಣಿನ ಮಾರುಕಟ್ಟೆಯನ್ನು
ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮುಖ್ಯ
ಮಾರುಕಟ್ಟೆ ಪ್ರಾಂಗಣದಲ್ಲಿ ಜ.04 ರಲ್ಲಿ ಸ್ಥಳಾಂತರಗೊಳಿಸಿ
ವ್ಯಾಪಾರ ವಹಿವಾಟು ಪ್ರಾರಂಭಿಸಲಾಗಿದೆ. ದಾವಣಗೆರೆ ಜಿಲ್ಲೆ ಹಾಗೂ
ಇತರೆ ಸುತ್ತಮುತ್ತಲಿನ ಜಿಲ್ಲೆಗಳ ಸಮಸ್ತ ರೈತರು
ತಮ್ಮ ಉತ್ಪನ್ನಗಳನ್ನು ತಂದು ಮಾರಾಟ ಮಾಡಬಹುದೆಂದು
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿ
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.