ದಾವಣಗೆರೆ ಜ.19
72 ನೇ ಗಣರಾಜ್ಯೋತ್ಸವ ಪೂರ್ವಸಿದ್ದತಾ ಸಭೆಯು
ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರÀ ಅಧ್ಯಕ್ಷತೆಯಲ್ಲಿ
ಜ.16 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ
ನಡೆಯಿತು.
ಜಿಲ್ಲಾಧಿಕಾರಿಗಳು ಮಾತನಾಡಿ, ರಾಷ್ಟ್ರ ಹಬ್ಬವಾದ
ಗಣರಾಜ್ಯೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿರಲಿ.
ದೇಶದ ಗಣರಾಜ್ಯಕ್ಕಾಗಿ ಶ್ರಮಿಸಿದ ಎಲ್ಲಾ ಮಹನೀಯರನ್ನು
ನೆನೆಯುವ ದಿನ ಇದಾಗಿದ್ದು, ಅವರ ಶ್ರಮ, ತ್ಯಾಗ,
ಬಲಿದಾನಗಳಿಗೆ ನಾವು ಗೌರವ ಸಮರ್ಪಿಸೋಣ ಎಂದರು.
ಜನವರಿ 26 ರ ಬೆಳಿಗ್ಗೆ 09 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ
ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾರೋಹಣ ನೆರವೇರಲಿದೆ. ಎಲ್ಲಾ
ಇಲಾಖಾ ಮುಖ್ಯಸ್ಥರು ತಮ್ಮ ತಮ್ಮ ಕಚೇರಿಗಳಲ್ಲಿ
ಧ್ವಜಾರೋಹಣ ನೆರೆವೇರಿಸಿ ಬೆಳಿಗ್ಗೆ 09 ಗಂಟೆಯೊಳಗಾಗಿ
ಕ್ರೀಡಾಂಗಣದಲ್ಲಿ ಹಾಜರಿರಬೇಕು. ಅಂದು ಯಾವುದೇ
ಕಾರಣಕ್ಕೂ ಸರ್ಕಾರಿ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ರಜೆ
ಎಂದು ಭಾವಿಸದೇ ತಪ್ಪದೇ ಹಾಜರಿರಬೇಕು.
ಕೋವಿಡ್ ಹಿನ್ನಲೆಯಲ್ಲಿ ಈ ಬಾರಿ ಸರಳವಾಗಿ ಗಣರಾಜೋತ್ಸವ
ಆಯೋಜಿಸಲಾಗಿದ್ದು ಕೋವಿಡ್ ನಿಯಮಗಳನ್ನು
ಪಾಲಿಸಬೇಕು, ಯಾವುದೇ ಸಾಂಸ್ಕøತಿಕ
ಕಾರ್ಯಕ್ರಮಗಳು ಇರುವುದಿಲ್ಲ, ಹಾಗೂ
ಗಣರಾಜ್ಯೋತ್ಸವ ಆಚರಣೆ ಸಂಭಂಧ ಸರ್ಕಾರ ನೀಡುವ
ಮಾರ್ಗಸೂಚಿಗಳಿಗನುಗುಣವಾಗಿ ಕಾರ್ಯಕ್ರಮ
ಆಚರಿಸಲಾಗುವುದು ಎಂದರು
ಪ್ಲಾಸ್ಟಿಕ್ ಧ್ವಜ ಮತ್ತು ಪ್ಲಾಸ್ಟಿಕ್ ಹೂಗುಚ್ಚಗಳನ್ನು
ಮತ್ತು ಪ್ಲಾಸ್ಟಿಕ್ ನೀರಿನ ಬಾಟಲ್‍ಗಳನ್ನು ಯಾವುದೇ
ಕಾರಣಕ್ಕೂ ತರುವಂತಿಲ್ಲ. ಇಡೀ ಕಾರ್ಯಕ್ರಮದ
ಮೇಲುಸ್ತುವಾರಿಯನ್ನು ಅಪರ ಜಿಲ್ಲಾಧಿಕಾರಿ, ಉಪ ವಿಭಾಗಧಿಕಾರಿ,
ತಹಶೀಲ್ದಾರರು, ಪೊಲೀಸ್ ಉಪ ಅಧೀಕ್ಷಕರು,
ಮಹಾನಗರಪಾಲಿಕೆ ಆಯುಕ್ತರು ಇವರುಗಳು
ನೋಡಿಕೊಂಡು ಕಾರ್ಯಕ್ರಮ ಅರ್ಥಪೂರ್ಣಗೊಳಿಸಲು
ಸಹಕರಿಸಬೇಕು
ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಧ್ವಜ ಸಂಹಿತಿಯನ್ನು
ಕಾಪಾಡಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆಯವರು ಎಲ್ಲಾ
ಶಾಲೆಗಳಲ್ಲಿ 7.30 ಕ್ಕೆ ಧ್ವಜಾರೋಹಣ ನಡೆಯುವಂತೆ
ನೋಡಿಕೊಳ್ಳಬೇಕು ಹಾಗೂ ನಗರದ ಪ್ರಮುಖ
ವೃತ್ತಗಳಿಗೆ ಸಂಭಂಧಿಸಿದ ಇಲಾಖೆಗಳು ದೀಪಾಲಂಕಾರ
ಮಾಡಿಸಬೇಕು, ಪಥ ಸಂಚಲನೆಯಲ್ಲಿ ಭಾಗವಹಿಸುವ
ತಂಡಗಳಿಗೆ ಕೇಸರಿ, ಬಿಳಿ,ಹಸಿರು ಮಾಸ್ಕ್ಗಳನ್ನು ಖಾದಿ
ಗ್ರಾಮೋದ್ಯೋಗ ಇಲಾಖೆಯವರು ವ್ಯವಸ್ಥೆ
ಮಾಡಬೇಕೆಂದರು ಎಂದರು
ಈ ಹಿಂದೆ ಮಳೆಗಾಲದ ಸಮಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ
ನೀರು ನಿಂತು ಕಾರ್ಯಕ್ರಮಕ್ಕೆ ಅಡಚಣೆಯಾದ
ಸಂಧರ್ಭಗಳಿದ್ದು ಕ್ರೀಡಾಂಗಣದಲ್ಲಿ ಜಲ್ಲಿ ಮತ್ತು
ಮರಳನ್ನು ಹಾಕಿಸಿ ನೆಲವನ್ನು ಸಜ್ಜುಗೊಳಿಸಬೇಕು ಹಾಗೂ
ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಗಾಮ
ಪಂಚಾಯತಿಗಳು, ಸ್ಥಳೀಯ ಸಂಸ್ಥೆಗಳು ಹಾಗೂ
ಶಾಲೆಗಳಲ್ಲಿ ಧ್ವಜಾರೋಹಣದ ನಂತರ ಧ್ವಜವನ್ನು
ಸಾಯಂಕಾಲದವರೆಗೆ ವ್ಯವಸ್ಥಿತವಾಗಿ ನೋಡಿಕೊಳ್ಳುವಂತೆ
ಎಲ್ಲಾ ಗ್ರಾಮ ಪಂಚಾಯತಿಯ ಕಾರ್ಯದಶಿಗಳು ಹಾಗೂ
ಶಾಲಾ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಬೇಕು
ಎಂದರು
ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ ಮಾತನಾಡಿ,
ಪ್ರತೀ ವರ್ಷದಂತೆ ಈ ವರ್ಷವೂ ಕಾರ್ಯಕ್ರಮವನ್ನು
ನಿಗದಿಪಡಿಸಿದ ಇಲಾಖೆಯವರು ತಮಗೆ ವಹಿಸಿರುವ
ಜವಾಬ್ದಾರಿಯನ್ನು ನಿರ್ವಹಿಸಬೇಕು. ಎಲ್ಲಾ ಸರ್ಕಾರಿ, ಅರೆ ಸರ್ಕಾರಿ
ಹಾಗೂ ಪ್ರಮುಖ ಖಾಸಗಿ ಕಚೇರಿಗಳ ಮೇಲೆ ಜ.25 ಮತ್ತು 26
ರಂದು ವಿದ್ಯುತ್ ದೀಪಾಲಂಕಾರ ಮಾಡಿಸಬೇಕು ಎಂದರು.
ಕಾರ್ಯಕ್ರಮಕ್ಕೆ ಪೂರಕವಾಗಿ
ಮಹಾನಗರಪಾಲಿಕೆಯವರು ವೇದಿಕೆ ನಿರ್ಮಾಣ, ಕುರ್ಚಿ,
ಶಾಮಿಯಾನ, ಧ್ವನಿ ವರ್ಧಕ, ಕಾರ್ಪೆಟ್, ಹೂವಿನ ಹಾರ
ವ್ಯವಸ್ಥೆಯನ್ನು ಮಾಡಬೇಕು. ತೋಟಗಾರಿಕೆ
ಇಲಾಖೆಯವರು ವೇದಿಕೆ ಮುಂಭಾಗ ಹೂ ಅಲಂಕಾರ ಮತ್ತು
ಹೂವಿನ ಕುಂಡಗಳನ್ನು ಇರಿಸಬೇಕು.
ಉಪ ವಿಭಾಗಧಿಕಾರಿಗಳು ಶಿಷ್ಠಾಚಾರದಂತೆ ಆಹ್ವಾನ
ಪತ್ರಿಕೆಯನ್ನು ಪರಿಶೀಲಿಸಿ, ಜಿಲ್ಲಾಧಿಕಾರಿಗಳೊಂದಿಗೆ
ಚರ್ಚಿಸಬೇಕು. ತಾ.ಪಂ ಕಾರ್ಯನಿರ್ವಾಹಣಾಧಿಕಾರಿಗಳು ಮುದ್ರಿಸಿ
ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದರು.
ಕ್ರೀಡಾಂಗಣದಲ್ಲಿ ಪೊಲೀಸ್ ಇಲಾಖೆಯವರು ಭದ್ರತೆ
ಮತ್ತು ಸುರಕ್ಷತೆಯನ್ನು ಒದಗಿಸಬೇಕು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಜರುಗುವ
ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿವಿಧ ಇಲಾಖೆಗಳ
ಅಧಿಕಾರಿಗಳಿಗೆ ಭೂ-ವಿಜ್ಞಾನ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ
ಉಪ ನಿರ್ದೇಶಕರುಗಳು ಉಪಹಾರದ ವ್ಯವಸ್ಥೆ
ಮಾಡಬೇಕು.
ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸರ್ಕಾರಿ
ಅಧಿಕಾರಿ/ನೌಕರರಿಗೆ ನೀಡಲಾಗುವ ಸರ್ವೋತ್ತಮ ಪ್ರಶಸ್ತಿ ನೀಡಿ
ಸನ್ಮಾನಿಸಲಾಗುವುದು. ಈ ಕಾರ್ಯಕ್ರಮಕ್ಕೆ ಸೂಕ್ತ
ವ್ಯವಸ್ಥೆ ಮಾಡಬೇಕೆಂದ ಅವರು ಎಲ್ಲ ಇಲಾಖೆಗಳ
ಅಧಿಕಾರಿಗಳು ತಮಗೆ ವಹಿಸಿರುವ ಜವಾಬ್ದಾರಿಯನ್ನು ಶಿಸ್ತಿನಿಂದ
ನಿರ್ವಹಿಸುವ ಮೂಲಕ ಗಣರಾಜ್ಯೋತ್ಸವವನ್ನು
ಯಶಸ್ವಿಗೊಳಿಸಬೇಕೆಂದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರಾದ ವಿಶ್ವನಾಥ
ಮುದಜ್ಜಿ, ಸಮಾಜ ಕಲ್ಯಾಣಾಧಿಕಾರಿ ರೇಷ್ಮಾ
ಕೌಸರ್,ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ
ನಜ್ಮಾ.ಜಿ, ಡಿಡಿಪಿಐ ಪರಮೇಶ್ವರಪ್ಪ, ಆಹಾರ ನಾಗರೀಕ ಸರಬರಾಜು
ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಸೇರಿದಂತೆ ಜಿಲ್ಲಾ
ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.