ದಾವಣಗೆರೆ ಜ. 19
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಸಂಘದ ವತಿಯಿಂದ ನವಂಬರ್ 21,
2020 ರಂದು ಅರ್ಜಿ ಸಲ್ಲಿಸಿ ಹಾಗೂ ಡಿಸೆಂಬರ್ 15,2020 ರಂದು ನೇರ
ಸಂದರ್ಶನ ನಡೆಸಿ ದಾಖಲಾತಿ ಪರೀಶೀಲಿಸಿ ಆಯ್ಕೆಯಾದ
ಅಭ್ಯರ್ಥಿಗಳ ತಾತ್ಕಾಲಿ ಆಯ್ಕೆ ಪಟ್ಟಿಯನ್ನು
ಶುಶ್ರೂಷಕಿಯರು ಮಾನಸಿಕ ಆರೋಗ್ಯ ಕಾರ್ಯಕ್ರಮ
ಹುದ್ದೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಇಲಾಖೆಯ ಸೂಚನಾ ಪ್ರಕಟಣಾ ಫಲಕದಲ್ಲಿ ಜ.18 ರಂದು
ಪ್ರಕಟಿಸಲಾಗಿದೆ. ಈ ಆಯ್ಕೆ ಪಟ್ಟಿಗೆ ಯಾವುದೇ
ಆಕ್ಷೇಪಣೆಗಳಿದ್ದಲ್ಲಿ ಸಮರ್ಥನಿಯ ದಾಖಲೆಗಳ ಜೊತೆಗೆ
ಪ್ರಕಟಣೆಗೊಂಡ ಏಳು ದಿನಗಳೊಳಗೆ ಎನ್.ಹೆಚ್.ಎಂ
ವಿಭಾಗಕ್ಕೆ ಸಲ್ಲಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ
ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.