ದಾವಣಗೆರೆ ಜ.20
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ನಿ., ಇವರ ವತಿಯಿಂದ
ಡಿಪ್ಲೊಮಾ ಇನ್ ಕೋ-ಆಪರೇಟರ್ ಮ್ಯಾನೇಜ್‍ಮೆಂಟ್(ಡಿ.ಸಿ.ಎಂ)
ತರಬೇತಿಗೆ ಕರ್ನಾಟಕದಾದ್ಯಂತ 8 ತರಬೇತಿ ಕೇಂದ್ರಗಳ
ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಈ 8 ತರಬೇತಿಯ ಸಂಸ್ಥೆಗಳ ಮೂಲಕ ಸಹಕಾರ
ಸಂಘಸಂಸ್ಥೆ/ಸಹಕಾರ ಇಲಾಖೆ/ಸಹಕಾರ ಲೆಕ್ಕಪರಿಶೋಧನಾ
ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಹಾಗೂ
ಖಾಸಗಿ ಅಭ್ಯರ್ಥಿಗಳಿಗೆ 6 ತಿಂಗಳು/180 ದಿನಗಳ ಅವಧಿಯ
ದೂರಶಿಕ್ಷಣ ಡಿಪ್ಲೊಮಾ ಇನ್ ಕೋ-ಅಪರೇಟರ್ ಮ್ಯಾನೇಜ್‍ಮೆಂಟ್
ತರಬೇತಿಗಳು 2021ರ ಜನವರಿ ಮಾಹೆಯಿಂದ
ಪ್ರಾರಂಭವಾಗಲಿದೆ. ಆನ್‍ಲೈನ್ ಪ್ರವೇಶಾತಿಯ ಲಿಂಕ್
ತಿತಿತಿ.ಞsಛಿಜಿಜಛಿm.ಛಿo.iಟಿ ನಲ್ಲಿ ಸಹ ಪ್ರವೇಶ ಆರಂಭಿಸಲಾಗಿದೆ ಎಂದು
ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

===

Leave a Reply

Your email address will not be published. Required fields are marked *