ದಾವಣಗೆರೆ ಜ. 22  
ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾದ
ಬಿ.ಎ.ಬಸವರಾಜ ಇವರು ಜ.25, 26 ಮತ್ತು 27 ರಂದು ಜಿಲ್ಲಾ ಪ್ರವಾಸ
ಕೈಗೊಳ್ಳಲಿದ್ದಾರೆ.

ಜ.25 ರಂದು ಸಂಜೆ 6 ಗಂಟೆಗೆ ದಾವಣಗೆರೆ ಪ್ರವಾಸಿ
ಮಂದಿರಕ್ಕೆ ಆಗಮಿಸಿ, ಅಲ್ಲಿಯೇ ವಾಸ್ತವ್ಯ ಮಾಡುವರು. ಜ.26 ರ
ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ
ಗಣರಾಜ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ
ಭಾಗವಹಿಸುವರು. ಬೆಳಿಗ್ಗೆ 11 ರಿಂದ ಮಧ್ಯಾಹ್ನ 12.30 ರವರೆಗೆ
ಪ್ರವಾಸಿ ಮಮದಿರದಲ್ಲಿ ಜನಪ್ರತಿನಿಧಿಗಳು ಹಾಗೂ
ಸಾರ್ವಜನಿಕರ ಭೇಟಿ ಮಾಡುವರು. ಮಧ್ಯಾಹ್ನ 12.30 ಕ್ಕೆ
ದಾವಣಗೆರೆಯಿಂದ ನಿರ್ಗಮಿಸಿ ಮಧ್ಯಾಹ್ನ 1 ಗಂಟೆಗೆ
ಮಲೆಬೆನ್ನೂರಿನ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ
ಭೇಟಿ ನೀಡುವರು. ಮಧ್ಯಾಹ್ನ 3.30 ಕ್ಕೆ ದಾವಣಗೆರೆ ಪ್ರವಾಸಿ
ಮಂದಿರಕ್ಕೆ ಆಗಮಿಸುವರು ಹಾಗೂ ಅಲ್ಲಿಯೇ ವಾಸ್ತವ್ಯ
ಮಾಡುವರು.
ಜ.27 ರ ಬೆಳಿಗ್ಗೆ 9 ಗಂಟೆಎ ದಾವಣಗೆರೆಯಿಂದ ಹೊರಟು 10
ಗಂಟೆಗೆ ಜಗಳೂರು ಪ್ರವಾಸಿ ಮಂದಿರಕ್ಕೆ ಆಗಮಿಸುವರು.
ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆವರೆಗೆ ಜಗಳೂರಿನ
ಗುರುಭವನದಲ್ಲಿ ಏರ್ಪಡಿಸಿರುವ ಜನಸ್ಪಂದನ ಹಾಗೂ ವಿವಿಧ
ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ
ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 3
ಗಂಟೆಗೆ ಜಗಳೂರಿನಿಂದ ಬೆಂಗಳೂರಿಗೆ ನಿರ್ಗಮಿಸುವರು
ಎಂದು ಸಚಿವರ ಆಪ್ತ ಕಾರ್ಯದರ್ಶಿ ಸಿ.ನಾಗರಜು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *