ದಾವಣಗೆರೆ ಜ. 22
ಮುಖ್ಯ ಚುನಾವಣಾಧಿಕಾರಿಗಳು ಜ.25 ರಂದು 11ನೇ
ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲು
ನಿರ್ದೇಶಿಸಿರುವುದರಿಂದ ಮಹಾನಗರಪಾಲಿಕೆ ಆವರಣದಲ್ಲಿ ಜ.25
ರಂದು ಬೆಳಿಗ್ಗೆ 10.30 ಕ್ಕೆ 11ನೇ ರಾಷ್ಟ್ರೀಯ ಮತದಾರರ
ದಿನಾಚರಣೆಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಎಂದು ಮಹಾನಗರಪಾಲಿಕೆಯ ಉಪಾಯುಕ್ತರು ಹಾಗೂ
ಮತದಾರರ ನೋಂದಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.