ದಾವಣಗೆರೆ ಜ. 23
ಮಾನ್ಯ ಮುಖ್ಯಮಂತ್ರಿಗಳ ರಾಜಕೀಯ
ಕಾರ್ಯದರ್ಶಿಗಳು ಮತ್ತು ಹೊನ್ನಾಳಿ ಕ್ಷೇತ್ರದ
ಶಾಸಕರಾದ ಎಂ.ಪಿ.ರೇಣುಕಾಚಾರ್ಯ ಇವರು ಜ.23 ರಿಂದ 27
ರವರೆಗೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.
ಜ.24 ರಂದು ಬೆಳಿಗ್ಗೆ 10.30 ಕ್ಕೆ ಹೊನ್ನಾಳಿಯಿಂದ ಹೊರಟು
ಬೀರಗೊಂಡನಹಳ್ಳಿ ಗ್ರಾಮದಲ್ಲಿ ಹೊಟ್ಟೆ ಬಸವನಕೆರೆ
ಅಭಿವೃದ್ದಿ ಮತ್ತು ಈ ಕೆರೆಯಿಂದ ಬೀರಗೊಂಡನಹಳ್ಳಿ ಮುಖ್ಯ
ರಸ್ತೆ ಅಭಿವೃದ್ದಿ ಕಾಮಗಾರಿಯ ಉದ್ಘಾಟನೆಯನ್ನು
ನೆರವೇರಿಸುವರು. 11.30 ಕ್ಕೆ ಚಿಕ್ಕಬಾಸೂರು ತಾಂಡಾದ ಕೆ.ಕೆ
ರಸ್ತೆಯಿಂದ ಚಿಕ್ಕಬಾಸೂರು ಬಸವೇಶ್ವರ ದೇವಸ್ಥಾನದವರೆಗೆ
ರಸ್ತೆ ಅಭಿವೃದ್ದಿ ಕಾಮಗಾರಿ ಉದ್ಘಾಟಿಸುವರು. ಮಧ್ಯಾಹ್ನ 12 ಕ್ಕೆ
ಕಮ್ಮಾರಘಟ್ಟ ಭೂತಪ್ಪ ದೇವಸ್ಥಾನದ ಬಳಿ ಹಳ್ಳಕ್ಕೆ
ಮೆಟ್ಟಿಲು ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ನೆರೆವೇರಿಸುವರು.
ಹಾಗೂ ಮಧ್ಯಾಹ್ನ 12.30ಕ್ಕೆ ಘಂಟ್ಯಾಪುರ ಗ್ರಾಮದಲ್ಲಿ
ನೆಲಮಟ್ಟದ ನೀರು ಸಂಗ್ರಹಾಗಾರವನ್ನು ಉದ್ಘಾಟಿಸುವರು.
ನಂತರ ಮಧ್ಯಾಹ್ನ 1 ಗಂಟೆಗೆ ತರಗನಹಳ್ಳಿ ಗ್ರಾಮದ
ಪರಿಶಿಷ್ಟಜಾತಿ ಕಾಲೋನಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ
ಉದ್ಘಾಟಿಸುವರು. 1.30ಕ್ಕೆ ಸಿಂಗಟಗೇರಿ ಗ್ರಾಮದಲ್ಲಿ ವಿವಿಧ
ಅಭಿವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆಯನ್ನು
ನರೆವೇರಿಸುವರು. 2 ಗಂಟೆಗೆ ಯಕ್ಕನಹಳ್ಳಿ ಗ್ರಾಮದಲ್ಲಿ
ಕುಡಿಯುವ ನೀರಿನ ಓವರ್‍ಹೆಡ್ ಟ್ಯಾಂಕ್‍ನ ಉದ್ಘಾಟನೆಯನ್ನು
ನೆರೆವೇರಿಸುವರು. 3 ಗಂಟೆಗೆ ಚಿಕ್ಕಹಾಲಿವಾಣ ಗ್ರಾಮದ ಕ್ರಾಸ್ ಬಳಿ
ಬಸ್ ನಿಲ್ದಾಣ ಕಾಮಗಾರಿಯ ಶಂಕುಸ್ಥಾಪನೆಯನ್ನು
ನೆರೆವೇರಿಸುವರು.
ಮಧ್ಯಾಹ್ನ 3.30ಕ್ಕೆ ಯರೇಹಳ್ಳಿ ಗ್ರಾಮದಲ್ಲಿ ಸಿ.ಸಿ.ರಸ್ತೆ
ಮತ್ತು ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಸಿ.ಸಿ.ರಸ್ತೆ ಹಾಗೂ
ಚರಂಡಿ ನಿರ್ಮಾಣ ಕಾಮಗಾರಿಗಳನ್ನು ಉದ್ಘಾಟಿಸುವರು. ಸಂಜೆ 4
ಗಂಟೆಗೆ ಬನ್ನಿಕೋಡು ಗ್ರಾಮದ ಪರಿಶಿಷ್ಟ ಜಾತಿ
ಕಾಲೋನಿಯಿಂದ ಕತ್ತಲಗೆರೆ ರಸ್ತೆಯವರೆಗೆ ಸಿ.ಸಿ ಕೂಡು
ರಸ್ತೆ ನಿರ್ಮಾಣ ಕಾಮಗಾರಿಯಯನ್ನು ಉದ್ಘಾಟಿಸುವರು.
ನಂತರ 4.30ಕ್ಕೆ ಯರೇಚಿಕ್ಕನಹಳ್ಳಿ ಗ್ರಾಮದಲ್ಲಿ ಕಾಂಕ್ರೀಟ್
ರಸ್ತೆ ನಿರ್ಮಾಣ ಕಾಮಗಾರಿಯನ್ನು ಉದ್ಘಾಟಿಸುವರು. ಹಾಗೂ
ಸಂಜೆ 6 ಗಂಟೆಗೆ ಹೊನ್ನಾಳಿಗೆ ನಿರ್ಗಮಿಸಿ, ಸ್ಥಳೀಯ
ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಜ.25 ರಂದು ಬೆಳಿಗ್ಗೆ 10 ಗಂಟೆಗೆ ಹೊನ್ನಾಳಿಯಿಂದ ಹೊರಟು
10.30 ಕ್ಕೆ ನ್ಯಾಮತಿಯ ಬಸವೇಶ್ವರ ದೇವಸ್ಥಾನದಲ್ಲಿ ಶ್ರೀ
ಸಿದ್ದಗಂಗಾ ಸ್ವಾಮಿಗಳ 2ನೇ ವರ್ಷದ ಪುಣ್ಯಾರಾಧನೆ
ಕಾರ್ಯಕ್ರಮದಲ್ಲಿ ಭಾಗವಹಿಸುವರು. 10.45 ಕ್ಕೆ
ನ್ಯಾಮತಿಯಿಂದ ಹೊರಟು 11 ಗಂಟೆಗೆ ಕುರುವಾ ಗ್ರಾಮದಲ್ಲಿ
ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಯ ಉದ್ಘಾಟನೆ ಹಾಗೂ ಪರಿಶಿಷ್ಟ ಜಾತಿ
ಕಾಲೋನಿಯಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣದ ಶಂಕುಸ್ಥಾಪನೆ
ನೆರವೇರಿಸುವರು. ಹಾಗೂ ಹಳೆಕುರುವಾ ಗ್ರಾಮದಲ್ಲಿ
ಕಾಂಕ್ರೀಟ್ ರಸ್ತೆ ಕಾಮಗಾರಿಯ ಉದ್ಘಾಟನೆಯನ್ನು
ನೆರವೇರಿಸುವರು.
ಬೆಳಿಗ್ಗೆ 11.30 ಕ್ಕೆ ಕೋಟೆಹಾಳ್ ಗ್ರಾಮದ ಪರಿಶಿಷ್ಟ ಜಾತಿ
ಕಾಲೋನಿಗೆ ಕೂಡು ರಸ್ತೆ ಕಾಮಗಾರಿಯ ಉದ್ಘಾಟನೆ
ನೆರವೇರಿಸುವರು. ಮಧ್ಯಾಹ್ನ 12 ಕ್ಕೆ ಮರಿಗೊಂಡನಹಳ್ಳಿ
ಗ್ರಾಮದಲ್ಲಿ ತುಂಗಭದ್ರಾ ನದಿಗೆ ಹೊಳೆಮೆಟ್ಟಿಲು ನಿರ್ಮಾಣ
ಕಾಮಗಾರಿಯ ಶಂಕುಸ್ಥಾಪನೆ ಮತ್ತು ಸಿ.ಸಿ. ರಸ್ತೆ ನಿರ್ಮಾಣ
ಕಾಮಗಾರಿಯ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 12.30
ಕ್ಕೆ ತೆಗ್ಗಿಹಳ್ಳಿ ಗ್ರಾಮದಲ್ಲಿ ತುಂಗಭದ್ರಾ ನದಿಗೆ
ಹೊಳೆಮೆಟ್ಟಿಲು ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ನೆರವೇರಿಸುವರು. ಮಧ್ಯಾಹ್ನ 1 ಗಂಟೆಗೆ ಟಿ.ಜಿ.ಹಳ್ಳಿ
ಗ್ರಾಮದಲ್ಲಿ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ
ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ
1.30 ಕ್ಕೆ ದೊಡ್ಡೇರಿ ಗ್ರಾಮದಲ್ಲಿ ರಂಗಮಂದಿರ ಹಾಗೂ
ಅಂಗನವಾಡಿ ಕೇಂದ್ರ ನಿರ್ಮಾಣ ಕಾಮಗಾರಿಗಳ ಉದ್ಘಾಟನೆ
ನೆರವೇರಿಸುವರು.
ಹಾಗೂ ಮಧ್ಯಾಹ್ನ 2.30 ಕ್ಕೆ ಕೂಗನಹಳ್ಳಿ ಕ್ರಾಸ್‍ನ ಶ್ರೀ
ಗರುಡ ಬಸವರೇಶ್ವರ ದೇವಸ್ಥಾನದ ಹತ್ತಿರ ಬಸ್ ನಿಲ್ದಾಣ
ಕಾಮಗಾರಿ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 3
ಗಂಟೆಗೆ ಚೀಲೂರು ಗ್ರಾಮದ ಬಸ್‍ನಿಲ್ದಾಣದಿಂದ
ತೆಗ್ಗಿಹಳ್ಳಿಯವರೆಗೆ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಮತ್ತು
ಸರ್ಕಾರಿ ಪ್ರೌಢ ಶಾಲಾ ಹೆಚ್ಚುವರಿ ಕೊಠಡಿಗಳ ಉದ್ಘಾಟನೆ ಹಾಗೂ
ಹೊಳೆ ಮೆಟ್ಟಿಲು ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ
ನೆರವೇರಿಸುವರು. ಸಂಜೆ 4.30 ಕ್ಕೆ ಹೊನ್ನಾಳಿಗೆ ಪ್ರಯಾಣ
ಮತ್ತು ಹೊನ್ನಾಳಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ
ಅಹವಾಲು ಸ್ವೀಕರಿಸುವುದು ಹಾಗೂ ವಾಸ್ತವ್ಯ ಮಾಡುವರು.
ಜ.26 ರಂದು ಬೆಳಿಗ್ಗೆ 8.30 ಕ್ಕೆ ಹೊನ್ನಾಳಿಯಿಂದ ಹೊರಟು
ಬೆಳಿಗ್ಗೆ 9 ಕ್ಕೆ ನ್ಯಾಮತಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ
ಆಯೋಜಿಸಿರುವ ಗಣರಾಜ್ಯೋತ್ಸವ ದಿನಾಚರಣೆಯಲ್ಲಿ
ಭಾಗವಹಿಸುವರು. ಬೆಳಿಗ್ಗೆ 9.30 ಕ್ಕೆ ಹೊನ್ನಾಳಿಯಲ್ಲಿ ತಾಲ್ಲೂಕು
ಆಡಳಿತ ವತಿಯಿಂದ ಆಯೋಜಿಸಿರುವ ಗಣರಾಜ್ಯೋತ್ಸವ
ದಿನಾಚರಣೆಯಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ 3.45 ಕ್ಕೆ
ಹೊನ್ನಾಳಿಯಿಂದ ಹೊರಟು ಸಂಜೆ 4 ಗಂಟೆಗೆ ಹಿರೇಮಠದಲ್ಲಿ ಸಿ.ಸಿ
ರಸ್ತೆ ನಿರ್ಮಾಣ ಕಾಮಗಾರಿಯ ಉದ್ಘಾಟನೆ ನೆರವೇರಿಸುವರು. ಸಂಜೆ
4.30 ಕ್ಕೆ ದೇವನಾಯಕನಹಳ್ಳಿಯಲ್ಲಿ ತುಂಗಭದ್ರಾ ನದಿಗೆ
ಹೊಳೆಮೆಟ್ಟಿಲು ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ಹಾಗೂ
ಸಿ.ಸಿ.ರಸ್ತೆ ಕಾಮಗಾರಿಗಳ ಉದ್ಘಾಟನೆ ನೆರವೇರಿಸುವರು. ಸಂಜೆ 5.30
ಕ್ಕೆ ಹೊನ್ನಾಳಿಗೆ ಪ್ರಮಾಣ ಮತ್ತು ಹೊನ್ನಾಳಿಯಲ್ಲಿ ಸಾರ್ವಜನಿಕ
ಕುಂದುಕೊರತೆಗಳ ಅಹವಾಲು ಸ್ವೀಕಾರ ಹಾಗೂ ವಾಸ್ತವ್ಯ
ಮಾಡುವರು.
ಜ.27 ರಂದು ಬೆಳಿಗ್ಗೆ 10.30 ಕ್ಕೆ ಹೊನ್ನಾಳಿಯಿಂದ ಹೊರಟು 11
ಗಂಟೆಗೆ ಕುಂದೂರು ಗ್ರಾಮದಲ್ಲಿ ಸಂಯುಕ್ತ
ಪದವಿಪೂರ್ವ ಕಾಲೇಜಿಗೆ ಕಾಂಪೌಂಡ್ ನಿರ್ಮಾಣ ಕಾಮಗಾರಿ ಹಾಗೂ
ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿ.ಸಿ. ರಸ್ತೆ ನಿರ್ಮಾಣ ಕಾಮಗಾರಿಗಳ
ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ 12 ಗಂಟೆಗೆ
ಕೂಲಂಬಿ ಗ್ರಾಮದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಸಿ.ಸಿ ರಸ್ತೆ
ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ, ಪರಿಶಿಷ್ಟ ಪಂಗಡ
ಕಾಲೋನಿಯಲ್ಲಿ ಸಿ.ಸಿ.ಚರಂಡಿ ನಿರ್ಮಾಣ ಮತ್ತು ಶ್ರೀ
ಮೈಲಾರಲಿಂಗೇಶ್ವರ ದೇವಸ್ಥಾನದಿಂದ ಪರಿಶಿಷ್ಟ ಜಾತಿ
ಕಾಲೋನಿಯ 5 ನೇ ಝೋನ್ ಚಾನಲ್‍ವರೆಗೆ ಸಿ.ಸಿ.ರಸ್ತೆ ಉದ್ಘಾಟನೆ
ನೆರವೇರಿಸುವರು. ಮಧ್ಯಾಹ್ನ 12.30 ಕ್ಕೆ ಕೆಂಗಲಹಳ್ಳಿ
ಗ್ರಾಮದಲ್ಲ ಕುಡಿಯುವ ನೀರಿನ ಓವರ್‍ಹೆಡ್ ಟ್ಯಾಂಕ್ ಹಾಗೂ
ಪರಿಶಿಷ್ಟ ಪಂಗಡ ಕಾಲೋನಿಯಲ್ಲಿ ಸಿ.ಸಿ.ರಸ್ತೆ ನಿರ್ಮಾಣ
ಕಾಮಗಾರಿಯ ಉದ್ಘಾಟನೆ ನೆರವೇರಿಸುವರು. ಮಧ್ಯಾಹ್ನ 1
ಗಂಟೆಗೆ ತಿಮ್ಮೇನಹಳ್ಳಿ ಗ್ರಾಮದ ಪರಿಶಿಷ್ಟ ಪಂಗಡ
ಕಾಲೋನಿಯಲ್ಲಿ ಸಿ.ಸಿ.ರಸ್ತೆ ಕೂಡು ರಸ್ತೆ ನಿರ್ಮಾಣ
ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸುವರು. ಮಧ್ಯಾಹ್ನ
1.30 ಕ್ಕೆ ಮುಕ್ತೇನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲಾ
ಕಟ್ಟಡಕ್ಕೆ ಹೆಚ್ಚುವರಿ ಕೊಠಡಿಯ ಉದ್ಘಾಟನೆ ನೆರವೇರಿಸುವರು.
ಮಧ್ಯಾಹ್ನ 2.30 ಕ್ಕೆ ಹೊನ್ನಾಳಿಗೆ ಪ್ರಯಾಣಿಸಿ, ರಾತ್ರಿ 8.30 ಕ್ಕೆ
ಬೆಂಗಳೂರಿಗೆ ತೆರಳುವರು ಎಂದು ಮುಖ್ಯಮಂತ್ರಿಗಳ
ರಾಜಕೀಯ ಕಾರ್ಯದರ್ಶಿಯವರ ವಿಶೇಷ ಕರ್ತವ್ಯಾಧಿಕಾರಿ
ಕೆ.ರುದ್ರೇಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.