ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ದಿನಾಂಕ 23-01-2021 ಓವರ್ ಹೆಡ್ ನೀರಿನ ಟ್ಯಾಂಕ್ ಉದ್ಘಾಟನೆಗೆ ಶಾಸಕರಾದ ಎಂಪಿ ರೇಣುಕಾಚಾರ್ಯ ರವರು ಸ್ಥಳೀಯವಾಗಿ ಹಳ್ಳಿಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹೊಸಳ್ಳಿ ಗೆ ಬಂದು ನೀರಿನಟ್ಯಾಂಕ್ ಉದ್ಘಾಟನೆ ಮಾಡಲಿಕ್ಕೆ ಬರುತ್ತಾರೆ ಎಂದು ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ಈ ಬಗ್ಗೆ ಗ್ರಾಮ ಪಂಚಾಯತಿ ಸಿಬ್ಬಂದಿವರ್ಗದವರಿಗೆ ಫೋನ್ ಮಾಡಿ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ತಿಳಿಸಿ ಎಂದು ತಿಳಿಸಿರುತ್ತಾರೆ ಅದೇ ರೀತಿ ಗ್ರಾಮ ಪಂಚಾಯತಿ ಸಿಬ್ಬಂದಿ ಎಲ್ಲಾ ಸದಸ್ಯರುಗಳಿಗೆ ತಿಳಿಸುತ್ತಾನೆ ಸುಮಾರು 12ರಿಂದ 1 ಗಂಟೆಯವರೆಗೆ ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು ಸೇರುತ್ತಾರೆ ಅದೇ ಸಮಯಕ್ಕೆ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು ಬಾಳೆಕಂದು, ಮಾವಿನ ತೋರಣ ತೆಗೆದುಕೊಂಡು ನೀರಿನ ಟ್ಯಾಂಕ್ ಕೆಳಗಡೆ ಪರೀಕೆ ಹಿಡಿದು ಸ್ವಚ್ಛತೆ ಮಾಡಲಿಕ್ಕೆ ಮುಂದಾಗುತ್ತಾರೆ ಎಲ್ಲಾ ಸದಸ್ಯರುಗಳು ಹೇಳುತ್ತಾರೆ ನೀನು ಕಸವನ್ನು ಗುಡಿಸುವುದು ಬೇಡ ನೀರಿನ ಟ್ಯಾಂಕಿನ ಗುತ್ತಿಗೆದಾರ ಬರಬೇಕು ಏಕೆಂದರೆ ಟ್ಯಾಂಕಿನ ಕಾಮಗಾರಿ ಪರಿಪೂರ್ಣವಾಗಿ ಆಗಿಲ್ಲ ಕಳಪೆಯಿಂದ ಕೂಡಿದೆ ಬೋರ್ ರಿ ಬೋರ್ ಆಗಬೇಕು, ಕರೆಂಟ್ ಸರ್ವಿಸ್ ಇಲ್ಲ, ಕಳಪೆ ಕಾಮಗಾರಿ ಕೆಲಸ ನಡೆದಿದೆ ಈ ಕೆಲಸವು ಗ್ರಾಮ ಪಂಚಾಯಿತಿಗೆ ಹ್ಯಾಂಡ್ ಒವರ್ ಆಗಿಲ್ಲ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರನ್ನು ಕರೆದು ಬ್ಲಾಕ್ ಲಿಸ್ಟ್ ಸೇರಿಸಬೇಕೆಂದು ಗ್ರಾಮ ಪಂಚಾಯತಿ ಸದಸ್ಯರುಗಳು ಮತ್ತು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಒತ್ತಾಯಿಸಿದರು.ಸುಮಾರು ಒಂದರಿಂದ ಎರಡು ಗಂಟೆ ಕಾದರೂ ಮಾನ್ಯ ಶಾಸಕರು ಉದ್ಘಾಟನೆಗೆ ಬರಲಿಲ್ಲ,

ಯಾಕೆ ಬರಲಿಲ್ಲ ಎಂದು ಪ್ರಶ್ನೆಯಾಗಿ ಉಳಿದಿದೆ ? ಗ್ರಾಮ ಪಂಚಾಯಿತಿ ಸದಸ್ಯರುಗಳು ಒತ್ತಾಯ ಎಂದರೆ ನೀರಿನ ಟ್ಯಾಂಕು ಕಳಪೆ ಕಾಮಗಾರಿಯಿಂದ ಕೂಡಿದೆ ಮಾನ್ಯ ಶಾಸಕರು ಈ ಕೆಲಸವನ್ನು ಮಾಡಿದ ಗುತ್ತಿಗೆದಾರರನ್ನು ಕರೆಸಿ ಸರಿಪಡಿಸಿದ ನಂತರ ಬಂದು ಉದ್ಘಾಟನೆಯನ್ನು ಮಾಡಿದರೆ ಸೂಕ್ತ ಎಂದು ಹೊಸಳ್ಳಿ ಗ್ರಾಮದ ಗ್ರಾಮ ಪಂಚಾಯತಿ ಹಾಲಿ ಸದಸ್ಯರಗಳು ,ಮಾಜಿ ಸದಸ್ಯರುಗಳು ಮತ್ತು ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮದ ಜನರ ಅಭಿಪ್ರಾಯ ಹಾಗೂ ಒತ್ತಾಯ ವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಇದ್ದವರು:- ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷರಾದ ಡಿ.ಸಿ ಶಾಂತರಾಜ್ ಹಾಲಿ ಸದಸ್ಯರುಗಳಾದ ಕೆ.ಎಸ್ ಚಂದ್ರಣ್ಣ, ವೀರೇಶ್ ,ಕಲ್ಪನಾ ಗಣೇಶ, ರೇಣುಕಮ್ಮ,ಅಪೋಲರಾಜ್, ಮಾಜಿ ಸದಸ್ಯರುಗಳಾದ ಸಂತೋಷ್, ಹೆಚ್ಎಂ ರುದ್ರೇಶ್ ನವೀನ್ ಕುಮಾರ್ ಮುಂತಾದವರ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *