ದಾವಣಗೆರೆ ಜ. 25
ದಾವಣಗೆರೆ ತಾಲ್ಲೂಕು ಮಾಯಕೊಂಡ ಪೊಲೀಸ್ ಠಾಣಾ
ವ್ಯಾಪ್ತಿಯ ನರಗನಹಳ್ಳಿ ಗ್ರಾಮದ ವೀರೇಶ್ ಎಂಬಾತ ಯುವತಿ
ಮೇಲೆ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಆರೋಪಿಗೆ ಒಟ್ಟು 15
ವರ್ಷ ಸಜೆ ಹಾಗೂ 21 ಸಾವಿರ ದಂಡ ವಿಧಿಸಿ 1 ನೇ ಅಧಿಕ ಜಿಲ್ಲಾ
ಮತ್ತು ಸತ್ರ ನ್ಯಾಯಲಯಾಲದ ನ್ಯಾಯದೀಶರಾದ
ಕೆಂಗಬಾಲಯ್ಯ ಆದೇಶಿಸಿದ್ದಾರೆ.
ನೊಂದ ಯುವತಿಯ ಪೋಷಕರು ಕೆಲಸದ ನಿಮಿತ್ತ
ಹೊರಗೆ ಹೋದಾಗ ಆರೋಪಿ ವೀರೇಶ ನೊಂದ ಯುವತಿಗೆ
ಪ್ರೀತಿಸಿ ಮದುವೆಯಾಗುವುದಾಗಿ ಹೇಳಿ
ಅತ್ಯಾಚಾರವೆಸಗಿರುತ್ತಾನೆ. ಗರ್ಭಿಣಿಯಾದ ನೊಂದ ಯುವತಿ
ಮದುವೆಯಾಗುವಂತೆ ಕೇಳಿದಾಗ ಆರೋಪಿ ಆಕೆಗೆ ಜೀವ
ಬೆದರಿಕೆ ಹಾಕಿದ್ದು ಈ ಬಗ್ಗೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ
ದಾಖಲಾಗಿ, ಗ್ರಾಮಾಂತರ ನಿರೀಕ್ಷಕರಾದ ಮಂಜುನಾಥ ಇವರು
ಆರೋಪಿತರ ವಿರುದ್ದ ದೋಷಾರೋಪಣೆ ಪಟ್ಟಿಯನ್ನು
ಸಲ್ಲಿಸಿರುತ್ತಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು
ಆರೋಪಿಗೆ ಐಪಿಸಿ ಕಲಂ 376 ರಡಿ 10 ವರ್ಷ ಶಿಕ್ಷೆ ಹಾಗೂ ರೂ. 15
ಸಾವಿರ ದಂಡ, ದಂಡ ಕೊಡಲು ತಪ್ಪಿದಲ್ಲಿ 1 ವರ್ಷ ಹೆಚ್ಚುವರಿ
ಶಿಕ್ಷೆ. ಐಪಿಸಿ ಕಲಂ 420 ರಡಿ 04 ವರ್ಷ ಶಿಕ್ಷೆ ಹಾಗೂ 5 ಸಾವಿರ ದಂಡ,
ದಂಡ ಕೊಡಲು ತಪ್ಪಿದಲ್ಲಿ ಹೆಚ್ಚುವರಿಯಾಗಿ 6 ತಿಮಗಳು
ಸಜೆ. ಐಪಿಸಿ ಕಲಂ 506 ರಡಿ 1 ವರ್ಷ ಶಿಕ್ಷೆ ಮತ್ತು 1 ಸಾವಿರ ದಂಡ,
ದಂಡ ಕೊಡಲು ತಪ್ಪಿದಲ್ಲಿ 3 ತಿಂಗಳು ಸಾದಾ ಸಜೆ
ವಿಧಿಸಿರುತ್ತದೆ.
ದಂಡದ ಮೊತ್ತದಲ್ಲಿ ರೂ. 20 ಸಾವಿರಗಳನ್ನು
ಪಿರ್ಯಾದುದಾರರಿಗೆ ಪರಿಹಾರವಾಗಿ ಕೊಡಬೇಕೆಂದು ಉಳಿದ
ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು
ಹಾಕಿಕೊಳ್ಳಬೇಕೆಂದು ಮತ್ತು ನ್ಯಾಯಾಂಗ
ಬಂಧನದಲ್ಲಿರುವ ಅವಧಿಯನ್ನು ಸೆಟ್ ಆಫ್
ಮಾಡಬೇಕೆಂದು ಆದೇಶಿಸಿರುತ್ತಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆಂಚಪ್ಪ
ಇವರು ವಾದ ಮಂಡಿಸಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.