ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ನ್ಯಾಮತಿ ಪಟ್ಟಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಕಾಯ್ದೆ ಎಪಿಎಂಸಿ ಕಾಯ್ದೆ ಕಾರ್ಮಿಕ ಕಾಯ್ದೆ ತಿದ್ದುಪಡಿಯನ್ನು ಖಂಡಿಸಿ ಮಾನ್ಯ ಮಾಜಿ ಶಾಸಕರಾದ ಡಿ.ಜಿ ಶಾಂತನಗೌಡ್ರು ರವರ ನೇತೃತ್ವದಲ್ಲಿ ಪಟ್ಟಣದ ಬನಶಂಕರಿ ದೇವಾಲಯದಿಂದ ಹೊರಟು ತಾಲೂಕು ಕಚೇರಿಗೆ ವರೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ರೈತ ಸಂಘಗಳ ಗಳು ಹಾಗೂ ಇತರ ಸಂಘಟನೆಗಳು ಮತ್ತು ಟ್ಯಾಕ್ಟರ್ ಪರೇಡ್ ಜಾತ ಮಾಡುವುದರ ಜೊತೆಗೆ ಬೃಹತ್ ಪ್ರತಿಭಟನೆಯನ್ನು ಪಾದಯಾತ್ರೆಯ ಮೂಲಕ ಮಾಡಿದರು.


ನಂತರ ಡಿ.ಜಿ ಶಾಂತನಗೌಡ ಮಾತನಾಡಿ ದೆಹಲಿಯ ಸುಮಾರು 64 ದಿನಗಳಿಂದ ರೈತರು 4 % ಡಿಗ್ರಿ ಸೆಲ್ಸಿಯಸ್ ನಲ್ಲಿ ಪಂಜಾಬ್ ಹರಿಯಾಣ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ ಸುಮಾರು 11 ಬಾರಿ ರೈತರ ಮಾತುಕತೆ ಕೇಂದ್ರ ಸರ್ಕಾರದ ಜೊತೆ ಮಾಡಿದ್ದರೂ ಸಹ ಫಲಪ್ರದವಾಗಿಲ್ಲ ಇದರ ಬಿಜೆಪಿ ಸರ್ಕಾರವು ಇದರ ರೈತರ ಪರವಾಗಿಲ್ಲ ಈ ಸರ್ಕಾರ ಕಾರ್ಪೊರೇಟರ್ ಮತ್ತು ವ್ಯಾಪಾರಸ್ಥರ ಪರವಾಗಿ ಇದೆ. ದೆಹಲಿಯ ಪ್ರತಿಭಟನೆ ನಿರತ ರೈತರ ಮೇಲೆ ಪೋಲೀಸಿನವರು ರೈತರ ಮೇಲೆ ಕೇಸು ಹಾಕುತ್ತಿದ್ದಾರೆ ಇದು ದುರ್ದೈವದ ಸಂಗತಿ, ಪಂಜಾಬ್ ಮತ್ತು ಹರಿಯಾಣ ರೈತರು 1,25000 ಟ್ಯಾಕ್ಟರ್ ಪರೆಡ್ ಜಾತ ನಡೆಯುತ್ತಿದೆ ಬಿಜೆಪಿಯವರು ರೈತರು ಬೆನ್ನೆಲಬು ಅಂತ ಹೇಳುತ್ತಾರೆ ಆದರೆ ರೈತರ ಬೆನ್ನು ಮುರಿಯುತ್ತಿದ್ದಾರೆ ಮುಂದಿನ ದಿನಮಾನಗಳಲ್ಲಿ ಅವರಿಗೆ ತಕ್ಕ ಉತ್ತರ ಕೊಡುತ್ತಾರೆ ಎಂದು ಹೇಳುತ್ತಾ ಮಾತನ್ನು ಮುಗಿಸಿದರು ನಂತರ ನ್ಯಾಮತಿ ತಾಲೂಕು ತಹಿಸಿಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಕಾರ್ಯಕ್ರಮದಲ್ಲಿ ಡಿ.ಜಿ ಶಾಂತನಗೌಡ್ರು ಕಾಂಗ್ರೆಸ್ ಪಕ್ಷದ ತಾಲೂಕು ಅಧ್ಯಕ್ಷರುಗಳಾದ ವಾಗೇಶ್, ಲೋಕೇಶ್ ಪ್ಪ ಜಿ, ಜಿಲ್ಲಾ ಪಂಚಾಯತ್ ಸದಸ್ಯರಾದ ಡಿ ಜಿ ವಿಶ್ವನಾಥ್ ಕಿರಣ್ ಬಾರ್ ಸಿದ್ದಪ್ಪ, ಕರಿಬಸಪ್ಪ ಮಾಚೇನಹಳ್ಳಿ, ಶಿವರಾಂನಾಯ್ಕ್, ಮಲ್ಲಿಕಾರ್ಜುನ, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರುಗಳು , ರೈತ ಸಂಘದ ಅಧ್ಯಕ್ಷರುಗಳು,ವಿವಿಧ ಪರ ಸಂಘನೆಯ ಅಧ್ಯಕ್ಷರುಗಳು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *