ದಾವಣಗೆರೆ ಜ. 28
 ಜಿಲ್ಲೆಯಾದ್ಯಂತ ಖಾಲಿ ಇರುವ ಸ್ವಯಂ ಸೇವಾ
ಗೃಹರಕ್ಷಕರನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ
ಆಹ್ವಾನಿಸಲಾಗಿದೆ.
   ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು  19 ರಿಂದ 45 ವರ್ಷ ವಯೋಮಿತಿ
ಒಳಗಿನವರಾಗಿರಬೇಕು. 10ನೇ ತರಗತಿ ಪಾಸಾಗಿರಬೇಕು.
ಆರೋಗ್ಯವಂತ ಒಳ್ಳೆ ದೇಹದೃಡ ಸಾಮಥ್ರ್ಯ ಹೊಂದಿgಬೇಕು.
ರಾಜಕೀಯ ಪಕ್ಷ-ಸಂಘ ಸಂಸ್ಥೆಗಳ
ಸದಸ್ಯರು/ಕಾರ್ಯಕರ್ತರಾಗಿರಬಾರದು. ಕಾನೂನು
ಮೊಕದ್ದಮೆಗಳಿಲ್ಲದವರು ಹಾಗೂ ಸಂಬಂಧಪಟ್ಟ
ಘಟಕಗಳಿಂದ 06 ಕಿ.ಮೀ ವ್ಯಾಪ್ತಿಯೊಳಗಿನ, ಅಭ್ಯರ್ಥಿಗಳು ಅರ್ಜಿ
ಸಲ್ಲಿಸಲು ಅರ್ಹರಾಗಿರುತ್ತಾರೆ. ಈ ಹಿಂದೆ ಗೃಹರಕ್ಷಕದಳ
ಸಂಸ್ಥೆಯಿಂದ ಸಮಾಲೋಪನೆಗೊಂಡವರು ಹಾಗೂ
ವಿಕಲಚೇತನರು ಅರ್ಹರಾಗಿರುವುದಿಲ್ಲ.
 ಅರ್ಜಿಯನ್ನು ಜಿ.ಎಸ್ ಗುತ್ಯಪ್ಪ ಮಲೇಬೆನ್ನೂರು ದೂ.ಸಂ:
9880335468, ಷಡಾಕ್ಷರಿ ಜಗಳೂರು ದೂ.ಸಂ: 9019282711, ವಿ.ಬಿ
ಅಜ್ಜಯ್ಯ ಬಿಳಿಚೋಡು ದೂ.ಸಂ: 6360439947, ಬಿ.ಅಂಜಿನಪ್ಪ
ಉಜ್ಜಪ್ಪರ ಒಡೇಯರಹಳ್ಳಿ, ದೂ.ಸಂ: 9844627174 ಈ
ಸ್ಥಳಗಳ ಗೃಹರಕ್ಷಕ ಘಟಕಗಳಲ್ಲಿ ಜ.29 ರಿಂದ ಫೆ.05

ರವರೆಗೆ ಉಚಿತವಾಗಿ ಅರ್ಜಿಯನ್ನು ಪಡೆದು ಫೆ.10 ರೊಳಗೆ
ಭರ್ತಿಮಾಡಿದ ಅರ್ಜಿಗಳನ್ನು ಘಟಕ ಕಚೇರಿಗಳಲ್ಲಿ
ಸಲ್ಲಿಸಬೇಕು. ದಾವಣಗೆರೆ ನಗರ ಘಟಕದಲ್ಲಿ ಮಹಿಳಾ
ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಬಹುದು.
 ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಗೃಹರಕ್ಷಕದಳ ಕಚೇರಿ,
ದಾವಣಗೆರೆ ದೂ.ಸಂ: 08192-255784, ದಾವಣಗೆರೆ ನಗರ
ಘಟಕಕ್ಕೆ ಅರ್ಜಿ ಸಲ್ಲಿಸುವವರು ಘಟಕಾಧಿಕಾರಿಗಳ ಕಚೇರಿ,
ಗೃಹರಕ್ಷಕದಳ, ಕಾವೇರಮ್ಮ ಹಿರಿಯ ಪ್ರಾಥಮಿಕ ಶಾಲೆ,
ತ್ರಿಶೂಲ್ ಟಾಕೀಸ್ ರಸ್ತೆ, ದಾವಣಗೆರೆ ದೂ.ಸಂ: 9535664661ನ್ನು
ಸಂಪರ್ಕಿಸಬಹುದೆಂದು ಹೋಂ ಗಾಡ್ರ್ಸ್ ಕಮಾಂಡೆಂಟ್
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *