ದಾವಣಗೆರೆ ಜ.29
ಜಿಲ್ಲೆಯ ಚನ್ನಗಿರಿ ತಾಲ್ಲೂಕು ವ್ಯಾಪ್ತಿಯಲ್ಲಿರುವ ವಿ.ಬನ್ನಿಹಟ್ಟಿ
ಗ್ರಾಮಕ್ಕೆ ಪಡಿತರ ಚೀಟಿದಾರರ ಹಿತದೃಷ್ಠಿಯಿಂದ ಮತ್ತು
ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು
ಪರಿಣಾಮಕಾರಿಗೊಳಿಸುವ ದೃಷ್ಠಿಯಿಂದ ಹೊಸದಾಗಿ ನ್ಯಾಯಬೆಲೆ
ಅಂಗಡಿ ಮಂಜೂರು ಮಾಡಲು ನಿಯಮಾನುಸಾರ ನಿಗದಿತ
ನಮೂನೆಯಲ್ಲಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದೃಢೀಕೃತ
ದಾಖಲೆಗಳೊಂದಿಗೆ ಪ್ರಕಟಣೆ ಹೊರಡಿಸಿದ ದಿನಾಂಕದಿಂದ 30
ದಿವಸದೊಳಗಾಗಿ ಜಂಟಿ ನಿರ್ದೇಶಕರು, ಆಹಾರ ನಾಗರೀಕ
ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ
ದಾವಣಗೆರೆ ಇವರಿಗೆ ಸಲ್ಲಿಸಬೇಕು. ಅವಧಿಯ ನಂತರ ಬಂದ
ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ.
ಹೊಸ ನ್ಯಾಯಬೆಲೆ ಅಂಗಡಿ ಮಂಜೂರಾತಿ ಪ್ರಕಟಿಸಿರುವ
ವಿ.ಬನ್ನಿಹಟ್ಟಿ ಗ್ರಾಮದಲ್ಲಿ 38 ಅಂತ್ಯೋದಯ, 352
ಬಿಪಿಎಲ್(ಅಕ್ಷಯ) ಮತ್ತು ಎಪಿಎಲ್-04 ಸೇರಿ ಒಟ್ಟು 394 ಪಡಿತರ
ಚೀಟಿಗಳನ್ನು ನಿಯೋಜಿಸಿದ್ದು, ಈ ಗ್ರಾಮದ ನ್ಯಾಯಬೆಲೆ
ಅಂಗಡಿಗೆ ಅವಶ್ಯವಿರುವ ಬ್ಯಾಂಕ್ ಠೇವಣಿ ಒಂದು ತಿಂಗಳಿಗೆ
ಪಡಿತರ ಮೊತ್ತ ಕನಿಷ್ಠ ರೂ. 50,000 ಇರುತ್ತದೆ.
ರಾಜ್ಯ ಸರ್ಕಾರಿ ಸ್ವಾಮ್ಯದ
ನಿಗಮಗಳು/ಸಂಸ್ಥೆಗಳು/ಗ್ರಾಮ ಪಂಚಾಯತಿಗಳು
ಮತ್ತು ಸ್ಥಳೀಯ ಸಂಸ್ಥೆಗಳು ಹಾಗೂ ಇತರ ಸಹಕಾರ
ಸಂಘಗಳು ಮತ್ತು ವಿಕಲಚೇತನರು (ಸರ್ಕಾರ
ನಿಯಮಾನುಸಾರ), ತೃತೀಯ ಲಿಂಗಿಗಳು ಅರ್ಜಿ ಸಲ್ಲಿಸಬಹುದು.
ನ್ಯಾಯಬೆಲೆ ಅಂಗಡಿಯನ್ನು ಮಂಜೂರು ಮಾಡುವಾಗ
ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ಪದ್ದತಿ
ಆದೇಶ 2018 ರಲ್ಲಿ ತಿಳಿಸಿರುವಂತೆ ಆದ್ಯತೆಗಳನ್ನು
ಪರಿಗಣಿಸಲಾಗುವುದು.
ಅರ್ಜಿಯನ್ನು ಜಂಟಿ ನಿರ್ದೇಶಕರು ಆಹಾರ ನಾಗರಿಕ
ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
ದಾವಣಗೆರೆ ಇವರಿಗೆ ಸಲ್ಲಿಸತಕ್ಕದ್ದು. ನಿಗದಿತ ಅರ್ಜಿ
ನಮೂನೆಯನ್ನು ಕಚೇರಿ ಅಥವಾ ತಹಶೀಲ್ದಾರ್, ಚನ್ನಗಿರಿ
ತಾಲ್ಲೂಕು ಕಚೇರಿಯಿಂದ ಪಡೆಯಬಹುದು. ಖಾಸಗಿ
ವ್ಯಕ್ತಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿದಾರರು ಸಲ್ಲಿಸಬೇಕಾದ ದಾಖಲೆಗಳು: ಅರ್ಜಿ ನಮೂನೆ ‘ಎ’,
ಸಹಕಾರ ಸಂಘ/ಸಂಸ್ಥೆಗಳ ಮತ್ತು ಸ್ವಸಹಾಯ
ಸಂಘಗಳಾದರೆ ನೋದಾವಣೆ ಪತ್ರ, ಕಳೆದ 3 ವರ್ಷಗಳ
ದೃಢೀಕೃತ ಲೆಕ್ಕ ಪರಿಶೋಧನಾ ವರದಿ ಮತ್ತು
ಉಪನಿಯಮಗಳು(ಬೈಲಾ), ನ್ಯಾಯಬೆಲೆ ಅಂಗಡಿ ನಡೆಸಲು
ಮತ್ತು ಪ್ರಮಾಣ ಪತ್ರ ಸಲ್ಲಿಸಲು ಅಧಿಕಾರ ಪಡೆದಿರುವ
ಪ್ರತಿನಿಧಿಯನ್ನು ನೇಮಿಸಿರುವ ಬಗ್ಗೆ ನಿರ್ಣಯ, ಕರ್ನಾಟಕ
ಸೊಸೈಟೀಸ್ ರಿಜಿಸ್ಟ್ರೇಷನ್ ಆಕ್ಟ್ 1959 ಅಡಿ ವಿಚಾರಣೆ, ಟ್ರಯಲ್
ಮತ್ತು ಲಿಕ್ವಿಟೇಷನ್ ನಡವಳಿ ನಡೆದಿರುವುದಿಲ್ಲ. ಎಂಬ ಬಗ್ಗೆ
ಸಕ್ಷಮ ಪ್ರಾಧಿಕಾರಿಯು ನೀಡಿರುವ ದೃಡೀಕರಣ ಪತ್ರ,
ವ್ಯಾಪಾರದ ಮಳಿಗೆಯ ಖಾತೆ ಅಥವಾ ಬಾಡಿಗೆ/ಕರಾರು ಪತ್ರ,
ಹಣಕಾಸು ಹೊಂದಿರುವ ಬಗ್ಗೆ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ,
ಸಹಕಾರ ಸಂಘದವರು ಅಧಿಕೃತವಾಗಿ ನೇಮಿಸಿರುವ
ಪ್ರತಿನಿಧಿಯ ಇತ್ತೀಚಿನ 3 ಪಾಸ್‍ಪೋರ್ಟ್ ಅಳತೆಯ
ಭಾವಚಿತ್ರಗಳನ್ನು ಸಲ್ಲಿಸಬೇಕೆಂದು ಜಿಲ್ಲಾ ಆಹಾರ ನಾಗರಿಕ
ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ
ಜಂಟಿ ನಿರ್ದೇಶಕ ಮಂಟೇಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.