:ಎಡಿಸಿ

ದಾವಣಗೆರೆ ಜ. 29
ಜನವರಿ 31 ರಂದು ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೋ
ಅಭಿಯಾನ ನಡೆಯಲಿದ್ದು ವಿವಿಧ ಇಲಾಖೆಗಳು ಸಹಕಾರ

ನೀಡುವ ಮೂಲಕ ಈ ಅಭಿಯಾನವನ್ನು
ಯಶಸ್ವಿಗೊಳಿಸಬೇಕೆಂದು ಅಪರ ಜಿಲ್ಲಾಧಿಕಾರಿ ಪೂಜಾರ
ವೀರಮಲ್ಲಪ್ಪ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ 2020-21 ನೇ
ಸಾಲಿನ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದ ಪೂರ್ವ ಸಿದ್ದತಾ
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ
ಬಾರಿಯೂ ಜಿಲ್ಲೆಯಲ್ಲಿ ಪೋಲಿಯೋ ಲಸಿಕಾ ಅಭಿಯಾನವನ್ನು
ಯಶಸ್ವಿಯಾಗಿ ನಡೆಸಿದ್ದು ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಎಲ್ಲಾ
ರೀತಿಯ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು
ಅನುಸರಿಸುವ ಮೂಲಕ ಅಭಿಯಾನವನ್ನು
ಯಶಸ್ವಿಗೊಳಿಸಬೇಕಿದೆ ಎಂದರು.
ಈಗಾಗಲೇ ಪೋಲಿಯೋ ಲಸಿಕೆ ಜಿಲ್ಲೆಗೆ ಸರಬರಾಜು ಆಗಿದ್ದು
ತಾಲ್ಲೂಕು ಕೇಂದ್ರಗಳಿಗೆ ಕಳುಹಿಸಿಕೊಡಲಾಗಿದೆ. ಲಸಿಕಾ
ಅಭಿಯಾನದಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಗಳು ಅಂದು
ಬೆಳಿಗ್ಗೆ 8 ಗಂಟೆಯೊಳಗೆ ಬೂತ್‍ಗಳಲ್ಲಿ ಲಭ್ಯವಿದ್ದು ಸಂಜೆ
5.30 ರವರೆಗೆ ಹಾಗೂ ಮುಂದಿನ ಮೂರು ದಿನಗಳು ಮನೆ
ಮನೆಗೆ ತೆರಳಿ ಬೂತ್ ಗೆ ಬರಲು ಆಗದೇ ಇರುವ ಮಕ್ಕಳಿಗೆ
ಲಸಿಕೆ ನೀಡಬೇಕು ಮತ್ತು ವಲಸಿಗ ಮಕ್ಕಳಿಗೂ ತಪ್ಪದೇ
ಲಸಿಕೆ ನೀಡುವ ಮೂಲಕ ಅಭಿಯಾನವನ್ನು
ಯಶಸ್ವಿಗೊಳಿಸಬೇಕೆಂದು ಹೇಳಿದರು.
ಆರ್ ಸಿ ಹೆಚ್ ಅಧಿಕಾರಿ ಡಾ.ಮೀನಾಕ್ಷಿ ಮಾತನಾಡಿ ಜನವರಿ 31 ರಂದು
ಬೂತ್‍ಗಳಲ್ಲಿ 0 ಯಿಂದ 5 ವಯಸ್ಸಿನ ಮಕ್ಕಳಿಗೆ ಪೋಲಿಯೋ
ಲಸಿಕೆಯನ್ನು ಹಾಕಲಾಗವುದು ಹಾಗೂ ಫೆಬ್ರವರಿ 1 ರಿಂದ
ಫೆಬ್ರವರಿ 03 ರವರೆಗೆ ಒಟ್ಟು ಮೂರು ದಿನಗಳು ಮನೆ
ಮನೆಗೆ ಭೇಟಿ ಮಾಡಿ ಬೂತ್ ನಲ್ಲಿ ಬಿಟ್ಟು ಹೋದ ಮಕ್ಕಳಿಗೆ
ಪೋಲಿಯೋ ಲಸಿಕೆ ಹಾಕಲಾಗುವುದು ಎಂದರು.
       ಪ್ರತಿ ವರ್ಷದಂತೆ ಈ ಬಾರಿಯೂ ಪೋಲಿಯೋ
ಅಭಿಯಾನವನ್ನು ಶೇ. 100 ರಷ್ಟು ಯಶಸ್ವಿಯಾಗುವಂತೆ
ಯೋಜನೆ ರೂಪಿಸಲಾಗಿದ್ದು ಗ್ರಾಮಾಂತರ 97918, ನಗರ
ಪ್ರದೇಶ 58293 ಸೇರಿದಂತೆ ಒಟ್ಟು 1,56,211 ಮಕ್ಕಳಿಗೆ
ಪೋಲಿಯೋ ಲಸಿಕೆ ಹಾಕಲಾಗವುದು ಮತ್ತು 1121 ಸ್ಥಿರ
ಬೂತ್‍ಗಳು, 1132 ಟ್ರಾನ್ಸಿಟ್/ಮೊಬೈಲ್ ಬೂತ್‍ಗಳಲ್ಲಿ ಲಸಿಕೆ
ಹಾಕಲಾಗುವುದು ಎಂದು ಮಾಹಿತಿ ನೀಡಿದರು. ಇದೇ
ಸಂದರ್ಭದಲ್ಲಿ ಪೋಲಿಯೋ ಲಸಿಕೆ ಮತ್ತು ಕುಷ್ಠರೋಗ
ಅರಿವು ಆಂದೋಲನದ ಪೋಸ್ಟರ್‍ಗಳನ್ನು ಬಿಡುಗಡೆ
ಮಾಡಲಾಯಿತು.
       ಸಭೆಯಲ್ಲಿ ದಾವಣಗೆರೆ ಉಪ ವಿಭಾಗಾಧಿಕಾರಿ ಮಮತ
ಹೊಸಗೌಡರ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಆನಂದ್,
ಡಿಹೆಚ್‍ಒ ಡಾ.ನಾಗರಾಜ್, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.
ಜಯಪ್ರಕಾಶ್, ಕುಟುಂಬ ಕಲ್ಯಾಣಾಧಿಕಾರಿ ಡಾ. ರೇಣುಕಾರಾಧ್ಯ,
ಡಿಎಲ್‍ಓ ಡಾ. ಮುರಳೀಧರ್, ಜಿಲ್ಲಾ ಆಯುಷ್ ಅಧಿಕಾರಿ
ಶಂಕರೇಗೌಡ, ಡಿಡಿಪಿಯು ನಾಗರಾಜ್, ರೋಟರಿ, ಲಯನ್ಸ್
ಸಂಸ್ಥೆಯ ಪ್ರತಿನಿಧಿಗಳು, ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *