ಅಖಿಲ ಭಾರತ ರೆಡ್ಡಿ ಒಕ್ಕೂಟ ತೀವ್ರವಾಗಿ
ಖಂಡಿಸುತ್ತದೆ.
ಬಾಗಲಕೋಟೆ – 29,
ರಾಜ್ಯದ ರಾಜಧಾನಿಯಾದ ಬೆಂಗಳೂರಿನಲ್ಲಿ ಇತ್ತೀಚಿಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ಜಾರಿಗೆ ತಂದಿರುವ ನೂತನ ಕೃಷಿ ಕಾಯ್ಕೆಗಳನ್ನು ವಿರೋಧಿಸಿ ನಡೆಸಿದ ಹೋರಾಟದಲ್ಲಿ ರೆಡ್ಡಿ ಹೆಣ್ಣು ಮಗಳಾದ ಶಾಸಕಿಯಾದ ಶ್ರೀ ಸೌಮ್ಯ ರೆಡ್ಡಿಯವರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೆ ಅವರ ಮೇಲೆ ಉದ್ದೇಶಪೂರ್ವಕ ರಾಜಕೀಯ ದುರುದ್ದೇಶದಿಂದ ಪ್ರಕರಣ ದಾಖಲಿಸುವ ಮೂಲಕ ರಾಜ್ಯದಲ್ಲಿರುವ ರೆಡ್ಡಿ ಸಮಾಜಕ್ಕೆ ಅಗೌರವ ತೋರಿದ್ದಾರೆ.
ಈ ಹೋರಾಟವು ರಾಜ್ಯದ ಹಾಗೂ ದೇಶದ ಅನ್ನದಾತರ ಪರ ವಾದ ಜಾತ್ಯಾತೀತ ಹಾಗೂ ಪಕ್ಷಾತೀತ ಹೊರಾಟವಾಗಿ ಈ ಹೋರಾಟದಲ್ಲಿ ರಾಜಕೀಯ ನಾಯಕರು ಮಠಾಧೀಶರು ವಿವಿದ ಸಂಘಟನೆಯ ಮುಖಂಡರು ಹಾಗೂ ರೈತರು ಸೇರಿದಂತೆ ಅನೇಕ ಶಾಸಕರು ಭಾಗವಹಿಸಿದ್ದರು.ಅವರೆಲ್ಲರ ಜೊತೆ ಶಾಸಕಿಯಾದ ಶ್ರೀ ಸೌಮ್ಯ ರೆಡ್ಡಿಯವರು ಪಾಲ್ಗೊಂಡಿದ್ದರು ಅದೇ ಕಾರಣಕ್ಕಾಗಿ ಅವರ ಮೇಲೆ ದೌರ್ಜನ್ಯ ನಡೆಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಇದನ್ನು ಅಖಿಲ ಭಾರತ ರೆಡ್ಡಿ ಒಕ್ಕೂಟ ತೀವ್ರವಾಗಿ
ಖಂಡಿಸುತ್ತದೆ.
ಸರ್ಕಾರ ಈ ಕೂಡಲೆ ಸೌಮ್ಯ ರೆಡ್ಡಿಯವರ ಮೇಲಿನ ಪ್ರಕರಣವನ್ನು ಹಿಂಪಡೆದು ಕೊಳ್ಳಬೇಕು ಇಲ್ಲದಿದ್ದರೆ ಅಖಿಲ ಭಾರತ ರೆಡ್ಡಿ ಒಕ್ಕೂಟದಿಂದ ರಾಜ್ಯಾದ್ಯಂತ ಸರ್ಕಾರದ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಬೆಳಗಾವಿ ವಿಭಾಗೀಯ ಉಸ್ತುವಾರಿಗಳು ಅಖಿಲ ಭಾರತ ರೆಡ್ಡಿ ಒಕ್ಕೂಟದ ಬಿ.ಎಮ್.ಪಾಟೀಲ ವಿಭಾಗೀಯ ಸಂಚಾಲಕರು ಅಖಿಲ ಭಾರತ ರೆಡ್ಡಿ ಒಕ್ಕೂಟ ವಿ
ಶಂಕರ ರೆಡ್ಡಿಯವರು ಎ.ಬಿ.ಸಿ ನ್ಯೂಸ್ ಆನ್ಲೈನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.