ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ಇಂದು ಅಖಿಲ ಕ ರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ವತಿಯಿಂದ ದಿನಾಂಕ 2-02-20 21 ನೇ ಮಂಗಳವಾರದಿಂದ 04-02-2021 ನೇ ಗುರುವಾರದವರೆಗೆ ನಡೆಯುವ ಪ್ರಥಮ ಅಧಿವೇಶನ ವನ್ನು ದಾವಣಗೆರೆ ಜಿಲ್ಲೆ ಹೊನ್ನಾಳಿಯ ಹಿರೇಕಲ್ಕರದ ಶ್ರೀ ಜಗದ್ಗುರು ಪಂಚಾಚಾರ್ಯ ಸಮುದಾಯ ಭವನ ದಲ್ಲಿ ಹಮ್ಮಿಕೊಳ್ಳಲಾಗಿದ್ದು, ವಿಶೇಷವಾಗಿ ಈ ಅಧಿವೇಶನದಲ್ಲಿ ವಿದ್ವಾಂಸರುಗಳಿಂದ ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ ಧಾರ್ಮಿಕ, ವೈಜ್ಞಾನಿಕ, ವೈಚಾರಿಕವಾಗಿ ವಿಶ್ಲೇಷಣಾ ಶಿಬರ ಇರುವುದು. ಮತ್ತು ವೀರಶೈವ/ಲಿಂಗಾಯತ, ಜಂಗಮ ಪುರೋಹಿತರ, ಅರ್ಚಕರ, ಜ್ಯೋತಿಷಿಗಳ, ಆಗಮಿಕರ ಆಚಾರ-ವಿಚಾರ ಸಂಹಿತೆಗಳ ವಿಚಾರ ವಿನಿಮಯ. ಜೊತೆಗೆ ಹಿತರಕ್ಷಣೆ ಹಾಗೂ ಸಮಸ್ತ ಅಭಿವೃದ್ಧಿಗಳ ಚಿಂತನೆಯನ್ನು ಪರಾಮರ್ಶಿಸಲು ಈ ಅಧಿವೇಶನವನ್ನು ಮೇಲ್ಕಂಡ ದಿನಾಂಕಗಳಂದು ಕರೆಯಲಾಗಿದೆ. ಈ ಅಧಿವೇಶನವು ಮೂರು ದಿನಗಳವರೆಗೆ ಜರುಗುತ್ತಿದ್ದು, ಅಧಿವೇಶನದಲ್ಲಿ ಪೂಜ್ಯ ಶಿವಾಚಾರ್ಯರು ಹಾಗೂ ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದು ಸನ್ಮಾರ್ಗದ ದಾರಿಯನ್ನು ತೋರಿಸಲಿದ್ದಾರೆ. ಹಾಗೆಯೇ ರಾಜಕೀಯ ಗಣ್ಯಮಾನ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ಧೈಯೋದ್ದೇಶಗಳಿಗೆ ಎಲ್ಲಾ ರೀತಿಯ ಸಹಕಾರದೊಂದಿಗೆ 3 ದಿನಗಳ ಕಾಲ ನೆಡೆಯುತ್ತದೆ ಈ ಕಾರ್ಯಕ್ರಮಕ್ಕೆ ಸರ್ವರು ಆಗಮಿಸಿ ಪ್ರಥಮ ಅಧಿವೇಶನ ಹಾಗೂ ವೀರಶೈವ ಷೋಡಶ ಸಂಸ್ಕಾರಗಳ ಬಗ್ಗೆ ವಿಚಾರ ಸಂಕೀರ್ಣ ಭಾಗ1ರಲ್ಲಿ ಪರಿಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದು. ಎಂದು ಕರ್ನಾಟಕದ ಸಮಸ್ತ ವೀರಶೈವ, ಲಿಂಗಾಯತ, ಜಂಗಮ, ಅರ್ಚಕರ,ಪುರೋಹಿತರ,ಜ್ಯೋತಿಷಿಗಳ, ಆಗಮಿಕರ ಪರ ಸಂಘ ಸಂಸ್ಥೆಗಳು ಹೊನ್ನಾಳಿ. ಇವರಿಂದ ಸರ್ವರಿಗೂ ಆದರದ ಸ್ವಾಗತ.
ಇವರ ಉಪಸ್ಥಿತಿಯಲ್ಲಿ:- ಅಧ್ಯಕ್ಷತೆಯಲ್ಲಿ ಡಾ ಒಡೆಯರ್ ಚನ್ನಮಲ್ಲಿಕಾರ್ಜುನ ಶ್ರೀಗಳು, ಅನ್ನದಾನಯ್ಯ ಶಾಸ್ತ್ರೀ, ಬೆನಕಯ್ಯ ಶಾಸ್ತ್ರೀ, ಹೊಳೆಮಠ ಶಾಸ್ತ್ರೀ, ಶಿವಕುಮಾರ್ ಶಾಸ್ತ್ರೀ ಚಿಕ್ಕಬಾಸೂರು, ಕಳಕಯ್ಯ ಶಾಸ್ತ್ರೀ,ಮಠದ ವ್ಯವಸ್ಥಾಪಕರು ಚನ್ನಬಸಯ್ಯನವರು ಸಹ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *