ಹೊನ್ನಾಳಿ : ಫೆಬ್ರವರಿ 1 ರಿಂದ 9 ಮತ್ತು 10 ನೇ
ತರಗತಿಗಳು ಪ್ರತಿದಿನ ಬೆಳಿಗ್ಗೆ 10 ರಿಂದ 4.30
ರವರೆಗೆ ನಡೆಯಲಿವೆ. ಅದರ ಜೊತೆಗೆ 11 ನೇ
ತರಗತಿ ಕೂಡಾ ಅಧಿಕೃತವಾಗಿ ಆರಂಭವಾಗಲಿವೆ
ಎಂದು ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಇ. ರಾಜೀವ್
ಹೇಳಿದರು.
ಶನಿವಾರ ತಾಲ್ಲೂಕು ಪಂಚಾಯಿತಿ ಸಾಮಾಥ್ರ್ಯಸೌಧದಲ್ಲಿ
ನಡೆದ ಸಾಮಾನ್ಯ ಸಭೆಯಲ್ಲಿ ತಮ್ಮ ಇಲಾಖೆಯ
ಕುರಿತು ಸದಸ್ಯರ ಪ್ರಶ್ನೆಗೆ ಮಾಹಿತಿ ನೀಡಿ
ಮಾತನಾಡಿದರು.
8 ನೇ ತರಗತಿಗೆ ವಿದ್ಯಾಗಮ ಯೋಜನೆಯಡಿ
ಬೆಳಿಗ್ಗೆ 10 ರಿಂದ 12.30 ರವರೆಗೆ ಸೋಮವಾರ,
ಬುಧವಾರ ಮತ್ತು ಶುಕ್ರವಾರ ಮೂರು
ದಿನಗಳ ಕಾಲ ನಡೆಯಲಿದೆ ಎಂದು ಮಾಹಿತಿ ನೀಡಿದರು.
6 ಮತ್ತು 7 ನೇ ತರಗತಿಗೆ ಬೆಳಿಗ್ಗೆ 10 ರಿಂದ
ಮಧ್ಯಾಹ್ನ 12.30 ರವರೆಗೆ ಪ್ರತಿದಿನ
ತರಗತಿಗಳು ನಡೆಯಲಿವೆ ಎಂದು ಅವರು
ತಿಳಿಸಿದರು