2020-21 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿಯಲ್ಲಿ
ಜಿಲ್ಲೆಯ ರೈತರಿಂದ ಬಿಳಿಜೋಳ ಖರೀದಿ ಕಾರ್ಯ ಈಗಾಗಲೇ
ಜಾರಿಯಲ್ಲಿದ್ದು, ರಾಜ್ಯ ಸರ್ಕಾರ ಜಿಲ್ಲೆಗೆ ಕರ್ನಾಟಕ ಆಹಾರ
ಮತ್ತು ನಾಗರೀಕ ಸರಬರಾಜು ನಿಗಮವನ್ನು ಖರೀದಿ
ಏಜೆನ್ಸಿಯಾಗಿ ನೇಮಕ ಮಾಡಿ ಆದೇಶಿಸಿದೆ.
ಜಿಲ್ಲಾಧಿಕಾರಿಗಳ ನೇತೃತ್ವದ ಜಿಲ್ಲಾ ಟಾಸ್ಕ್‍ಫೋರ್ಸ್ ಸಮಿತಿ
ತೀರ್ಮಾನದಂತೆ ಉತ್ತಮ ಗುಣಮಟ್ಟದ ಬಿಳಿಜೋಳವನ್ನು
ತಾಲ್ಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿನ
ಖರೀದಿ ಕೇಂದ್ರಗಳಲ್ಲಿ ಗುಣಮಟ್ಟ ಪರಿಶೀಲಿಸಿ ನಂತರ ಜಿಲ್ಲೆಯ
ಅರ್ಹ ರೈತರಿಂದ ಬಿಳಿಜೋಳ-ಹೈಬ್ರಿಡ್‍ನ್ನು ಆಯಾ ತಾಲ್ಲೂಕಿನ
ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿನ ಖರೀದಿ
ಕೇಂದ್ರಗಳಲ್ಲಿ ಖರೀದಿಸುವ ಕಾರ್ಯ
ಪ್ರಗತಿಯಲ್ಲಿರುತ್ತದೆ.
ಮುಂದುವರೆದಂತೆ ಸರ್ಕಾರದ ಆದೇಶ ದಿನಾಂಕ: 20-02-2021
ರನ್ವಯ 2020-21 ನೇ ಸಾಲಿನ ಕನಿಷ್ಟ ಬೆಂಬಲ ಬೆಲೆ
ಯೋಜನೆಯಡಿ ರೈತರಿಂದ ಖರೀದಿಸಲಾಗುವ ಬಿಳಿಜೋಳ
ಸಂಗ್ರಹಣೆಗೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನಲ್ಲಿ ರೈತರಿಂದ
ಹೆಚ್ಚು ಆಹಾರ ಧಾನ್ಯಗಳನ್ನು ಖರೀದಿಸುವ ಉದ್ದೇಶದಿಂದ
ಪ್ರತಿ ಎಕೆರೆಗೆ ನಿಗದಿಪಡಿಸಿರುವ ಮಿತಿಯನ್ನು
ಮುಂದುವರೆಸಿದ್ದು, ಗರಿಷ್ಟ ಮಿತಿಯನ್ನು
ತೆರವುಗೊಳಿಸಲಾಗುವುದು. ಹಾಗೂ ಈಗಾಗಲೇ
ಆಹಾರಧಾನ್ಯಗಳನ್ನು ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ
ಮಾರಾಟ ಮಾಡಿರುವ ರೈತರಿಂದ ಕೂಡ ಗರಿಷ್ಟ ಮಿತಿಯನ್ನು
ಸಡಿಲಿಸಿ ಆಹಾರಧಾನ್ಯಗಳನ್ನು ಖರೀದಿಸಲು ಅವಕಾಶವನ್ನು
ಕಲ್ಪಿಸಲಾಗಿದ್ದು, ಜಿಲ್ಲೆಯ ಎಲ್ಲಾ ಅರ್ಹ ರೈತರು ಸರ್ಕಾರದ ಈ
ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ
ಜಿಲ್ಲಾಧಿಕಾರಿಗಳು ಹಾಗೂ ಟಾಸ್ಕ್‍ಫೋರ್ಸ್ ಸಮಿತಿ ಅಧ್ಯಕ್ಷರಾದ
ಮಹಾಂತೇಶ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
15 ದಿನಕ್ಕೊಮ್ಮೆ ಜನಸ್ಪಂದನ
