;ಬಹಿರಂಗ ಹರಾಜು ಪ್ರಕಟಣೆ;
ಮೇಲ್ಕಾಣಿಸಿದ ಸಂಘಕ್ಕೆ ಸೇರಿದ ಮುದ್ರಣ ಯಂತ್ರಗಳು ಹಾಗೂ ಕಟ್ಟಿಂಗ್ ಮೀಷನ್,ವಿದ್ಯುತ್
ಮೋಟಾರ್ ಜೊತೆಗೆ ಇತರೆ ಸಾಮಗ್ರಿಗಳನ್ನು ಬಹಿರಂಗ ಹರಾಜು ಮಾಡಲು ಕರ್ನಾಟಕ ರಾಜ್ಯ
ಸಹಕಾರ ಸಂಘಗಳ ಅಪರ ನಿಬಂಧಕರು ಬೆಂಗಳೂರು ಇವರ ಆದೇಶ ನಂ ಆರ್. ಸಿ ಎಸ್/ಎಂಕೆಟಿ/2187/2019-20 ದಿನಾಂಕ/31/8/2020 ಪತ್ರದ ಪ್ರಕಾರ ಸಹಕಾರ ಸಂಘಗಳ
ಸಹಾಯಕ ನಿಬಂಧಕರು ದಾವಣಗೆರೆ ಉಪ-ವಿಭಾಗ ಹಾಗೂ ಸಂಘದ ಕಾರ್ಯಕಾರಿ ಮಂಡಳಿಯವರ ಸಮ್ಮುಖದಲ್ಲಿ ದಿನಾಂಕ/17/3/2021 ನೇ ಬುಧವಾರ ಮಧ್ಯಾಹ್ನ 12.00 ಗಂಟೆಗೆ ಸಂಘದ ಕಛೇರಿಯಲ್ಲಿ ಬಹಿರಂಗ ಹರಾಜು ನಡೆಸಲಾಗುವುದು. ಇಷ್ಟವುಳ್ಳವರು ಹರಾಜಿನಲ್ಲಿ ಭಾಗವಹಿಸಬಹುದು. ಷರತ್ತುಗಳ ವಿವರ ಇತ್ಯಾದಿಗಳನ್ನು ಸಂಘದ ಕಛೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ, ಹಾಗೂ ಷರತ್ತುಗಳ ವಿವರಗಳನ್ನು ಸಂಘದ ನೋಟೀಸ್ ಬೋರ್ಡಿನಲ್ಲಿ ಹಾಕಲಾಗಿದೆ.
;: ಷರತ್ತುಗಳು;
1)ಸಂಘದಲ್ಲಿ ನಡೆಯುವ ಹರಾಜು ಬಿಡ್ದಾರರು ಹರಾಜಿಗೆ ಮುನ್ನ ರೂ 10,000.00 ಗಳನ್ನು
ಠೇವಣಿಯಾಗಿ ಪಾವತಿ ಮಾಡಬೇಕು ಹರಾಜು ಮುಗಿದೊಡನೆ ಹರಾಜು ಮೊಬಲಗಿನ ಶೇ. 25 ರಷ್ಟು ಹಣವನ್ನು ಪಾವತಿಸಬೇಕು.
2)ಕಾರ್ಯಕಾರಿ ಮಂಡಳಿಯವರು ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹರಾಜು ಕಾಲದಲ್ಲಿ ಯಾವ ಷರತ್ತುಗಳನ್ನಾಗಲಿ ಕಾರಣ ತಿಳಿಸದೆಯೇ ನಿರಾಕರಿಸುವ ಅಧಿಕಾರವನ್ನು ಹೊಂದಿರುತ್ತಾರೆ.
3)ಹರಾಜು ಸಮಯವನ್ನು ಸೂಕ್ತ ಕಂಡಂತೆ ಬದಲಾಯಿಸುವ ಹಕ್ಕು ಸಹಕಾರ ಸಂಘಗಳ ಸಹಾಯಕ ನಿಬಂಧಕರಿಗೆ ಇರುತ್ತದೆ.
4)ಬಿಡ್ದಾರರು ಹರಾಜಿನಲ್ಲಿ ಒಪ್ಪಿಗೆಯಾದ ಹಣವನ್ನು 7 ದಿನಗಳಲ್ಲಿ ಪಾವತಿಸಿ ಸಂಘದಿಂದ ಸೇಲ್ ಸರ್ಟಿಫಿಕೇಟ್ನ್ನು ಪಡೆದು ಯಂತ್ರೋಪಕರಣಗಳನ್ನು ಸಾಗಾಣಿಕೆ ಮಾಡಿಕೊಳ್ಳುವುದು.
5)ಯಾವುದೇ ಹರಾಜು ಷರತ್ತುಗಳನ್ನು ಕಾರಣವಿಲ್ಲದೆ ಮುಂದೂಡುವ ರದ್ದುಪಡಿಸುವ ಅಂತಿಮ ಹಕ್ಕು ಸಂಘದ ಕಾರ್ಯಕಾರಿ ಮಂಡಳಿಯವರಿಗೆ ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು ದಾವಣಗೆರೆ ಇವರಿಗೆ ಇರುತ್ತದೆ.
6)ಸ್ವತ್ತುಗಳ ವಿವರ:
ಎ)ಫೈರ್ ಆಫ್ ಸೆಟ್ ಪ್ರಿಂಟಿಂಗ್ ಮಿಷನ್ ……..15* 20….(1)
ಬಿ)ಕಟಿಂಗ್ ಮಿಷನ್ ……………………………….32 ಸೈಜ್…..(1)
ಸಿ)ವಿದ್ಯುತ್ಚ್ಚಕ್ತಿ ಮೋಟಾರ್ಸ್, ಹಾಗೂ ಇತರೇ ಸಂಬಂಧಿಸಿದ ಸಾಮಾನುಗಳು
7)ಹರಾಜಿನ ದಿನದಂದು ಪಾವತಿಸಿದ ಶೇ.25 ಹಣವನ್ನು ಬಿಟ್ಟು ಉಳಿದ ಬಿಡ್ ಹಣವನ್ನು ಸಕಾಲದಲ್ಲಿ ಸಂಘಕ್ಕೆ ಕಟ್ಟದಿದ್ದಲ್ಲಿ ಮೊದಲು ಕಟ್ಟಿದ ಶೇ.25 ರಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು.
8)ಹರಾಜಿನಲ್ಲಿ ಅತೀ ಕಡಿಮೆ ಬಿಡ್ ಮಾಡಿದಲ್ಲಿ ಹರಾಜನ್ನು ರದ್ದುಗೊಳಿಸಿ, ದೂಸ್ರಾ ಹರಾಜು ಮಾಡಲಾಗುವುದು.
9)ಇದಕ್ಕೆ ಸಂಬಂಧಿಸಿದ ಮುದ್ರಣ ಯಂತ್ರೋಪಕರಣಗಳನ್ನು ಕಛೇರಿ ವೇಳೆಯಲ್ಲಿ ಸಂಘದ ಮುದ್ರಣ ವಿಭಾಗದಲ್ಲಿ ಪರಿಶೀಲಿಸಬಹುದು.
ಎಂದು
ಆಡಳಿ ಮಂಡಳಿಯ ವಪ್ಪಿಗೆಯ ಮೇರೆಗೆ ಮುಖ ್ಯಕಾರ್ಯನಿರ್ವಣಾಧಿಕಾರಿಗಳಾದ ಶ್ರೀ ಜಿ ಈ ಮುರಗೇಶಪ್ಪನವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.ಹೆಚ್ಚಿನ ಮಾಯಿತಿಗಾಗಿ ಆಪೀಸಿನ ಈ ಪೋನ್ ನಂಬರಗೆ 08188-251027 ಕರೆಮಾಡಿ ಸಂಪರ್ಕಿಸಬಹುದು.