ಇತ್ತಿಚೆಗೆ ತೆಲಂಗಾಣ ರಾಜ್ಯದಲ್ಲಿ ಹಾಡುಹಗಲೇ ಸಾರ್ವಜನಿಕವಾಗಿ ವಕೀಲ ದಂಪತಿಗಳನ್ನು ಬರ್ಬರವಾಗಿ ಹತ್ಯೆಗೈದಿದ್ದು, ಈ ಘಟನೆಯು ನಡೆದ ಕೆಲವೇ ದಿನಗಳ ಅಂತರದಲ್ಲಿ ಕರ್ನಾಟಕ ರಾಜ್ಯ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವಾದ ಹೊಸಪೇಟೆಯ ಕೋರ್ಟ್ ಆವರಣದಲ್ಲಿ ವಕೀಲರು ಮತ್ತು ನೋಟರಿಯವರಾದ ತಾರೀಹಳ್ಳಿ ವೆಂಕಟೇಶ್ ಇವರನ್ನು ಬರ್ಬರವಾಗಿ ಹತ್ಯೆಗೈದಿರುವುದು ಅತೀ ಅಮಾನುಷ ಕೃತ್ಯವಾಗಿರುತ್ತದೆ. ಇತ್ತೀಚೆಗೆ ಇಂತಹ ಘಟನೆಗಳು ಪುನಃ ಪುನಃ ಸಂಭವಿಸುತ್ತಿದ್ದು ವಕೀಲರ ಜೀವಕ್ಕೆ ರಕ್ಷಣೆಯಿಲ್ಲದೆ ಇರುವುದು
ಕಂಡುಬರುತ್ತದೆ. ಈ ಎರಡು ಘಟನೆಗಳನ್ನು ನಮ್ಮ ವಕೀಲರ ಸಂಘವು ಖಂಡಿಸುತ್ತದೆ, ಇಂತಹ ಘಟನೆಗಳು ಪುನರಾವರ್ತನೆ ಆಗದಿರುವಂತೆ ನೋಡಿಕೊಳ್ಳುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕರ್ತವ್ಯ ಮತ್ತು ಜವಾಬ್ದಾರಿಯಾಗಿರುತ್ತದೆ, ಆದ್ದರಿಂದ ವಕೀಲರ ಸಂರಕ್ಷಣೆ ಕಾಯ್ದೆಯನ್ನು ಕೇಂದ್ರ ಸರ್ಕಾರವು ಅತೀ ಜರೂರಾಗಿ ಜಾರಿಗೆ ತರಬೇಕೆಂದು ನಮ್ಮ ವಕೀಲರ ಸಂಘದ ಮೂಲಕ ಒತ್ತಾಯಿಸುತ್ತಿದೇವೆ.ಎಂದು ಹೊನ್ನಾಳಿ ತಾಲೂಕಿನ ದಂಡಾಧಿಕಾರಿಗಳಾದ ಬಸವರಾಜ್ ಕೊಟೊರುರವರಿಗೆ ಪ್ರತಿಭಟನೆಯ ಮನವಿಪತ್ರವನ್ನು ಸಲ್ಲಿಸಿದರು.
ಈ ಪ್ರತಿಭಟನೆಯಲ್ಲಿ ಬಾಗಿಯಾದ ವಕೀಲರುಗಳು ಉಮಾಂಕಾಂತ್ ಜೋಯಿಸ್ ಎಮ್ ಗುಡ್ಡಪ್ಪ ಎಬಿ ಜಗದೀಶ್
ಬಿ ಉಮೇಶ್,ಜಿ ಎಸ್ ರವಿಕುಮಾರ್,ದೊರೆಸ್ವಾಮಿ ಎಮ್ ಬಿ ,ಕಿರಣ್ ಕುಮಾರ್ ಕೆ ಬಿ,ರಾಜು ಎಸ್,ಪುರುಸೋತ್ತಮ್ ಬಿ ಎಮ್,ರವೀಶ್ ಬೊವಿ ಇನ್ನು ಮುಂತಾದವರು ಸಹ ಬಾಗಿಯಾಗಿದ್ದರು.

Leave a Reply

Your email address will not be published. Required fields are marked *