ದಾವಣಗೆರೆ, ಮೇ.20: ಮೈಸೂರಿನ ರಂಗಾಯಣದ ‘ಭಾರತೀಯ ರಂಗಶಿಕ್ಷಣ ಕೇಂದ್ರ’ವು 2026-27ನೇ ಸಾಲಿನ ಒಂದು ವರ್ಷದ (ಹತ್ತು ತಿಂಗಳ) ರಂಗಶಿಕ್ಷಣ ಡಿಪ್ಲೊಮೊ ಕೋರ್ಸ್‌ ಪ್ರವೇಶಕ್ಕಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಮಾನ್ಯತೆ ಪಡೆದ ಈ ಕೋರ್ಸ್‌ಗೆ ಕನಿಷ್ಠ ದ್ವಿತೀಯ ಪಿಯುಸಿ ತೇರ್ಗಡೆಯಾಗಿದ್ದು, ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರುವವರು ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು 18 ರಿಂದ 28 ವರ್ಷಗಳ ವಯೋಮಿತಿ ನಿಗದಿಪಡಿಸಲಾಗಿದ್ದು, ಗರಿಷ್ಠ 15 ರಿಂದ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕೋರ್ಸಿನ ಅವಧಿಯಲ್ಲಿ ಊಟ, ವಸತಿ ಹಾಗೂ ಪಠ್ಯ ಸಾಮಗ್ರಿಗಳ ವೆಚ್ಚಗಳನ್ನು ನಿಯಮಾನುಸಾರ ವಿದ್ಯಾರ್ಥಿ ವೇತನದಲ್ಲಿ ಭರಿಸಲಾಗುವುದು.

ಸಾಮಾನ್ಯ ವರ್ಗಕ್ಕೆ ರೂ. 300/- ಹಾಗೂ ಪ.ಜಾ/ಪ.ವರ್ಗ/ಪ್ರವರ್ಗ-1ರ ಅಭ್ಯರ್ಥಿಗಳಿಗೆ ರೂ. 200/- ಅರ್ಜಿ ಶುಲ್ಕವಿದ್ದು, ರಂಗಾಯಣದ ವೆಬ್‌ಸೈಟ್‌ (http://rangayanamysore.karnataka.gov.in) ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 20, 2026ರ ಸಂಜೆ 5.30ರೊಳಗಾಗಿ ರಂಗಾಯ̧ಣ , ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು 570005 ವಿಳಾಸಕ್ಕೆ ತಲುಪುವಂತೆ ಅಂಚೆ ಮೂಲಕ ಕಳುಹಿಸಬೇಕು. ಹೆಚ್ಚಿನ ವಿವರಗಳಿಗಾಗಿ ದೂರವಾಣಿ ಸಂಖ್ಯೆ: 0821-2512639 ಅನ್ನು ಸಂಪರ್ಕಿಸಬಹುದು ಎಂದು ರಂಗಾಯಣ ಉಪ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *