ವಚನಸಾಹಿತ್ಯದಲ್ಲಿ ಅರಿವಿನ ಅನಾವರಣದ ಸಂದೇಶವಿದೆ :

ಹೆಚ್.ವಿಶ್ವನಾಥ್

ದಾವಣಗೆರೆ,ಮಾ.11
ವಚನಸಾಹಿತ್ಯವು ಸಾಹಿತ್ಯ ದರ್ಶನದ ಮೂಲಕ ಕನ್ನಡ
ಸಾಹಿತ್ಯ ಭಂಡಾರವನ್ನು ಶ್ರೀಮಂತಗೊಳಿಸಿದ್ದು, ಅವುಗಳಲ್ಲಿ
ಅರಿವಿನ ಅನಾವರಣವಿದೆ. ಸತ್ಯದ ಸಂದೇಶವಿದೆ ಎಂದು ದಾವಣಗೆರೆ
ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಹೆಚ್.ವಿಶ್ವನಾಥ್
ತಿಳಿಸಿದರು.
ಗುರುವಾರ ಜಿಲ್ಲಾಡಳಿತ ಕಚೇರಿಯಲ್ಲಿ ಆಯೋಜಿಸಿದ್ದ
ಕಾಯಕ ಶರಣರ ಜಯಂತಿಯ ಪ್ರಯುಕ್ತ ದಲಿತ
ಶರಣಕಾರರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ,
12 ನೇ ಶತಮಾನದಲ್ಲಿ ರಚಿಸಿದ ವಚನಗಳು ಕನ್ನಡದ
ಉಪನಿಷತ್ತುಗಳು. ವಚನಕಾರರು ಸಾಹಿತ್ಯದ
ರಸಋಷಿಗಳು ಎಂದರು.
ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಡೋಹರ್
ಕಕ್ಕಯ್ಯ, ಉರಿಲಿಂಗ ಪೆದ್ದಿ, ಸಮಗಾರ ಹರಳಯ್ಯ ಸೇರಿದಂತೆ
ಅನೇಕ ಶರಣರು ತಳಸಮುದಾಯವನ್ನು ಮೇಲೆತ್ತುವಲ್ಲಿ
ಬಹು ಮುಖ್ಯ ಪಾತ್ರವಹಿಸಿದ್ದಾರೆ. ಅದರಲ್ಲೂ ಬಸವಣ್ಣನವರು
ತಳಸಮುದಾಯಕ್ಕೆ ನೀಡಿದ ಬಹು ಮುಖ್ಯವಾದ
ಕೊಡುಗೆಯೆಂದರೆ ಸಂಸ್ಕಾರ ಎಂದು ತಿಳಿಸಿದರು.
ಶರಣರು ತಮ್ಮ ಭಕ್ತಿಯ ಅನಾವರಣೆ ಮಾಡುತ್ತಾ
ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ
ಕ್ರಾಂತಿಯನ್ನುಂಟುಮಾಡಿ ಅನೇಕ ಅಂಕು-
ಡೊಂಕುಗಳನ್ನು ತಿದ್ದಿದ್ದರು. ರಾಜಾಶ್ರಯದಲ್ಲಿ
ಬಂಧಿಯಾಗಿದ್ದ ಸಾಹಿತ್ಯವನ್ನು ಜನಸಾಮಾನ್ಯರಿಗಾಗಿ ಮೀಸಲಿಟ್ಟು
ಅನೇಕ ವಚನಗಳನ್ನು ರಚಿಸುವ ಮೂಲಕ
ಸಾಮಾನ್ಯರನ್ನು ಮೇಲೆತ್ತುವ ಕೆಲಸ ಮಾಡುತ್ತಿದ್ದರು.
ಎತ್ತಣ ಮಾಮರ, ಎತ್ತಣ ಕೋಗಿಲೆ ಎತ್ತಣಿಂದೆತ್ತ
ಸಂಬಂಧವಯ್ಯ? ಬೆಟ್ಟದ ನೆಲ್ಲಿಕಾಯಿ ಸಮುದ್ರದೊಳಗಣ
ಉಪ್ಪು ಎತ್ತಣಿಂದೆತ್ತ ಸಂಬಂಧವಯ್ಯ? ಗುಹೇಶ್ವರ
ಲಿಂಗಕ್ಕೆಯೂ ಎನಗೆಯೂ ಎತ್ತಣಿಂದೆತ್ತ ಸಂಬಂಧವಯ್ಯ
ಎನ್ನುತ್ತಾ ಇಡೀ ಸಾಂಸ್ಕøತಿಕ ಲೋಕದ ಈ ಸಮಾಜವನ್ನು
ಭಕ್ತಿಯ ಮೂಲಕ ಚಿಕಿತ್ಸಾ ದೃಷ್ಟಿಯಿಂದ ನೋಡಿದವರೆಂದರೆ
ವಚನಕಾರರು. ಇನ್ನೂ ಹರಿಹರದ ರಗಳೆಯನ್ನು

ಕಾಣುವುದಾದರೆ, ಕನ್ನಡ ಸಾಹಿತ್ಯ ಲೋಕದಲ್ಲಿ ಅವರನ್ನು
ಗುರುತಿಸುವುದು ಅವನ ಪ್ರತಿಭಟನೆ, ಸ್ವಾತಂತ್ರ್ಯ
ಮತ್ತು ಸ್ವಾಭಿಮಾನದ ಗುಣಗಳಿಗಾಗಿ. ಅದರೊಂದಿಗೆ
ರಾಜನಿಷ್ಠೆಯನ್ನು ನಿರಾಕರಿಸಿ ಶಿವಭಕ್ತಿನಿಷ್ಠೆಯನ್ನು
ಪಾಲಿಸಿದ್ದಕ್ಕಾಗಿ ಎಂಬುದನ್ನು ನೆನಪಿಸಿಕೊಳ್ಳಬೇಕು ಎಂದರು.
ಕ್ರಾಂತಿಕಾರಿ ಬಸವಣ್ಣನವರ ಎರಡು ದಿಟ್ಟೆ ಹೆಜ್ಜೆಗಳು
ಪ್ರಸ್ತುತ ದಿನಮಾನಕ್ಕೂ ಪ್ರೇರಣೆಯಾಗಿದೆ. ಅದರಲ್ಲಿ
ಬಸವಣ್ಣ ತನ್ನ ಅಕ್ಕ ನಾಗಮ್ಮನಿಗೆ ಉಪನಯನ ಸಂಸ್ಕಾರ
ಇಲ್ಲವೆಂದಾಗ ಅಕ್ಕನಿಗಿಲ್ಲದ ಜನಿವಾರ ನನಗೂ ಬೇಡ ಎಂದು
ಅದನ್ನು ನಿರಾಕರಿಸಿದ ಸನ್ನಿವೇಶ ಇಂದಿಗೂ ಪ್ರಸ್ತುತ.
ಮಾನವೀಯತೆಯ ಮೌಲ್ಯಗಳೆ ಇಲ್ಲದಿರುವ ವಿಷಮ
ಸನ್ನಿವೇಷದಲ್ಲಿ ಮಾನವರೆಲ್ಲರು ಒಂದು ಬೇಧವು ಸಲ್ಲದು
ಎಂದು ತಾರತಮ್ಯ ತೊಡೆದು ಹಾಕುವಲ್ಲಿ ಪ್ರಾಮಾಣಿಕವಾಗಿ
ಪ್ರಯತ್ನಿಸಿದ ಕ್ರಾಂತಿಕಾರಕ ಸುಧಾರಣೆಯ ಮೂಲಕ
ಸಮಗಾರ ಹರಳಯ್ಯ ಮತ್ತು ಬ್ರಾಹ್ಮಣ ಮಧುವರಸರ
ಕುಟುಂಬ ಅಂತರಜಾತಿ ವಿವಾಹ ಮಾಡಿಸಿದ ಕ್ರಾಂತಿ ಪುರುಷ ಬಸವಣ್ಣ
ಕಲ್ಯಾಣ ಕ್ರಾಂತಿಗೆ ಕಾರಣರಾದರು ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, 12ನೇ
ಶತಮಾನದಲ್ಲಿ ಶರಣರು ತಮ್ಮ ವಚನಗಳ ಮೂಲಕ
ಸಮಾಜವನ್ನು ತಿದ್ದುವ ಕೆಲಸ ಮಾಡುತ್ತಿದ್ದರು. ಪ್ರಸ್ತುತ
ದಿನಮಾನಗಳಲ್ಲಿ ನಾವೆಲ್ಲರು ವಚನಗಳನ್ನು ಕೇವಲ
ಓದುವುದಲ್ಲದೇ ಅವುಗಳನ್ನು ಅನುಸರಣೆಗೆ ತಂದು
ಸಮಾಜದ ಅಂಕು-ಡೊಂಕುಗಳನ್ನು ತಿದ್ದಬೇಕು. ಹಾಗೂ
ಮುಂದಿನ ಪೀಳಿಗೆಗೂ ಇದರ ಮಹತ್ವ ತಿಳಿಸಬೇಕು ಎಂದು
ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ
ಸಾಕಮ್ಮ ಗಂಗಾಧರ್‍ನಾಯ್ಕ್, ಜಿಲ್ಲಾ ಪಂಚಾಯತ್
ಉಪಕಾರ್ಯದರ್ಶಿ ಆನಂದ್, ಡಿಎಸ್‍ಡಬ್ಲ್ಯೂ ಜಿಲ್ಲಾ ಸಮಾಜ ಕಲ್ಯಾಣ
ಇಲಾಖೆಯ ಉಪನಿರ್ದೇಶಕಿ ಕೌಸರ್ ಬಾನು, ಕನ್ನಡ ಸಂಸ್ಕøತಿ
ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಡಿಎಸ್4
ಕರ್ನಾಟಕ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ಕಾರ್ಯಧ್ಯಕ್ಷ
ಸಂತೋಷ್.ಎಂ.ನೋಟದವರ್, ಕರ್ನಾಟಕ ದಲಿತ ಸಂಘಟನೆಯ
ಒಕ್ಕೂಟದ ಜಿಲ್ಲಾಧ್ಯಕ್ಷ ಸಿ.ಬಸವರಾಜ್, ದಾವಣಗೆರೆ ದಲಿತ
ಮುಖಂಡರಾದ ಚಿದಾನಂದಪ್ಪ, ರವಿಬಾಬು, ಜಿ.ರಾಮಚಂದ್ರಯ್ಯ,
ಹೆಚ್.ಆರ್.ರೇವಣ್ಣ, ಹನುಮಂತಪ್ಪ.ಬಿ., ದೀಪೂ.ಆರ್.ಹೆಗ್ಗೆರೆ,
ತಾಲ್ಲೂಕು ಪಂಚಾಯತ್ ನ ಸದಸ್ಯರಾದ ಆಲೂರು ಲಿಂಗರಾಜ್,
ಮಂಜುನಾಥ್, ಮಲ್ಲೇಶ್, ಮಂಗಳವಾಧ್ಯ ಕಲಾವಿದ ಸಂಘದ
ಜಿಲ್ಲಾಧ್ಯಕ್ಷರಾದ ಹಾಲೇಶ್ ಸೇರಿದಂತೆ ಸಮಾಜದ ವಿವಿಧ
ಸಂಘಟನೆಯ ಮುಖಂಡರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *